ಹುಡುಗರ ಬೈಕ್ ಸ್ಟಂಟ್ ನೋಡಿ ಸಾಕಾಗಿದ್ದರೆ, ಹುಡುಗಿಯ ಬೈಕ್ ಸ್ಟಂಟ್ ಒಮ್ಮೆ ನೋಡಿಯೇ ಬಿಡಿ, ಈ ವಿಡಿಯೋದಲ್ಲಿ!
ಹದಿಹರೆಯದ ವಯಸ್ಸಿನಲ್ಲಿ ಹುಡುಗರು ಮೂಗುದಾರವಿಲ್ಲದ ಗೂಳಿಯಂತೆ ವರ್ತಿಸುವುದು ಸಹಜ. ಈ ರೀತಿ ವರ್ತಿಸುವಾಗ ಎಷ್ಟೋ ಸಲ ಹುಡುಗರು ತಮ್ಮ ಜೀವವನ್ನೇ ಅಪಾಯದಲ್ಲಿ ಸಿಲುಕಿಸಿಕೊಳ್ಳುತ್ತಾರೆ. ಈಗಿನ ಕಾಲದಲ್ಲಿ ಹುಡುಗರಷ್ಟೇಯಲ್ಲ ಹುಡುಗಿಯರೂ ಸಹ ಸ್ಟಂಟ್ ಗಳನ್ನು ಮಾಡುವುದರಲ್ಲಿ ಕಮ್ಮಿ ಇಲ್ಲ ಎಂದು ತೋರಿಸುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾಣಲು ಸಿಗುತ್ತಿದೆ.
ಈ ವಿಡಿಯೋದಲ್ಲಿ ಹುಡುಗಿಯು ರಸ್ತೆಯ ಮೇಲೆ ಬೈಕ್ ಚಲಾಯಿಸುವಾಗ ಹಿಂದೆ ಮುಂದೆ ಓಡಾಡುತ್ತಿರುವ ವಾಹನಗಳ ಮಧ್ಯದಲ್ಲಿಯೇ ಬೈಕ್ ಮೇಲೆ ನಿಂತು ಸ್ಟಂಟ್ ಮಾಡುತ್ತಿರುವದು ಕಂಡುಬರುತ್ತಿದೆ. ಇಲ್ಲಿಯವರೆಗೆ ಈ ರೀತಿಯ ಸ್ಟಂಟ್ ಗಳನ್ನು ಹೆಚ್ಚು ಕಡಿಮೆ ಬರೀ ಹುಡುಗರಷ್ಟೇ ಮಾಡುವುದನ್ನು ಹೆಚ್ಚಾಗಿ ನೋಡಿದ್ದೇವೆ. ಆದರೆ ಇಲ್ಲಿ ಮಾತ್ರ ಹದಿಹರಿಯದ ಯುವತಿ ಮಾಡುತ್ತಿರುವ ಈ ಸ್ಟಂಟ್ ನೋಡಿ ನೇಟಿಜನ್ಸ್ ಗಳು ಆಶ್ಚರ್ಯ ವ್ಯಕ್ತ ಮಾಡುತ್ತಿದ್ದಾರೆ. ಆಕೆ ಸ್ಟಂಟ್ ಮಾಡುವಾಗ ದೊಡ್ಡದಾದ ಬೈಕನ್ನು ಹಿಂದಿನ ಒಂದೇ ಚಕ್ರದ ಮೇಲೆ ನಡೆಸುತ್ತಾ ಮುಂದಿನ ಚಕ್ರವನ್ನು ಸಂಪೂರ್ಣವಾಗಿ 180° ಡಿಗ್ರಿಯಲ್ಲಿ ಮೇಲಕ್ಕೆತ್ತಿದ್ದಾಳೆ. ಜೊತೆಗೆ ಅದರ ಮೇಲೆ ನಿಂತು, ಕುಳಿತು ವಿವಿಧ ಕಸರತ್ತುಗಳನ್ನು ಲೀಲಾಜಾಲವಾಗಿ ಮಾಡುತ್ತಿರುವುದು ಕಂಡು ಬರುತ್ತಿದೆ. ಆಕೆ ಮಾಡುತ್ತಿರುವ ಈ ದೃಶ್ಯವನ್ನು ಸುತ್ತಮುತ್ತ ಸಂಚರಿಸುತ್ತಿರುವ ವಾಹನಗಳಲ್ಲಿ ಕುಳಿತವರು ಶೂಟ್ ಮಾಡಿಕೊಳ್ಳುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ smashstants ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಬೈಕ್ ಮೇಲೆ ಸ್ಟಂಟ್ ಮಾಡಿದ ಈ ಯುವತಿಯು ವಿಡಿಯೋವನ್ನು ಇಲ್ಲಿಯವರೆಗೆ 2.8 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಮತ್ತು ಸುಮಾರು ಒಂದೂವರೆ ಲಕ್ಷ ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.