ಸುಮ್ಮನೆ ನಿಂತಿದ್ದ ಹೋರಿಯನ್ನು ‘ಬಾ ನನ್ನನ್ನು ಹೊಡೆ’ ಎಂದು ಕೆಣಕುತ್ತಿದ್ದ ವ್ಯಕ್ತಿ, ಸಿಟ್ಟಿಗೆದ್ದು ಸರಿಯಾದ ಜಾಗದಲ್ಲಿ ಗೂಸಾ ಕೊಟ್ಟ ಹೋರಿ!! ವಿಡಿಯೋ ನೋಡಿ…

ನಾವು ಯಾವದೇ ವ್ಯಕ್ತಿಯನ್ನು ಸುಮ್ಮ ಸುಮ್ಮನೆ ರೇಗಿಸಿದರೆ ಆ ವ್ಯಕ್ತಿ ನಮ್ಮನ್ನು ಸುಮ್ಮನೆ ಬಿಡುವದಿಲ್ಲ ಎಂಬುದು ನಮಗೆಲ್ಲ ಗೊತ್ತಿದ್ದ ಸಂಗತಿ. ಆದರೆ ಇದೆ ರೂಲ್ಸ್ ಪ್ರಾಣಿಗಳಿಗೂ ಸಹ ಅನ್ವಯಿಸಬಹುದು. ಪ್ರಾಣಿಗಳು ಸಹ ತಮ್ಮಷ್ಟಕ್ಕೆ ತಾವು ಇರುತ್ತವೆ ಒಂದು ವೇಳೆ ಅವುಗಳ ತಂಟೆಗೆ ಹೋದರೆ ಅವುಗಳು ಸಹ ಸುಮ್ಮನೆ ಇರುವದಿಲ್ಲ. ಈ ನಿಸರ್ಗದಲ್ಲಿಯ ಯಾವುದೇ ಪ್ರಾಣಿ ಮನುಷ್ಯರಿಗೆ ಹಾನಿಯುಂಟು ಮಾಡುವದಿಲ್ಲ ತಮ್ಮ ಪ್ರಾಣಕ್ಕೆ ಅಪಾಯ ಬಂದಿದೆ ಅನ್ನೋ ವಿಚಾರ ಮನದಲ್ಲಿ ಬಂದಾಗ ಅಥವಾ ಸುಮ್ಮನೆ ಕೆಣಕಿದಾಗ ಪ್ರಾಣಿ ಮನುಷ್ಯನ ಮೇಲೆ ಹಲ್ಲೆ ಮಾಡುವದು ಸಹಜ.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಾಡಿದುಣ್ಣೋ ಮಾರಾಯ ಅನ್ನೋ ಗಾದೆಯ ಹಾಗೆ ಘಟನೆ ನಡೆದಿದೆ. ವಿಡಿಯೋದಲ್ಲಿ ಒಂದು ಹೋರಿಯನ್ನು ಒಂದು ಕಂಬಕ್ಕೆ ಕಟ್ಟಲಾಗಿರುತ್ತದೆ. ಅದನ್ನು ಕಂಡು ಒಬ್ಬ ವ್ಯಕ್ತಿ ಅದರ ಎದುರುಗಡೆ ಹೋಗಿ ‘ಬಾ ನನ್ನನ್ನು ಹೊಡೆ’ ಎಂದು ಅದಕ್ಕೆ ಕೆಣಕುತ್ತಾನೆ. ಹೋರಿ ಸುಮ್ಮನೆ ನಿಂತ ಜಾಗದಲ್ಲೇ ತಲೆ ಅಲ್ಲಾಡಿಸುತ್ತ ನಿಲ್ಲುತ್ತದೆ ಆದರೂ ಸಹ ಈ ವ್ಯಕ್ತಿ ಕೆಣಕುವದನ್ನು ಬಿಡುವುದೇ ಇಲ್ಲ. ಆಗ ಆ ಹೋರಿ ಸಿಟ್ಟಿಗೆದ್ದ ಸ್ವಲ್ಪ ಮುಂದೆ ಬಂದು ಆತನ ಹೊಟ್ಟೆಯಲ್ಲಿ ತನ್ನ ಕೊಂಬುಗಳಿಂದ ಗೂಸಾ ಕೊಡುತ್ತದೆ. ಈ ವೀಡಿಯೋ ನೋಡಿದ ಮೇಲೆ ಗೊತ್ತಾಗುತ್ತೇ ಗೂಸಾ ಯಾವ ರೀತಿ ಕೊಟ್ಟಿದೆ ಅಂತ. ಆದರೆ ಆ ವ್ಯಕ್ತಿಯ ಗತಿ ಮುಂದೇನಾಗಿದೆ ಎಂಬುದು ಮಾತ್ರ ಈ ವೀಡಿಯೋದಲ್ಲಿ ತೋರಿಸಿಲ್ಲ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ yournaturegram ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಎರಡು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ. ಅಲ್ಲದೆ ಹಲವಾರು ವಿಚಿತ್ರವಾದ ಕಾಮೆಂಟ್ ಸಹ ಮಾಡಿದ್ದಾರೆ, ಕೆಲವರು ಮಾಡಿದುಣ್ಣೋ ಮಾರಾಯ ಅಂದರೆ ಇನ್ನೊಬ್ಬರು ‘ಆ ಬೈಲ್ ಮೂಜೆ ಮಾರ್’ ಅಂತ ಕಾಮೆಂಟ್ ಮಾಡಿದ್ದಾರೆ.