Video; ವಧುವಿನ ಮನೆಯ ಮುಂದೆ ವರನ ಮಿತ್ರರ ಆಟ; ವರನ ಜೊತೆ ‘ಕುದುರೆಯನ್ನೇ’ ಹವೆಯಲ್ಲಿ ಎತ್ತಿ ತಿರುಗಿಸಿದ ಭೂಪರು..!

 

ಮದುವೆಯ ವಿಚಿತ್ರ ಪ್ರಸಂಗಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ನೋಡಲು ಸಿಗುತ್ತಿವೆ. ಭಾರತದ ಮೂಲೆಗಳಲ್ಲಿ ಮದುವೆಯಲ್ಲಿ ನಡೆಯುವ ವಿವಿಧ ರೂಢಿ ಪರಂಪರೆಗಳ ದೃಶ್ಯಗಳನ್ನು ದಿನನಿತ್ಯ ಸೋಶಿಯಲ್ ಮೀಡಿಯಾ ಮುಖಾಂತರ ಮನೆಯಲ್ಲಿಯೆ ಕುಳಿತು ನೋಡುತ್ತಿದ್ದೇವೆ. ಈ ದೃಶ್ಯಗಳು ಎಷ್ಟೋ ಸಲ ತುಂಬಾ ವಿಚಿತ್ರವಾಗಿಯೂ ಇರುತ್ತವೆ.

ಈಗ ಇದೇ ರೀತಿಯ ತುಂಬಾ ವಿಚಿತ್ರವಾದ ದೃಶ್ಯ ಒಂದು ವಿಡಿಯೋದಲ್ಲಿ ಸೆರೆಯಾಗಿದೆ. ಇಲ್ಲಿ ಮದುವೆಯ ಸಂಭ್ರಮ ಜೋರಾಗಿ ನಡೆದಿದೆ. ಈ ಮದುವೆಯ ಸಂದರ್ಭದಲ್ಲಿ ವರ ತನ್ನ ಮೆರವಣಿಗೆಯನ್ನು ತೆಗೆದುಕೊಂಡು ವಧುವಿನ ಮನೆಗೆ ಬಂದಿದ್ದಾನೆ. ಅಷ್ಟರಲ್ಲಿಯೇ ಆತನ ಬಂಧುವರ್ಗ ಮತ್ತು ಗೆಳೆಯರು ತುಂಬಾ ವಿಚಿತ್ರವಾದ ಕೆಲಸ ಒಂದನ್ನು ಮಾಡಿದ್ದಾರೆ. ಈ ಮದುವೆಯ ಸಮಾರಂಭದಲ್ಲಿ ವರನನ್ನು ವಧುವಿನ ಮನೆಯ ಮುಂದೆಯೇ ಹವೆಯಲ್ಲಿ ಎತ್ತಿಕೊಂಡಿದ್ದಾರೆ. ಇದರಲ್ಲೇನು ವಿಶೇಷ ಎನ್ನಬಹುದು. ವಿಶೇಷ ಇರುವುದು ಇಲ್ಲಿಯೇ. ಏನೆಂದರೆ ಇವರು ಹವೆಯಲ್ಲಿ ಎತ್ತಿರುವುದು ಬರಿ ವರನನ್ನು ಅಷ್ಟೇ ಅಲ್ಲ, ಆ ವರನ ಜೊತೆಗೆ ಭಾರವಾದ ಕುದುರೆ ಮತ್ತು ಆ ಕುದುರೆಯ ಮಾಲೀಕನಿಗೆ. ಹೀಗೆ ಇಬ್ಬರನ್ನು ಎತ್ತಿಗೆ ಅಲ್ಲಿಯೇ ವರ್ತುಲಾಕಾರವಾಗಿ ತಿರುಗಿಸಿದ್ದಾರೆ.

ನೋಡಿ ಈ ವಿಡಿಯೋ.

ಇದು ಮದುವೆಯಲ್ಲಿಯ ಒಂದು ರೂಢಿ ಅಥವಾ ಆಚರಣೆಯ ಭಾಗವಾಗಿರಬಹುದು. ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ honey._.event_official ಹೆಸರಿನ ಪೇಜ್ ನಿಂದ ಅಪ್ಲೋಡ್ ಮಾಡಲಾಗಿದೆ. ನೂರಾರು ಜನರು ಈ ವಿಡಿಯೋ ಲೈಕ್ ಮಾಡುವುದರೊಂದಿಗೆ ತಮ್ಮ ಪ್ರತಿಕ್ರಿಯೆಗಳನ್ನು ಸಹ ವ್ಯಕ್ತ ಮಾಡಿದ್ದಾರೆ.