ಜಗತ್ತಿನಲ್ಲಿ ತುಂಬಾ ಚಿತ್ರ-ವಿಚಿತ್ರ ಜನರಿದ್ದಾರೆ. ಈ ಸೋಶಿಯಲ್ ಮೀಡಿಯಾದಲ್ಲಂತೂ ತೀರಾ ವಿಭಿನ್ನ ಪ್ರಕಾರದ ಜನರು ದಿನನಿತ್ಯ ನೋಡಲು ಸಿಗುತ್ತಾರೆ. ಇವರು ಮಾಡುವ ನಿತ್ಯ ನೂತನ ಪ್ರಯೋಗಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ನಾವು ಸಹಜವಾಗಿಯೇ ಕುದುರೆ ಸವಾರಿ, ಒಂಟೆ ಸವಾರಿ ಮತ್ತು ಕತ್ತೆಗಳ ಮೇಲೆ ಸವಾರಿ ಮಾಡಿ ತಿರುಗಾಡುವವರನ್ನು ನೋಡಿದ್ದೇವೆ, ಆದರಿಲ್ಲಿ ಭೂಪನೊಬ್ಬ ಉಷ್ಟ್ರಪಕ್ಷಿಯನ್ನು ಸವಾರಿಗಾಗಿ ಬಳಸಿದ್ದಾನೆ.
ಪಕ್ಷಿಗಳಲ್ಲಿ ಎಲ್ಲಕ್ಕೂ ದೊಡ್ಡದಾದ ಪಕ್ಷಿ ಈ ಉಷ್ಟ್ರ ಪಕ್ಷಿಯಾಗಿದೆ. ವಯಸ್ಸಿಗೆ ಬಂದ ದೊಡ್ಡದಾದ ಉಷ್ಟ್ರಪಕ್ಷಿಯ ಎತ್ತರ 2.75 ಮೀಟರ್ ವರೆಗೆ ಇರುತ್ತದೆ. ಈ ಪಕ್ಷಿಯ ತೂಕವು ಸುಮಾರು 65 ರಿಂದ 75 ಕೆಜಿ ಯವರೆಗೆ ಇರುತ್ತದೆ. ಹೆಣ್ಣು ಉಷ್ಟ್ರಪಕ್ಷಿ ಗಂಡು ಉಷ್ಟ್ರಪಕ್ಷಿಗಿಂತಲೂ ಸ್ವಲ್ಪ ಚಿಕ್ಕದಿರುತ್ತದೆ. ಈ ಪಕ್ಷಿ ಇಡುವ ಮೊಟ್ಟೆಯ ತೂಕ ಸುಮಾರು 1.35 ಕೆಜಿಯಷ್ಟಿರುತ್ತದೆ. ಇಂಥ ಪಕ್ಷಿಯನ್ನು ವ್ಯಕ್ತಿಯೊಬ್ಬ ಸವಾರಿಗಾಗಿ ಬಳಸಿದ ವಿಡಿಯೋ ಇಲ್ಲಿ ನೋಡಬಹುದು.
ವಿಡಿಯೋದಲ್ಲಿ ಕಾಣುವ ಹಾಗೆ ವ್ಯಕ್ತಿ ಮೊದಲು ಪಕ್ಷಿಯನ್ನು ಬಲವಂತವಾಗಿ ಹಿಡಿದು ತನ್ನ ಹತೋಟಿಗೆ ತೆಗೆದುಕೊಳ್ಳುತ್ತಾನೆ. ತದನಂತರ ಅದರ ಮೇಲೆ ಜಂಪ್ ಮಾಡಿ ಕುಳಿತುಕೊಂಡು ಕುದುರೆಯ ಹಾಗೆ ರೈಡ್ ಮಾಡಿದ್ದಾನೆ. ಇದು ಪಕ್ಷಿಯಾದರೂ ಭಾರದಿಂದಾಗಿ ಆಕಾಶದಲ್ಲಿ ಇದಕ್ಕೆ ಹೆಚ್ಚಿಗೆ ಹಾರಲು ಬರುವುದಿಲ್ಲ. ವಿಡಿಯೋದಲ್ಲಿ ಪಕ್ಷಿಯು ಸ್ಥೂಲಕಾಯದ ವ್ಯಕ್ತಿಯನ್ನು ತುಂಬಾ ಸಹಜವಾಗಿ ಹೊತ್ತುಕೊಂಡು ಓಡುತ್ತಿರುವುದು ಕಂಡುಬರುತ್ತಿದೆ. ಈ ಆಸ್ಟ್ರಿಚ್ ರೈಡ್ ನೋಡಲು ತುಂಬಾ ತಮಾಷೆಯಾಗಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ ‘ವೈಲ್ಡ್ ಎಕ್ಸ್ ಪ್ಲೋರ್ ಅನಿಮಲ್’ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿ ಸುಮಾರು ಐದೂವರೆ ಸಾವಿರ ಜನರು ಲೈಕ್ ಮಾಡಿದ್ದಾರೆ ಮತ್ತು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
