Articles

Viral Video: ನಾಯಿಗೆ ಬಿಸಾಡಿದರು ವಿಮಾನದಿಂದ ನೇರ ಭೂಮಿಯ ಮೇಲೆ! ಈ ವಿಡಿಯೋ ನೋಡಿದಾಗ ಗೊತ್ತಾಗುತ್ತದೆ ಸತ್ಯಾಂಶವೇನೆಂದು.

ಎಷ್ಟೋ ಸಲ ನಮ್ಮ ಕಣ್ಣುಗಳಿಗೆ ಎಲ್ಲವೂ ಸರಿಯಾಗಿ ಕಾಣುತ್ತಿದ್ದರೂ ಒಮ್ಮೊಮ್ಮೆ ಬೇರೆಯೇ ಭ್ರಮೆ ನಿರ್ಮಾಣ ಮಾಡುವ ದೃಶ್ಯ ಗೋಚರವಾಗುತ್ತಿರುತ್ತದೆ. ಇದಕ್ಕೆ ಆಪ್ಟಿಕಲ್ ಇಲ್ಯೂಜನ್ ಪ್ರಕಾರದ ಚಿತ್ರ ಅಥವಾ ದೃಷ್ಯಗಳೆಂದು ಕರೆಯುತ್ತಾರೆ. ಇಲ್ಲಿ ಕಾಣಿಸುತ್ತಿರುವದು ನಾವು ನೋಡುವ ನಮ್ಮ ಮನಸ್ಸಿನ ದೃಷ್ಟಿಕೋನದ ಮೇಲೆ ನಿರ್ಭರವಾಗಿರುತ್ತದೆ. ಇದನ್ನೇ ಉದಾಹರಣೆ ಸಹಿತ ಹೇಳಿ ಕೊಡುವ ವಿಡಿಯೋ ಒಂದು ಇಲ್ಲಿ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಹುಟ್ಟು ಹಾಕುತ್ತಿದೆ. ವಿಡಿಯೋ ನೋಡುವಾಗ ಮೊದಲು ಸ್ವಲ್ಪ ಭಯ ಹುಟ್ಟುವುದು ನಂತರ ಸ್ವಲ್ಪೇ ಕ್ಷಣಗಳಲ್ಲಿ ಸತ್ಯಾಂಶದ ಅರಿವಾದಾಗ ಮನಸ್ಸು ನಿರಾಳವಾಗುತ್ತದೆ.

‘ಡೆಲಿ ಮೇಲ್’ ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ನಾಯಿಗೆ ಸಂಬಂಧಿಸಿದ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದೆ. ವಿಡಿಯೋದಲ್ಲಿ ನಾಯಿಯನ್ನು ವಿಮಾನದಿಂದ ಕೆಳಗೆ ಎಸೆಯಲಾಗುತ್ತಿದೆ ಎಂಬಂತೆ ಭಾಸವಾಗುತ್ತದೆ. ನಂತರದ ಕೆಲವೇ ಕ್ಷಣಗಳಲ್ಲಿ ನೋಡುವವರಿಗೆ ಸತ್ಯ ಗೊತ್ತಾಗಿ ಹಾಯೆನಿಸುತ್ತದೆ. ಕಾರಣ ನಾಯಿಯು ಆಕಾಶದಿಂದ ಅಲ್ಲ ಅದು ಅಲ್ಲಿಯೇ ಇದ್ದ ಹಿಮದ ಮೇಲೆ ಬೀಳುತ್ತಿದೆ ಎಂದು ಗೊತ್ತಾಗುತ್ತದೆ. ಆಮೇಲೆ ನಾಯಿಯು ಮುಕ್ತವಾಗಿ ತನ್ನ ಮಾಲೀಕನ ಜೊತೆಗೆ ಚಕ್ಕಂದ ಹಾಕಲು ಶುರು ಮಾಡುತ್ತದೆ.

ನೋಡಿ ಈ ವಿಡಿಯೋ…

Leave a Comment

Your email address will not be published. Required fields are marked *