ಟೂರಿಸ್ಟ್ ವೆಹಿಕಲ್ ನಲ್ಲಿ ಹಠಾತ್ ಸಿಂಹ ಬಂದು ವ್ಯಕ್ತಿಗೆ ಅಪ್ಪಿಕೊಂಡಾಗ! ವಿಡಿಯೋ ನೋಡಿ ಮೈನವಿರೇಳುವದು ನಿಶ್ಚಿತ…

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಕಾಡು ಪ್ರಾಣಿಗಳ ಅನೇಕ ವಿಶೇಷವಾದ ವಿಡಿಯೋಗಳು ನೋಡಲು ಸಿಗುತ್ತವೆ. ಇವುಗಳಲ್ಲಿ ಕೆಲವು ನಕ್ಕು ನಲಿಸಿದರೆ ಇನ್ನು ಕೆಲವು ಭಯ ಹುಟ್ಟಿಸುತ್ತವೆ. ಇತ್ತೀಚೆಗೆ ಕಾಡಿನಲ್ಲಿ ಸಿಂಹದ ಜೊತೆಗೆ ನಡೆದ ಒಂದು ಘಟನೆ ತುಂಬಾ ರೋಚಕವಾಗಿತ್ತು. ಈ ವಿಡಿಯೋ ನೋಡಿದಾಗ ನಮ್ಮ ಕಣ್ಣುಗಳೇ ನಂಬಲು ಅಸಾಧ್ಯವಾಗುತ್ತದೆ.

ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದಾಗ ನಿಜಕ್ಕೂ ಬೆವರು ಹರಿಯುತ್ತದೆ. ವಿಡಿಯೋದಲ್ಲಿ ಕಂಡುಬರುವ ದೃಶ್ಯ ನ ಪ್ರಕಾರ ಒಂದು ಸಿಂಹ ಓಪನ್ ಟೂರಿಸ್ಟ್ ವೆಹಿಕಲ್ ನಲ್ಲಿ ಹಠಾತ್ತನೆ ಏರಿ ಒಳಗೆ ಹೋಗುತ್ತದೆ. ಒಳಗೆ ಸೇರಿದ ನಂತರ ಒಬ್ಬ ಪ್ರವಾಸಿಗನ ಮೇಲೆ ಹಾಯ್ದು ಮುಂದೆ ಹೋಗಿ ಇನ್ನೊಬ್ಬ ಪ್ರವಾಸಿಗನಿಗೆ ತುಂಬಾ ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ. ಇದನ್ನು ನೋಡುತ್ತಿರುವಾಗ ಯಾರಿಗೆ ಆಗಲಿ ಭಯ ಹುಟ್ಟುವದು ಸಹಜ. ಆದರೆ ಸಿಂಹದ ಪ್ರೀತಿಯನ್ನು ನೋಡಿದ ನಂತರ ಅಲ್ಲಿದ್ದವರಿಗೆ ಹೋದ ಜೀವ ಬಂದಂತಾಗುತ್ತದೆ. ಮತ್ತು ಸಿಂಹದ ಬೆನ್ನ ಮೇಲೆ ಎಲ್ಲರೂ ಪ್ರೀತಿಯಿಂದ ಕೈಯಾಡಿಸಲು ಶುರುಮಾಡುತ್ತಾರೆ.

ವಿಡಿಯೋ ನೋಡಿ

ಇಂಟರ್ನೆಟ್ ನಲ್ಲಿ ವೈರಲ್ ಆದ ಈ ವಿಡಿಯೋವನ್ನು ಇಲ್ಲಿಯವರೆಗೆ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ಈ ದೃಶ್ಯ ನೋಡಲು ನಿಜಕ್ಕೂ ತುಂಬಾ ಆಶ್ಚರ್ಯವನ್ನುಂಟುಮಾಡುತ್ತದೆ ಎಂದಿದ್ದಾರೆ. ಇನ್ನೊಬ್ಬ ಈ ಸಿಂಹ ತುಂಬಾ ಪ್ರೀತಿಯ ಪ್ರಾಣಿಯಾಗಿದೆ ಎಂದರೆ ಮತ್ತೊಬ್ಬ ಅದು ಒಂದು ವೇಳೆ ಹಸಿದಿದ್ದರೆ ಕಥೆ ಬೇರೆಯೇ ಆಗಿರುತ್ತಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾನೆ.