ವೀಡಿಯೋ; ಒಳ್ಳೆಯ ಮೊಬೈಲನ್ನೇ ಕಲ್ಲಿನಿಂದ ಚಚ್ಚಿ ಯುವಕ ಅದೇನು ತೋರಿಸಬೇಕೆಂದಿದ್ದ ಗೊತ್ತಿಲ್ಲ? ಆದರೆ ಅಲ್ಲಿ ನಡೆದದ್ದೇ ಬೇರೆ..!
ಸೋಶಿಯಲ್ ಮೀಡಿಯಾದಲ್ಲಿ ಯುವಕನು ತನ್ನ ಮೊಬೈಲ್ ಮೇಲೆ ಮಾಡಿದ ಯುನಿಕ್ ಪ್ರಯೋಗ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವಪೀಳಿಗೆ ತಮ್ಮ ಮೊಬೈಲ್ ಗಳೊಂದಿಗೆ ಏನಾದರೂ ಹೊಸ ಹೊಸ ಎಕ್ಸ್ಪರಿಮೆಂಟ್ ಮಾಡುತ್ತಿರುತ್ತಾರೆ. ಇಲ್ಲಿಯೂ ಒಬ್ಬ ಯುವಕ ತನ್ನ ಒಳ್ಳೆಯ ಕಂಡೀಶನ್ ನಲ್ಲಿರುವ ಮೊಬೈಲ್ ಜೊತೆಗೆ ಒಂದು ಪ್ರಯೋಗ ಮಾಡಿದ್ದಾನೆ, ಆದರೆ ಅದು ರಿಸಲ್ಟ್ ಮಾತ್ರ ಬೇರೆಯೇ ಕೊಟ್ಟಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಯುವಕ ಮೊದಲು ತನ್ನ ಮೊಬೈಲ್ ಸರಿಯಾದ ಕಂಡೀಶನ್ ನಲ್ಲಿ ಇದ್ದದ್ದನ್ನು ತೋರಿಸುತ್ತಾನೆ. ಹಾಗೆ ನೋಡಲಾಗಿ ಆತ ತೋರಿಸುವ ಮೊಬೈಲ್ ಹೊಚ್ಚ ಹೊಸದಾದ ಮೊಬೈಲ್ ಇದೆಯೆಂದೇ ತಿಳಿದುಬರುತ್ತದೆ. ನಂತರ ಆತನ ತಲೆಯಲ್ಲಿ ಏನು ಬರುತ್ತದೋ ಗೊತ್ತಿಲ್ಲ? ಅಥವಾ ಆತ ಮಾಡುತ್ತಿರುವ ಪ್ರಯೋಗದಿಂದ ನೋಡುಗರಿಗೆ ಅದೇನು ತೋರಿಸಬೇಕೆಂದ್ದನೋ ಗೊತ್ತಿಲ್ಲ? ಮರುನಿಮಿಷ ಆ ಮೊಬೈಲನ್ನು ಒಂದು ದೊಡ್ಡ ಬಂಡೆಗಲ್ಲಿನ ಮೇಲಿಟ್ಟು ಇನ್ನೊಂದು ಕಲ್ಲನ್ನು ತೆಗೆದುಕೊಂಡು ಅದಕ್ಕೆ ಒಮ್ಮೆಲೆ ಚಚ್ಚಲು ಶುರುಮಾಡುತ್ತಾನೆ. ಎರಡೇ ಎರಡು ಬಾರಿ ಕಲ್ಲಿನಿಂದ ಚಚ್ಚಲು ಮೊಬೈಲ್ ಗೆ ಒಮ್ಮೆಲೆ ಬೆಂಕಿ ಹತ್ತಿಕೊಳ್ಳುತ್ತದೆ. ಕ್ಷಣದಲ್ಲಿ ಮೊಬೈಲ್ ತನ್ನಂತಾನೆ ಸುಟ್ಟುಕೊಳ್ಳುತ್ತಾ ಹೊಗೆ ಎಬ್ಬಿಸಿ ಬಿಡುತ್ತದೆ. ಇದನ್ನು ನೋಡಿದ ಯುವಕ ಗಾಬರಿಯಾಗಿ ಹಠಾತ್ತನೆ ಮೊಬೈಲನ್ನು ಕೈಯಿಂದ ಎಸೆದುಬಿಡುತ್ತಾನೆ. ಯುವಕ ಈ ರೀತಿಯ ಪ್ರಯೋಗ ಮಾಡಿ ನೋಡುಗರಿಗೆ ಅದೇನು ತೋರಿಸಬೇಕೆಂದಿದ್ದ ಗೊತ್ತಿಲ್ಲ, ಆದರೆ ಅಲ್ಲಿ ನಡೆದದ್ದು ಮಾತ್ರ ಬೇರೆಯೇ ಆಗಿತ್ತು.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ giedde ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.