ಕಳ್ಳ ತನ್ನ ಪರಮ ಕರ್ತವ್ಯಕ್ಕೆ ಮನೆಯಲ್ಲೇನೋ ನುಗ್ಗಿದ; ಆದರೆ ಆತನ ದುರದೃಷ್ಟದ ಫಜೀತಿ ನೋಡಿ ಈ ವಿಡಿಯೋದಲ್ಲಿ…

ಕಳ್ಳರು ಮಾಡುವ ಈ ಕಪ್ಪು ಕೆಲಸ ಒಮ್ಮೊಮ್ಮೆ ಅವರಿಗೆ ದುಬಾರಿಯಾಗಿ ಪರಿಣಮಿಸುತ್ತದೆ. ಇದೇ ರೀತಿ ಕಳ್ಳನೊಬ್ಬ ಕಳ್ಳತನ ಮಾಡಲು ಹೋದಲ್ಲಿ ತುಂಬಾ ಫಜೀತಿಯ ಪರಿಸ್ಥಿತಿ ಎದುರು ಮಾಡಿಕೊಂಡಿದ್ದಾನೆ. ಆತನ ಈ ಪರಿಸ್ಥಿತಿಯನ್ನು ನೋಡಿ ನಗು ತಡೆಯುವುದಿಲ್ಲ.

ವಿಡಿಯೋ ದೃಶ್ಯದಲ್ಲಿ ಕಂಡುಬರುವ ಹಾಗೆ ಒಂದು ಮನೆಯಲ್ಲಿ ಯಾರು ಇಲ್ಲದ್ದನ್ನು ತಿಳಿದುಕೊಂಡ ಕಳ್ಳ ಕನ್ನ ಹಾಕಲು ಪ್ಲಾನ್ ಮಾಡಿ ಮನೆಯ ಕಡೆಗೆ ಹೋಗಿದ್ದಾನೆ. ಮನೆಯ ಸುತ್ತಮುತ್ತ ಯಾರು ಇಲ್ಲದ್ದನ್ನು ಗಮನಿಸಿದ ನಂತರ ಗೇಟ್ ಮೇಲೆ ಏರಿ ಟೆರೇಸ್ ಹತ್ತುವ ಪ್ರಯತ್ನ ಮಾಡಿದ್ದಾನೆ. ಇನ್ನೇನು ಟೆರೆಸ್ ಏರಬೇಕು ಎನ್ನುವಷ್ಟರಲ್ಲಿ ಒಳಗಿನಿಂದ ಒಂದು ದೊಡ್ಡ ನಾಯಿ ಬೊಗಳುತ್ತಾ ಬಂದಿದೆ. ಇನ್ನು ತಾನು ಸಿಕ್ಕಿಬೀಳುವುದು ಗ್ಯಾರಂಟಿ ಅನ್ನಿಸಿದಾಗ ಓಡಿ ಹೋಗಬೇಕೆಂದು ಪ್ರಯತ್ನ ಮಾಡುವಷ್ಟರಲ್ಲಿ ಹೊರಗಿನಿಂದ ಒಂದು ನಾಯಿ ಬಂದು ಕೆಳಗಿನಿಂದ ಕಚ್ಚಲು ಪ್ರಯತ್ನಿಸುತ್ತಿದೆ. ಎರಡು ನಾಯಿಗಳ ಬಲೆಯಲ್ಲಿ ಸಿಕ್ಕ ಕಳ್ಳನ ಫಜೀತಿ ನೋಡಿದಾಗ ನಕ್ಕು ನಕ್ಕು ಸಾಕಾಗುತ್ತದೆ.

ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾದ ಈ ವಿಡಿಯೋದಲ್ಲಿ ಕಳ್ಳನು ಮನೆಯ ಒಳಗಿನ ಮತ್ತು ಹೊರಗಿನ ಹೀಗೆ ಎರಡು ನಾಯಿಗಳು ಜಾಲದಲ್ಲಿ ಪಕ್ಕಾ ಸಿಕ್ಕಿಬಿದ್ದಿದ್ದಾನೆ. ಈ ಫಜೀತಿಯಲ್ಲಿ ಕಳ್ಳನು ಗೇಟಿನ ಮೇಲೆಯೇ ನೇತಾಡುತ್ತಿದ್ದಾನೆ. ಈ ತಮಾಷೆಯ ವಿಡಿಯೋವನ್ನು ಕೆಲವೇ ದಿನಗಳಲ್ಲಿ ಲಕ್ಷಾವಧಿ ಜನರು ನೋಡಿ ನಕ್ಕಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ gieddee ಈ ಹೆಸರಿನಿಂದ ಶೇರ್ ಮಾಡಲಾಗಿದೆ.

ವಿಡಿಯೋ ನೋಡಿ

 

View this post on Instagram

 

A post shared by Gidda company (@gieddee)