ಚಲಿಸುತ್ತಿರುವ ಕಾರಿನಿಂದ ಹಠಾತ್ ಓಪನ್ ಆದ ಡೋರ್ ಗೆ ಮಗುವೊಂದು ಹಿಡಿದು ನೇತಾಡುತ್ತಿರುವ ದೃಶ್ಯದ ವಿಡಿಯೋ ವೈರಲ್!
ಇಂದಿನ ಪರಿಸ್ಥಿತಿಯಲ್ಲಿ ರಸ್ತೆಯ ಮೇಲೆ ಓಡಾಡುವ ಅತಿಯಾದ ವಾಹನಗಳಿಂದಾಗಿ ಯಾವಾಗ ಯಾರ ಜೊತೆಗೆ ಏನು ಘಟಿಸುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ರಸ್ತೆಯ ಮೇಲೆ ಕಾರೊಂದು ಚಲಿಸುತ್ತಿರುವಾಗ ಹಠಾತ್ ಡೋರ್ ಓಪನ್ ಆಗಿದೆ. ಆಗ ಅಲ್ಲಿಯ ಮನ ಕಲಕುವ ದೃಶ್ಯ ಹಿಂದಿನ GoPro ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ದೃಶ್ಯವನ್ನು ಒಮ್ಮೆಲೆ ನೋಡಿದಾಗ ಹೃದಯ ನಿಂತ ಹಾಗೆ ಅನುಭವವಾಗುತ್ತದೆ.
ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, GoPro ಕ್ಯಾಮೆರಾ (ಹೆಲ್ಮೆಟ್ ಗೆ ಅಳವಡಿಸಲಾಗುವ ಕ್ಯಾಮೆರಾ) ಅಳವಡಿಸಿಕೊಂಡ ವ್ಯಕ್ತಿಯ ಎದುರಿಗೆ ಒಂದು ಕಾರು ಮುಂದೆ ಹೋಗುತ್ತಿದೆ. ಆಗ ಆ ಕಾರಿನ ಬಾಗಿಲು ಹಠಾತ್ತನೆ ತೆರೆದಿದೆ. ಕಾರಿನ ಬಾಗಿಲು ಓಪನ್ ಆಗುತ್ತಲೇ ಅಲ್ಲಿ ಮಗುವೊಂದು ತನ್ನ ಒಂದು ಕಾಲು ಒಳಗೆ ಹಾಗೂ ಇನ್ನೊಂದು ಕಾಲು ಹೊರಗಡೆ ನೇತಾಡುತ್ತಿದೆ, ಆಗ ಕಾರಿನ ಹ್ಯಾಂಡಲ್ ಸ್ಥಳದಲ್ಲಿ ತನ್ನ ಎರಡು ಕೈಗಳನ್ನು ಹಿಡಿದಿದೆ. ಮಗು ಒಮ್ಮೆಲೆ ತಾನು ಅರಿಯದೆ ಮಾಡಿದ ತಪ್ಪಿಗೆ ಡೋರ್ ಓಪನ್ ಆಗಿದ್ದನ್ನು ನೋಡಿ ಬೆಚ್ಚಿ ಬಿದ್ದು ಜೋರಾಗಿ ಕಿರುಚಿದೆ. ಈ ಸಂದರ್ಭದಲ್ಲಿ ಮಗು ತಾನು ಹಿಡಿದ ಎರಡು ಕೈಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಬಿಡದೆ ತುಂಬಾ ಗಟ್ಟಿಯಾಗಿ, ಭದ್ರವಾಗಿ ಹಿಡಿದು ಹಾಗೆಯೇ ನೇತಾಡುತ್ತಿರುವದನ್ನು ನೀವು ಈ ವಿಡಿಯೋದಲ್ಲಿ ಗಮನಿಸಬಹುದು. ಅದೃಷ್ಟವಶಾತ್ ಮಗುವಿಗೆ ಯಾವುದೇ ರೀತಿಯ ಕೂದಲೆಳೆಯಷ್ಟು ಸಹ ಗಾಯವಾಗಿಲ್ಲ, ಮತ್ತು ಅಲ್ಲಿ ಯಾವುದೇ ಅನಾಹುತ ಘಟಿಸಿಲ್ಲ. ಈ ಎಲ್ಲಾ ದೃಶ್ಯವು ಕಾರಿನ ಹಿಂದೆ ಬರುತ್ತಿರುವ ಬೈಕ್ ಸವಾರನ GoPro ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗು ಕಾರಿನಲ್ಲಿ ಆಟ ಆಡುತ್ತಾ ಆಡುತ್ತಾ ಡೋರ್ ನ ಲಾಕ್ ಓಪನ್ ಆಗಿರಬಹುದು. ಅಥವಾ ತಂದೆ ಡೋರ್ ಲಾಕ್ ಮಾಡಲು ಮರೆತಿರಬಹುದು. ಹೀಗಾಗಿ ಈ ಘಟನೆ ನಡೆದಿದೆ ಎಂದು ತಿಳಿದುಬರುತ್ತದೆ. ಅದಕ್ಕಾಗಿ ಮಕ್ಕಳನ್ನು ಆದಷ್ಟು ಮಧ್ಯದಲ್ಲಿಯೇ ಕೂಡಿಸಬೇಕು ಹಾಗೂ ಕಾರು ಚಲಾಯಿಸುವ ಮೊದಲು ಡೋರ್ ಗಳು ಸರಿಯಾಗಿ ಲಾಕ್ ಆಗಿವೆಯೋ ಅಥವಾ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು.
ವೀಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಸಾವಿರಾರು ಜನರು ನೋಡಿ ತಮ್ಮ ಕಳವಳದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.