ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಇಂಪಾದ ಹಾಡು ಕೇಳಿ ನೆಟಿಜನ್ಸ್ ಶಾಕ್! ವಿಡಿಯೋ ವೈರಲ್.
ಸೋಶಿಯಲ್ ಮೀಡಿಯಾದ ಕಾರಣದಿಂದಾಗಿ, ಪ್ರತಿಭೆಗಳು ತಾನಾಗಿಯೇ ಹೊರಗೆ ಬರುತ್ತಿವೆ. ಮತ್ತು ನೋಡುನೋಡುವಷ್ಟರಲ್ಲಿ ಎಲ್ಲ ಕಡೆಗೂ ಪ್ರಚಾರ ಮತ್ತು ಪ್ರಸಿದ್ಧಿಯನ್ನು ಗಿಟ್ಟಿಸಿರುತ್ತಾರೆ. ಈಗ ಇದೇ ರೀತಿ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಹಾಡಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಇಂಪಾಗಿ ಹಾಡು ಹಾಡುವ ವ್ಯಕ್ತಿಯು ದಿನನಿತ್ಯ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡದೆ ಹೊಟ್ಟೆ ತುಂಬುವುದಿಲ್ಲ. ಆತನ ಹೆಸರು ರಾಕೇಶ್ ಇದ್ದು ಈತ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಾನೆ. ಈತ ಗ್ರಾಜುಯೇಟ್ ಡಿಗ್ರಿಯೂ ಹೊಂದಿದ್ದಾನೆ. ಎಲ್ಲಿಯೂ ಕೆಲಸ ಸಿಗದ ಕಾರಣದಿಂದಾಗಿ ಸದ್ಯಕ್ಕೆ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಬಾಲಿವುಡ್ ನ ಫೇಮಸ್ ಸಿಂಗರ್ ಆದ ಕುಮಾರ ಸಾನು ಅವರ ಧ್ವನಿಯನ್ನು ಹೋಲುವ ಇವರ ಧ್ವನಿ ತುಂಬಾ ಅದ್ಭುತವಾಗಿ ಕೇಳಿಬರುತ್ತಿದೆ. ರಾಕೇಶ್ ಅವರ ಹಾಡನ್ನು ಕೇಳಿದ ನಂತರ ಕೆಲವರು ಇದು ಎಡಿಟೆಡ್ ಇದೆ ಎಂಬ ಮಾತನ್ನೂ ಹೇಳಿದ್ದಾರೆ. ಆದರೆ ಎಡಿಟ್ ಮಾಡದ ಬೇರೆ ಹಾಡಿನ ವಿಡಿಯೋ ಸಹ ಕೆಳಗೆ ಅಪ್ಲೋಡ್ ಮಾಡಲಾಗಿದೆ. ಒಟ್ಟಿನಲ್ಲಿ ರಾಕೇಶ್ ಅವರ ಧ್ವನಿ ನಿಜಕ್ಕೂ ಕರ್ಣ ಮಧುರವಾಗಿದೆ. ಕುಮಾರ್ ಸಾನು ಅವರು ಹಾಡಿದ ಕೆಲವು ಹಾಡುಗಳನ್ನು ಹಾಡಿದ್ದಾರೆ. ಒಟ್ಟು 2 ನಿಮಿಷ 18 ಸೆಕೆಂಡಿನ ಈ ವಿಡಿಯೋದಲ್ಲಿ ರಾಕೇಶ್ ಅವರು ತುಂಬಾ ಅದ್ಭುತವಾಗಿ ಹಾಡುವುದರೊಂದಿಗೆ ತಮ್ಮ ಕಂಠದಲ್ಲಿರುವ ಜಾದು ತೋರಿಸಿದ್ದಾರೆ.
ಗ್ರಾಜುಯೇಟ್ ವರೆಗೆ ಶಿಕ್ಷಣವನ್ನು ಪಡೆದರೂ ಕೆಲಸವಿಲ್ಲದೆ ಇವರು ತಮ್ಮ ಉದರ ನಿರ್ವಾಹಕ್ಕೆ ಇಟ್ಟಂಗಿ ಭಟ್ಟಿಯಲ್ಲಿ ಕೆಲಸವನ್ನು ಮಾಡುತ್ತಾರೆ. ತಮ್ಮ ಕೆಲಸದ ಜೊತೆಗೆ ಹಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಈಗ ತಮ್ಮ ಕೆಲಸದ ಸ್ಥಳದಲ್ಲಿ ಇವರು ಹಾಡಿದ ಹಾಡು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
कुमार सानू जी कहाँ हैं.❤️ pic.twitter.com/FIQgw8chTJ
— Awanish Sharan (@AwanishSharan) June 6, 2022
ಅವರ ಈ ವಿಡಿಯೋವನ್ನು ಅವನೀಶ್ ಶರಣ್ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ 3 ದಿನಗಳ ಹಿಂದೆಯೇ ಪೋಸ್ಟ್ ಮಾಡಿದ್ದಾರೆ. ಹಾಡಿನ ಅವರ ಈ ವಿಡಿಯೋವನ್ನು ಇಲ್ಲಿಯವರೆಗೆ 6 ಲಕ್ಷಕ್ಕೂ ಮೀರಿ ಜನರು ನೋಡಿದ್ದಾರೆ. ಜೊತೆಗೆ 32 ಸಾವಿರಕ್ಕೂ ಹೆಚ್ಚು ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.
ये लीजिये श्री मान https://t.co/4wBw45hpBI
— सूरज पंडित🇮🇳 (@surajsh08483653) June 6, 2022