ಅರಿಶಿಣ ಶಾಸ್ತ್ರದಲ್ಲಿ ಕುಣಿಯುವಾಗಲೇ ಯುವಕ ಬಿದ್ದನು ಯುವತಿಯ ಪ್ರೀತಿಯಲ್ಲಿ; ಮೊಬೈಲ್ ನಂಬರ್ ಕೊಟ್ಟ ಬಗೆ ನೋಡಿ ನೇಟಿಜನ್ಸ್ ಸುಸ್ತು! ವಿಡಿಯೋ ವೈರಲ್…

ಎಪ್ರಿಲ್ ಮತ್ತು ಮೇ ತಿಂಗಳಗಳು ಬಂದರೆ ಸಾಕು ಎಲ್ಲಿ ನೋಡಿದಲ್ಲಿ ಮದುವೆಗಳೇ ಮದುವೆಗಳು. ಮದುವೆಯ ಮೊದಲ ನಡೆಯುವ ಅರಿಶಿಣ ಶಾಸ್ತ್ರವೂ ಸಹ ತುಂಬಾ ಮಹತ್ವದಾಗಿರುತ್ತದೆ. ಮಂಟಪದಲ್ಲಿ ಅಥವಾ ಮನೆಯ ಮುಂದೆ ಮಸ್ತಿ ಜೊತೆಗೆ ಎಲ್ಲರೂ ಕುಣಿಯುವುದು ಮತ್ತು ನೃತ್ಯ ಮಾಡುವುದು ಭರ್ಜರಿಯಾಗಿ ನಡೆದಿರುತ್ತದೆ. ಇಂಥ ಈ ರೀತಿಯ ಬೇರೆಯವರ ಸಮಾರಂಭಗಳಲ್ಲಿ ಅನೇಕ ಸಲ ಅಪರಿಚಿತರ ಭೇಟಿಯಾಗಿ ಮನಸ್ಸುಗಳು ಒಂದಾಗುವ ಘಟನೆಗಳನ್ನು ಕೇಳಿದ್ದೇವೆ. ಈಗ ಇದೇ ರೀತಿಯ ಅರಿಶಿನ ಶಾಸ್ತ್ರದಲ್ಲಿ ನಡೆದ ರೋಚಕ ಘಟನೆಯ ವಿಡಿಯೋ ಒಂದು ಸದ್ಯ ಜೋರಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಯುವಕನೊಬ್ಬ ಕುಣಿಯುತ್ತಿರುವಾಗ ಒಂದು ಹುಡುಗಿಯ ಜೊತೆ ಪ್ರೀತಿಯಾಗುತ್ತದೆ. ಅತ್ತ ಕಡೆಯಿಂದಲೂ ಆತನಿಗೆ ಗ್ರೀನ್ ಸಿಗ್ನಲ್ ಸಿಗುತ್ತದೆ. ಆಗ ಇಬ್ಬರ ಕಾಂಟ್ಯಾಕ್ಟ್ ಹೇಗೆ ಆಗುವುದು? ಎಂಬ ಸಮಸ್ಯೆಗೆ ಆತ ಐಡಿಯಾ ಹುಡುಕಿಕೊಳ್ಳುತ್ತಾನೆ. ಅದೇನೆಂದರೆ ಮೊಬೈಲ್ ನಂಬರ್. ಎಲ್ಲರ ಮುಂದೆ ಮೊಬೈಲ್ ನಂಬರ್ ಹೇಗೆ ಕೊಡಬೇಕು ಎಂದು ವಿಚಾರ ಮಾಡಲು ಅದಕ್ಕೊಂದು ಮಾರ್ಗ ಹುಡುಕಿದ್ದಾನೆ.

ಇದಕ್ಕಾಗಿ ಮೊದಲು ನೀವು ಈ ವಿಡಿಯೋ ನೋಡಿ…

ವೀಡಿಯೋ ನೋಡಿದ ನಿಮಗೆ ನಗು ತಡೆಯಲಿಕ್ಕಿಲ್ಲ.

ಈ ವೈರಲ್ ವಿಡಿಯೋದಲ್ಲಿ ಯುವಕ ಬ್ಯಾಂಡ್ ಬಾಜಾ ಮ್ಯೂಸಿಕ್ ಮೇಲೆ ಕುಣಿಯುತ್ತಿರುವುದು ಕಂಡುಬರುತ್ತದೆ. ಹೀಗೆ ಕುಣಿಯುತ್ತಿರುವಾಗ ಆತ ಅಲ್ಲಿಯೇ ಕುಳಿತ ಹುಡುಗಿಯ ಪ್ರೀತಿಯಲ್ಲಿ ಬೀಳುತ್ತಾನೆ. ಹುಡುಗಿಯ ಕಡೆಯಿಂದಲೂ ಆತನಿಗೆ ಗ್ರೀನ್ ಸಿಗ್ನಲ್ ಸಿಕ್ಕ ನಂತರ ಯುವಕ ತನ್ನ ಆಕೆಗೆ ಮೊಬೈಲ್ ನಂಬರ್ ನೀಡುವ ಸಲುವಾಗಿ ಒಂದು ವಿನೂತನ ಐಡಿಯಾ ಹುಡುಕುತ್ತಾನೆ. ಮತ್ತು ತನ್ನ ನೃತ್ಯದಲ್ಲಿ ಸ್ವಲ್ಪ ಚೇಂಜಸ್ ಮಾಡಿಕೊಳ್ಳುತ್ತಾನೆ. ಯುವಕ ಕುಣಿಯುತ್ತಾ ಕುಣಿಯುತ್ತಾ ತನ್ನ ಎರಡು ಕೈಗಳನ್ನು ಮೇಲೆ ಮಾಡುತ್ತಾ ಬೆರಳುಗಳ ಸಹಾಯದಿಂದ ನಂಬರ್ ಹೇಳಲು ಪ್ರಯತ್ನಿಸಿದ್ದಾನೆ. ಹುಡುಗಿಯು ಸಹ ಇದರಲ್ಲಿ ತುಂಬಾ ಜಾಣೆ ಇದ್ದಾಳೆ. ಕಾರಣ ಮೊದಲೇ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತು ಹುಡುಗಿಯು ಆತ ಬೆರಳುಗಳ ಸಹಾಯದಿಂದ ಸೈನ್ ಮಾಡಿ ತೋರಿಸಿದ ನಂಬರ್ಗಳನ್ನು ಪಟಪಟನೆ ಮೊಬೈಲ್ನಲ್ಲಿ ಟೈಪ್ ಮಾಡಿಕೊಳ್ಳುತ್ತಾಳೆ. ಇನ್ನೇನು ಹುಡುಗಿಯು ಹುಡುಗನಿಗೆ ಅಲ್ಲಿಂದಲೇ ಕಾಲ್ ಮಾಡಿ ಬಿಡುತ್ತಾಳೆ. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ

ಅರಿಶಿನ ಶಾಸ್ತ್ರ ದಲ್ಲಿ ನಡೆದ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ಸಾವಿರಾರು ಜನರು ಈ ವಿಡಿಯೋವನ್ನು ನೋಡಿದ್ದಾರೆ ಮತ್ತು ಈ ವಿಡಿಯೋ ಇಷ್ಟವಾಗಿ ಬೇರೆ ಬೇರೆ ಪ್ಲಾಟ್ಫಾರ್ಮ್ ಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಜೊತೆಗೆ ವಿಡಿಯೋದ ಕೆಳಗೆ ತುಂಬಾ ಮಜವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.