Vedio ; ತನ್ನದೇ ಮದುವೆಯಲ್ಲಿ ಮದುಮಗಳೊಬ್ಬಳೇ ಮಹಿಳೆಯರ ಮಧ್ಯೆ ನಿಂತು ಮಾಡಿದ ಡ್ಯಾನ್ಸ್ ಆಯಿತು ವೈರಲ್…

ಮದುವೆ ಎಂದರೆ ಗದ್ದಲ, ಮದುವೆ ಎಂದರೆ ಯಾರಿಗೂ ಪುರಸೊತ್ತಿಲ್ಲ, ಮದುವೆ ಎಂದರೆ ಓಡಾಟ, ಒಡನಾಟ, ಹುಸಿಗೋಪ, ಮಸ್ತಿ, ಮಜಾಕ್, ಮದುವೆ ಎಂದರೆ ಡ್ಯಾನ್ಸ್ ಇವೆಲ್ಲ ಇದ್ದದ್ದೇ. ಇದು ಇಲ್ಲ ಅಂದರೆ ಅದು ಮದುವೆನೇ ಅಲ್ಲ, ಅಲ್ವೇ?

ಅದರಲ್ಲೂ ಯಾರ ಮನೆಯಲ್ಲಿ ಮದುವೆ ಇರುತ್ತೋ ಅವರಿಗೆ ತಿಂಗಳಿಂದ ಹಿಡಿದು ತಯಾರಿ ಮಾಡಿದರೂ ಕೆಲಸಗಳು ಮುಗಿಯುವುದೇ ಇಲ್ಲ, ಅಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ ಮದುವೆಯನ್ನು ಪೂರ್ಣಗೊಳಿಸಲು. ಎಲ್ಲಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸುವಾಗ ಅನೇಕ ಸಲ ಖುಷಿಗಾಗಿ, ಆನಂದಕ್ಕಾಗಿ, ಸಂತೋಷಕ್ಕಾಗಿ ಡಾನ್ಸ್ ಮಾಡುವುದು ನಡೆದೇ ಇರುತ್ತದೆ. ಮದುವೆ ಅಂದಾಗ ಅನೇಕ ರೀತಿಯ ಜನರು ಬಂದು ಅನೇಕ ರೀತಿಯಲ್ಲಿ ಡ್ಯಾನ್ಸ್ ಮಾಡಿ ಹೋಗುತ್ತಾರೆ. ಇವುಗಳಲ್ಲಿ ಎಷ್ಟೋ ಡ್ಯಾನ್ಸ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸಹ ಆಗುತ್ತವೆ. ಮದುವೆಯ ಮಜಾ ಹಳ್ಳಿಯಲ್ಲಿ ಬರುವಷ್ಟು ಪಟ್ಟಣದಲ್ಲಿ ಬರುವುದಿಲ್ಲ ಎಂಬುದು ಕೆಲವರ ಅನಿಸಿಕೆ.

ಇಂಥ ಮದುವೆಯ ಸಮಾರಂಭದಲ್ಲಿ ಮದುಮಗಳೊಬ್ಬಳು ಮಹಿಳೆಯರ ಅಥವಾ ಗೆಳತಿಯರ ಮಧ್ಯದಲ್ಲಿ ನಿಂತು ತನ್ನದೇ ಮದುವೆಯಲ್ಲಿ ಮಾಡಿದ ಸುಂದರ ಡ್ಯಾನ್ಸ್ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಮದುವೆಗೆ ಜೊತೆಗೂಡಿದ ಎಲ್ಲ ಹೆಣ್ಣು ಮಕ್ಕಳು ಕುಣಿಯುತ್ತಿರುವಾಗ ಮಧ್ಯದಲ್ಲಿಯೇ ಮದುಮಗಳು ಎಂಟ್ರಿ ಮಾಡುತ್ತಾಳೆ. ನಂತರ ಆ ಎಲ್ಲ ಮಹಿಳೆಯರ ಜೊತೆ ಸೇರಿ ಖುಷಿಯಿಂದ, ಆನಂದದಿಂದ ಡ್ಯಾನ್ಸ್ ಮಾಡುತ್ತಾಳೆ. ಮದುಮಗಳು ಮಾಡಿದ ಈ ಸುಂದರವಾದ ಮತ್ತು ಸಿಂಪಲ್ಲಾದ ಡ್ಯಾನ್ಸ್ ನೋಡಲು ತುಂಬಾ ಚಂದವಾಗಿದೆ. ಈ ವೈರಲ್ ಆದ ವಿಶೇಷ ಡ್ಯಾನ್ಸ್ ನಿಮಗಾಗಿ ತಂದಿದ್ದೇವೆ ನೋಡಿ.

ನೋಡಿ ಈ ವಿಡಿಯೋ…

ಪ್ರಸ್ತುತ ಮದುಮಗಳು ಡ್ಯಾನ್ಸ್ ಮಾಡಿದ ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ವೈಶಾಲಿ ಫಂಗಲ್ ಹೆಸರಿನ ಚಾನೆಲ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3 ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.