Video; ಊರ ಜಾತ್ರೆಯಲ್ಲಿ ಎಲ್ಲರೆದುರು ವ್ಯಕ್ತಿ ಸ್ಟಂಟ್ ಮಾಡುತ್ತಿರುವಾಗಲೇ ಹಠಾತ್ ನಡೆದು ಹೋಯಿತು ಈ ಅನಾಹುತ…
ನಮ್ಮ ದೇಶಗಳಲ್ಲಿ ಜಾತ್ರೆ ಉತ್ಸವಗಳಿಗೇನು ಕಮ್ಮಿ ಇಲ್ಲ. ಪ್ರತಿಯೊಂದು ಊರಿನಲ್ಲಿ ಕಡಿಮೆ ಎಂದರೆ ವರ್ಷಕ್ಕೆ ಚಿಕ್ಕವು ದೊಡ್ಡವು ಕೂಡಿ 5 ರಿಂದ 10 ಉತ್ಸವಗಳು ಅಥವಾ ಪರ್ವಗಳು ನಡೆದೇ ಇರುತ್ತವೆ. ಪ್ರತಿ ಜಾತ್ರೆ ಉತ್ಸವಗಳು ಬೇರೆಬೇರೆ ಪದ್ಧತಿಗಳನ್ನು ಒಳಗೊಂಡಿರುತ್ತವೆ. ಈ ಸಂದರ್ಭದಲ್ಲಿ ಕೆಲವು ಜನರು ನೆರೆದ ಜನಸಮುದಾಯದ ಮುಂದೆ ಸ್ಟಂಟ್ ಗಳನ್ನು ಸಹ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಈ ರೀತಿಯ ಸ್ಟಂಟ್ ಗಳು ಮಾಡುಗರಿಗೆ ದುಬಾರಿಯಾಗಿ ಪರಿಣಮಿಸುತ್ತವೆ ಎಂಬುದು ಈ ವಿಡಿಯೋದಿಂದ ಕಂಡು ಬರುತ್ತದೆ.
ಹಳ್ಳಿಗಳಲ್ಲಿ ಹೆಚ್ಚಾಗಿ ಈ ರೀತಿಯ ಘಟನೆಗಳು ವರದಿಯಾಗುತ್ತವೆ. ಇದಕ್ಕೆ ಕಾರಣ ಸರಿಯಾದ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಇರುವದು. ಪ್ರಸ್ತುತ ವಿಡಿಯೋದಲ್ಲಿ ಜಾತ್ರೆ ಅಥವಾ ಯಾವುದೋ ಒಂದು ಉತ್ಸವದ ದೃಶ್ಯ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಉದ್ದನೆಯ ಎರಡು ಕೋಲುಗಳಿಗೆ ಹಿಡಿದು ತುಂಬಾ ಎತ್ತರದ ಮೇಲೆ ನೇತಾಡುತ್ತ ಸ್ಟಂಟ್ ಬಾಜಿ ಮಾಡುತ್ತಿದ್ದಾನೆ. ಊರ ಜನರು ಆತನಿಗೆ ನೋಡುತ್ತಾ ಹಲಗೆಯನ್ನು ಬಾರಿಸುತ್ತಾ ಚಿಯರ್ಸ್ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಹಠಾತ್ತನೆ ವ್ಯಕ್ತಿಯು ಕೈಯಲ್ಲಿ ಹಿಡಿದ ನೇತಾಡುತ್ತಿದ್ದ ಕೋಲು ಒಮ್ಮೆಲೆ ಮಧ್ಯದಲ್ಲಿ ಮುರಿದು ಬಿಟ್ಟಿದೆ. ಕೋಲು ಮುರಿಯುವದೇ ತಡ ಕ್ಷಣದಲ್ಲಿ ವ್ಯಕ್ತಿ ತಲೆ ಕೆಳಗಾಗಿ ನೆಲಕ್ಕೆ ಬಂದು ಅಪ್ಪಳಿಸಿದ್ದಾನೆ. ಯಾಕಾದರೂ ಜನ ಈ ರೀತಿ ಯಾವುದೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದೆ ಜೀವಕ್ಕೆ ಅಪಾಯದಲ್ಲಿ ಸಿಲುಕಿಸಿ ಕುಟುಂಬಕ್ಕೂ ಅರ್ಧ ದಾರಿಯಲ್ಲಿ ಬಿಟ್ಟು ಹೋಗುವಂಥ ಕೆಲಸ ಮಾಡುತ್ತಾರೆ ಗೊತ್ತಿಲ್ಲ?
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ವಿವೇಕ್ ಗುಪ್ತಾ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 1 ಮಿಲಿಯನ್ ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಮತ್ತು 40 ಸಾವಿರಕ್ಕೂ ಹೆಚ್ಚು ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.