ಜಗತ್ತಿನ ಏಕೈಕ ಡೈಮಂಡ್ ಕ್ರಾಸಿಂಗ್ ಬಗ್ಗೆ ನಿಮಗೆ ಗೊತ್ತಾ? ಒನ್ ಅಂಡ್ ಓನ್ಲಿ ಈ ರೈಲು ಕ್ರಾಸಿಂಗ್ ಭಾರತದಲ್ಲಿ ಮಾತ್ರ! ಎಲ್ಲಿದೆ ನೋಡಿ…

ಮನುಷ್ಯ ಎಷ್ಟೇ ಅಭ್ಯಸಿಸಿದರೂ, ಎಷ್ಟೇ ವಾಚನ ಮಾಡಿದರೂ ಕಡಿಮೆಯೇ. ಕಾರಣ ಜಗತ್ತಿನಲ್ಲಿ ತಿಳಿದುಕೊಳ್ಳುವುದು ಮಹಾಸಾಗರದಷ್ಟಿದೆ, ಆದರೆ ಮನುಷ್ಯ ತಿಳಿದುಕೊಳ್ಳುವುದು ತನ್ನ ಇಡೀ ಜೀವನದಲ್ಲಿ ಆ ಸಾಗರದ ಒಂದು ಹನಿಯಷ್ಟು ಮಾತ್ರ ಅಂತೆ.

ಸಾಮಾನ್ಯ ಜ್ಞಾನದ ಪ್ರಕಾರ, ನಮ್ಮಲ್ಲಿ ಈ ಡೈಮಂಡ್ ಕ್ರಾಸಿಂಗ್ ಬಗ್ಗೆ ಎಷ್ಟು ಜನರಿಗೆ ಗೊತ್ತು? ನನಗನಿಸುತ್ತೆ ತುಂಬಾ ಕಡಿಮೆ ಜನರಿಗೆ ಈ ವಿಷಯ ಗೊತ್ತಿರಬೇಕು ಅನಿಸುತ್ತದೆ. ಜಗತ್ತಿನ ಏಕೈಕ ಡೈಮಂಡ್ ಕ್ರಾಸಿಂಗ್ ಇರುವದು ನಮ್ಮ ಭಾರತದಲ್ಲಿ ಮಾತ್ರ. ಇದು ಇರುವದು ಮಹಾರಾಷ್ಟ್ರದ ಉಪರಾಜಧಾನಿಯಾದ ನಾಗಪೂರ್ ನಲ್ಲಿ. ನಾಗಪೂರ್ ಪಟ್ಟಣ ದೇಶದ ಕೇಂದ್ರಸ್ಥಾನದಲ್ಲಿದೆ. ಅದರಲ್ಲೂ ಈ ‘ಡೈಮಂಡ್ ಕ್ರಾಸಿಂಗ್’ ಸಹ ದೇಶದ ಮಧ್ಯಭಾಗದಲ್ಲಿಯೇ ಇದ್ದಂತಿಂದೆ.

ಇಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ರೈಲು ಮಾರ್ಗಗಳು ಒಂದಕ್ಕೊಂದು ಸಂಧಿಸಿವೆ. ಇಲ್ಲಿ ದೆಹಲಿ-ಚೆನ್ನೈ ಮತ್ತು ಮುಂಬಯಿ–ಕೋಲ್ಕತಾ ಈ ರೈಲು ಮಾರ್ಗಗಳು ಒಂದನ್ನೊಂದು ಛೇದಿಸಿವೆ.

ಇನ್ನು ಈ ಡೈಮಂಡ್ ಕ್ರಾಸಿಂಗ್ ನ ವಿಶೇಷತೆಯ ಬಗ್ಗೆ ಹೇಳಬೇಕಾದರೆ ಇದು ಜಗತ್ತಿನ ಏಕೈಕ ರೈಲು ಮಾರ್ಗವಾಗಿದೆ. ಇಲ್ಲಿ ಎರಡು ರೈಲು ಮಾರ್ಗಗಳು ಒಂದನ್ನೊಂದು ಛೇದಿಸಿವೆ. ಎರಡು ರೈಲು ಮಾರ್ಗಗಳು ಛೇದಿಸಿದ ಸ್ಥಳಕ್ಕೆ ಡೈಮಂಡ್ ಕ್ರಾಸಿಂಗ್ ಎಂದು ಕರೆಯುತ್ತಾರೆ.