ಕೊಬ್ರಾದಿಂದ ಕೂದಲೆಳೆಯ ಅಂತರದಲ್ಲಿ ಬಚಾವ್ ಆದ ಚಲಿಸುತ್ತಿದ್ದ ಬೈಕ್ ಸವಾರ! ಅದೃಷ್ಟದ ದೃಶ್ಯ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆ.
ವ್ಯಕ್ತಿಯ ಜೊತೆಗೆ ಅನಾಹುತಗಳು ಯಾವಾಗ, ಎಲ್ಲಿ, ಹೇಗೆ ಘಟಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ದೃಶ್ಯವೊಂದು ಸೆರೆಯಾಗಿದೆ. ಈ ದೃಶ್ಯವನ್ನು ನೋಡಿದಾಗ ನಿಜಕ್ಕೂ ಭೀತಿಯಿಂದ ಮೈನವಿರೇಳುವದು.
ಕಾಡಿನ ಮಧ್ಯೆದಲ್ಲಿರುವ ದಾರಿಯಿಂದ ಬೈಕ್ ಸವಾರನೊಬ್ಬ ತನ್ನದೇ ವೇಗದಲ್ಲಿ ಹೋಗುತ್ತಿದ್ದಾನೆ. ಆತನ ಹಿಂದೆ ಒಂದು ಕಾರು ಫಾಲೋ ಮಾಡುತ್ತಿದೆ. ಆ ಕಾರಿನಲ್ಲಿ ಡ್ಯಾಶ್ ಕ್ಯಾಮೆರಾ ಅಳವಡಿಸಿದೆ. ಬೈಕ್ ಸವಾರ ತನ್ನದೇ ವೇಗದಲ್ಲಿ ಮುಂದೆ ಮುಂದೆ ಸಾಗುತ್ತಿರುವಾಗ ದಾರಿಯಲ್ಲಿ ಅಡ್ಡವಾಗಿ ಹಠಾತ್ ಕೋಬ್ರಾ ಒಂದು ಬಂದಿದೆ. ಕೋಬ್ರಾ ರಸ್ತೆ ದಾಟಿ ಅತ್ತ ಬದಿಗೆ ಹೋಗುವಾಗ ಬೈಕ್ ಸವಾರ ಎದುರಿಗೆ ಬರಲು ಕೋಬ್ರಾ ತನ್ನ ಸ್ವರಕ್ಷಣೆಗಾಗಿ ಆತನ ಮೇಲೆ ಜಂಪ್ ಮಾಡುತ್ತ ಅಟ್ಯಾಕ್ ಮಾಡಿದೆ. ಆದರೆ ಬೈಕ್ ಸವಾರ ಮಾತ್ರ ತುಂಬಾ ಅಲರ್ಟ್ ಆಗಿರುವುದರ ಕಾರಣ ತನ್ನ ಕಾಲುಗಳನ್ನು ಕ್ಷಣದಲ್ಲಿ ಮೇಲೆತ್ತಿಕೊಂಡಿದ್ದಾನೆ ಮತ್ತು ಹಾವಿನ ಬೈಟ್ ನಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ. ಒಂದೇ ಒಂದು ಕ್ಷಣ ಹೆಚ್ಚು ಕಡಿಮೆಯಾಗಿದ್ದರೂ ಕೋಬ್ರಾ ಬೈಕ್ ಸವಾರನಿಗೆ ಕಚ್ಚಿಯೇ ಬಿಡುತ್ತಿತ್ತು. ಈ ಸಂಪೂರ್ಣ ಘಟನೆ ಬೈಕ್ ಸವಾರನ ಹಿಂದೆ ಚಲಿಸುತ್ತಿದ್ದ ಡ್ಯಾಶ್ ಕ್ಯಾಮೆರಾದಲ್ಲಿ ಶೂಟ್ ಆಗಿದೆ.
ವಿಡಿಯೋ ನೋಡಿ
OMG motorcyclist attacked by snake pic.twitter.com/elGAHgN7G4
— Crazy Panda (@CrazyPa50956318) September 25, 2020
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಂ ನಲ್ಲಿ ಕ್ರೇಜಿ ಪಾಂಡಾ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.