ಅಂಗಾಂಗದ ಕುರಿತು ಕೆಟ್ಟದ್ದಾಗಿ ಕಾಮೆಂಟ್ ಮಾಡಿದ ಅಭಿಮಾನಿಗೆ ತಕ್ಕ ಉತ್ತರ ನೀಡಿದ ನಿತ್ಯಾ ಮೆನನ್!!
ನಿತ್ಯಾ ಮೆನನ್ ಅವರು ಚಿರಪರಿಚಿತರಾದ ಭಾರತೀಯ ನಟಿ ಮತ್ತು ಹಿನ್ನೆಲೆ ಗಾಯಕಿ. ಇವರು ಕನ್ನಡ, ತೆಲಗು, ತಮಿಳು ಮತ್ತು ಮಳಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ. ಇವರು ತೆಲಗಿನಲ್ಲಿ ‘ಗುಂಡೆ ಜಾರಿ ಗಲಂತೈಯಿಂದಿ’ ಮತ್ತು ‘ಮಳ್ಳಿ ಮಳ್ಳಿ ಇದಿ ರಾನಿ ರೋಜು’ ಚಿತ್ರಗಳಿಗೆ ಎರಡು ಬಾರಿ ಫ಼ಿಲ್ಮ್ ಫ಼ೀರ್ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪಾದಾರ್ಪಣೆ ಮಾಡುವ ಸಮಯದಲ್ಲಿ ನಟಿಯರು ತುಂಬಾ ಸ್ಲಿಮ್ ಹಾಗೂ ಫಿಟ್ ಆಗಿರುತ್ತಾರೆ. ಆದರೆ ಕೆಲವು ವರ್ಷಗಳ ನಂತರ ಅವರ ದೇಹದಲ್ಲಿ ಬದಲಾವಣೆಯಾಗುವದರ ಜೊತೆಗೆ ಅವರ ಸೌಂದರ್ಯದಲ್ಲಿ ಸಹ ಬದಲಾವಣೆಯಾಗುವದು ನಾವು ಕಾಣಬಹುದು. ಇದರ ವಿರುದ್ಧವಾಗಿ ಬಾಲಿವುಡ್ ನಟಿಯರು ತಾವು ಮೊದಲಿನಿಂದಲೂ ಫಿಟ್ ಹಾಗೂ ಫೈನ್ ಆಗಿರುತ್ತಾರೆ. ಆದರೆ ಅವರು ತಮ್ಮ ದೇಹದ ಸೌಂದರ್ಯ ಕಾಪಾಡಿಕೊಳ್ಳಲು ಮತ್ತು ದೇಹ ಫಿಟ್ ಆಗಿರಲು ಜಿಮ್ ಹಾಗೂ ವಿವಿಧ ಯೋಗಸನಗಳು ಮಾಡುವ ಹವ್ಯಾಸವನ್ನು ಮೊದಲಿಂದಲೂ ರೂಢಿ ಮಾಡಿಕೊಂಡಿರುತ್ತಾರೆ. ಹೀಗಾಗಿ ಅವರು ಸದಾ ಫಿಟ್ ಮತ್ತು ಫೈನ್ ಆಗಿ ಕಾಣುತ್ತಾರೆ.
ನಿತ್ಯ ಮೆನನ್ ಅವರು ‘7o ಕ್ಲಾಕ್’ ಎಂಬ ಚಿತ್ರದ ಮುಖಾಂತರ ಚಂದನವನದಲ್ಲಿ ಪಾದಾರ್ಪಣೆ ಮಾಡಿದರು. ಅವರು ಇದುವರೆಗೆ ಐದು ಭಾಷೆಗಳಲ್ಲಿ ನಟಿಸಿ ಎಲ್ಲರ ಮನದಲ್ಲಿ ಮನೆ ಮಾಡಿದ್ದಾರೆ. ಇವರ ನಟನೆ ಕಂಡು ಅದೆಷ್ಟೋ ಜನರು ಇವರ ಅಭಿಮಾನಿಗಳಾಗಿದ್ದಾರೆ. ನಿತ್ಯ ಅವರು ನೋಡಲು ತುಂಬಾನೇ ಸ್ಮಾರ್ಟ್ ಆಗಿದ್ದಾರೆ. ಆದರೆ ಅವರ ದೇಹದ ತೂಕದಲ್ಲಿ ಮಾತ್ರ ಇತರ ನಟಿಯರಿಗಿಂತ ಸ್ವಲ್ಪ ಜಾಸ್ತಿನೇ ಇದೆ. ಇದಕ್ಕಾಗಿ ಕೆಲವು ಜನರು ಅವರ ಅಂಗಾಂಗದ ಕುರಿತು ಮೊನ್ನೆಯಷ್ಟೇ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಇದನ್ನು ತಿಳಿದ ನಿತ್ಯ ಮೆನನ್ ಅವರು ಕೋಪಗೊಳ್ಳದೆ ಅವರಿಗೆ ತಕ್ಕ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ನಿತ್ಯ ಮೆನನ್ ಅವರು ಉತ್ತರ ನೀಡಿದ್ದು ಏನೆಂದರೆ, ‘ಸಾಮಾನ್ಯವಾಗಿ ನಾನು ಎಲ್ಲರಿಗಿಂತ ಸ್ವಲ್ಪ ದಪ್ಪ ಆಗಿದ್ದೇನೆ ಅದರ ಕುರಿತು ಅಭ್ಯಂತರವೆನಿಲ್ಲಾ, ಮೊದಲು ನಾನು ಸಹ ತುಂಬಾ ತೆಳ್ಳಗಾಗಿದ್ದೆ, ಸಿನಿಮಾ ರಂಗದಲ್ಲಿ ಪಾದಾರ್ಪಣೆ ಮಾಡುವಾಗ ನನ್ನ ದೇಹದ ತೂಕ ಅಷ್ಟೊಂದು ಹೆಚ್ಚಿರಲಿಲ್ಲ , ಆದರೆ ದಿನದಿಂದ ದಿನಕ್ಕೆ ನನ್ನ ತೂಕ ಹೆಚ್ಚುತ್ತಾ ಹೋಗಿದೆ. ಸಿನಿಮಾ ಶೂಟಿಂಗ್ ಮಾಡುವದಕ್ಕಾಗಿ ಹೆಚ್ಚು ಸಮಯ ಕೊಟ್ಟಿದೆ, ಆ ಸಮಯದಲ್ಲಿ ನನಗೆ ನನ್ನ ದೇಹದ ಕುರಿತು ಕಾಳಜಿ ವಹಿಸಲು ಸಮಯವೇ ಕೊಡಲಿಲ್ಲ, ಹೀಗಾಗಿ ಊಟ ಮಾಡಲು ಸಹ ಸರಿಯಾಗಿ ಟೈಮ್ ಸಿಗುತ್ತಿರಲಿಲ್ಲ, ಯಾವಾಗ ಟೈಮ್ ಸಿಗುವದೋ ಆವಾಗ ಏನಾದರೂ ತಿನ್ನುವದು ಮಾಡಿದೆ ಇದರಿಂದ ನನ್ನ ದೇಹದ ತೂಕದಲ್ಲಿ ಏರುಪೇರು ಅಗಲು ಶುರು ವಾಯಿತು.
ಅಷ್ಟೇ ಅಲ್ಲದೆ ಕೆಲವರ ಹಾರ್ಮೋನ್ಗಳ ಸಮಸ್ಯೆಯಿಂದಾಗಿ ದೇಹದ ತೂಕ ಸಹ ಹೆಚ್ಚಾಗುವದು. ಆ ಸಮಸ್ಯೆ ನನ್ನಲ್ಲಿ ಸಹ ಇರಬಹುದು ಅದಕ್ಕಾಗಿಯೇ ನನ್ನ ತೂಕ ಹೆಚ್ಚಾಗಿ ನನ್ನ ದೇಹದ ರಚನೆಯಲ್ಲಿ ಬದಲಾಗಿರಬಹುದು, ಇದರಿಂದ ನನಗೇನು ಸಮಸ್ಯೆ ಇಲ್ಲ. ನಾನು ಹೇಗೆ ಇದ್ದರು ಸಹ ನಾನು ಚೆನ್ನಾಗಿ ಕಾಣಿಸುತ್ತೇನೆ ಅನ್ನೋ ಭರವಸೆ ನನಗಿದೆ. ಹೀಗಾಗಿ ನನ್ನ ದೇಹದ ಕಡೆಗೆ ಗಮನವಹಿಸಿ ಮಾತನಾಡಬೇಡಿ, ನನ್ನ ದೇಹದ ಕುರಿತು ಮತನಾಡುವದರ ಬದಲಾಗಿ ನಿಮ್ಮ ನಿಮ್ಮ ಕೆಲಸದ ಕಡೆಗೆ ಗಮನ ಕೊಡಿ, ಅದು ನಿಮಗೂ ಹಾಗೂ ನಿಮ್ಮವರ ಸಲುವಾಗಿ ಸಹ ಒಳ್ಳೆಯದು’ ಎಂದು ಮರುತ್ತರ ನೀಡಿದ್ದಾರೆ.
ನಿತ್ಯ ಮೆನನ್ ದಪ್ಪ ಆಗಿರುವ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಅವರ ಕೆಲ ಫೋಟೋಗಳಿಗೆ ನೆಟ್ಟಿಗರು ಅವರ ದೇಹದ ಅಂಗಾಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರೂ ಸಹಿತ ನಟಿ ನಿತ್ಯ ಮೆನನ್ ಯಾವುದರ ಬಗ್ಗೆನೂ ಕ್ಯಾರೆ ಮಾಡದೆ ನಿತ್ಯ ಮೆನನ್ ಅವರರು ತಮ್ಮ ಕೆಲಸದಲ್ಲಿ ತೊಡಗಿಕೊಂಡು ಬ್ಯುಸಿ ಆಗಿದ್ದಾರೆ.