ಕಿಂಗ್ ಕೋಬ್ರಾ ಮತ್ತು ಬೆಕ್ಕಿನ ನಡುವಿನ ಯುದ್ಧ, ಬೆಕ್ಕಿನ ಧೈರ್ಯದ ಮುಂದೆ ಕೋಬ್ರಾ ಶರಣಾಗಿ ಹಿಂದುರುಗಿತು! ನೋಡಿ ವಿಡಿಯೋ…!!

ಹಾವಿಗೆ ನೋಡಿ ಯಾವುದೇ ಪ್ರಾಣಿ ಅಥವಾ ಮನುಷ್ಯ ಹೆದರುವದು ಸ್ವಾಭಾವಿಕವಾಗಿದೆ. ಹಾವಿನಿಂದ ಎಷ್ಟು ದೂರ ಇರುತ್ತವೆಯೋ ಅಷ್ಟು ಒಳ್ಳೆಯದು ಎಂದು ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ. ಕಿಂಗ್ ಕೋಬ್ರಾದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ಈ ವೀಡಿಯೋದಲ್ಲಿ ಕಿಂಗ್ ಕೋಬ್ರಾ ಅಲ್ಲಿದ್ದ ಬೆಕ್ಕಿಗೆ ಕಡಿಯಲು ಪ್ರಯತ್ನ ಮಾಡುತ್ತಿರುತ್ತದೆ ಆದರೆ ಬೆಕ್ಕು ಮೊದಲೇ ಹಾವಿನ ಜೊತೆಗೆ ಕಾದಾಡಲು ತಯಾರಾಗಿ ಕುಳಿತಿರುತ್ತದೆ. ಈ ಎರಡು ಪ್ರಾಣಿಗಳ ನಡುವೆ ಬಹಳಷ್ಟು ಸಮಯದ ವರೆಗೆ ಕಾದಾಟ ನಡೆಯುತ್ತದೆ. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ನೋಡಿ ನೆಟ್ಟಿಗರು ತುಂಬಾ ಆಶ್ಚರ್ಯ ಪಡುತ್ತಿದ್ದಾರೆ.

ವೀಡಿಯೋದಲ್ಲಿ ನೀವು ನೋಡಬಹುದು, ಕಪ್ಪು ಬಣ್ಣದ ಕಿಂಗ್ ಕೋಬ್ರಾ ತನ್ನ ಬೇಟೆಯನ್ನು ಹುಡುಕಾಡುತ್ತ ಮನೆಯೊಳಗೆ ನುಗ್ಗಿ ಅಲ್ಲಿದ್ದ ಬೆಕ್ಕಿನ ಮೇಲೆ ದಾಳಿ ಮಾಡುತ್ತದೆ. ಆದರೆ ಕೋಬ್ರಾದ ದಾಳಿಗೆ ಬೆಕ್ಕು ಸ್ವಲ್ಪವೂ ಹೆದರದೆ ಮರಳಿ ಕೋಬ್ರಾದೊಂದಿಗೆ ಹೋರಾಟ ಮಾಡುತ್ತದೆ. ಬೆಕ್ಕಿನ ಹೋರಾಟ ಕಂಡು ಹಾವು ಹೆದರಿಕೊಂಡು ತನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಪಲಾಯನ ಮಾಡುತ್ತದೆ.

ವಿಡಿಯೋ ನೋಡಿ

ಈ ಅದ್ಭುತವಾದ ವೀಡಿಯೋ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಇದುವರೆಗೆ ಹದಿನಾಲ್ಕು ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಸಹ ಮಾಡಿದ್ದಾರೆ. ಅಲ್ಲದೆ ಈ ವೀಡಿಯೋಗೆ ತುಂಬಾ ಹಾಸ್ಯಭರಿತ ಕಾಮೆಂಟ್ ಸಹ ಮಾಡುತ್ತಿದ್ದಾರೆ.