ಬ್ರಿಡ್ಜ್ ಮೇಲೆ ನೇತಾಡುತ್ತಿದ್ದ ವ್ಯಕ್ತಿ ಚಲಿಸುವ ಟ್ರೈನ್ ನಿಂದ ಕ್ಷಣದಲ್ಲಿ ಲೂಟಿ ಮಾಡಿದ ಮೊಬೈಲ್! ದೃಶ್ಯ ಕ್ಯಾಮೆರಾದಲ್ಲಿ ಸೆರೆ.
ಈ ಆರ್ಟಿಕಲ್ ನಲ್ಲಿ ಬರುವ ದೃಶ್ಯ ಅಥವಾ ವಿಡಿಯೋ ನೋಡಿದರೂ ನಂಬಲಿಕ್ಕೆ ಆಗುವುದಿಲ್ಲ. ಸ್ವಲ್ಪವೂ ವಿಶ್ವಾಸವೇ ಕೂಡುವುದಿಲ್ಲ. ಪ್ರಸ್ತುತ ಘಟನೆ ಬಿಹಾರದ ಬೇಗುಸರಾಯ್ ನಲ್ಲಿ ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬ ಬ್ರಿಜ್ ಗೆ ನೇತಾಡುತ್ತಾ ಟ್ರೈನಿನ ಡೋರ್ ನಲ್ಲಿ ಕುಳಿತು ಪ್ರವಾಸ ಮಾಡುತ್ತಿರುವ ಪ್ರವಾಸಿಗನ ಮೊಬೈಲ್ ಲೂಟಿ ಮಾಡಿದ್ದಾನೆ. ಈ ದೃಶ್ಯ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸುವುದು. ವ್ಯಕ್ತಿಯು ಮೊಬೈಲ್ ಲೂಟಿ ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊದಲಸಲ ವಿಡಿಯೋ ನೋಡುವಾಗ ನೋಡುಗರಿಗೆ ಏನೂ ಕಾಣಿಸುವುದಿಲ್ಲ ಮತ್ತು ಏನೂ ತಿಳಿಯುವುದಿಲ್ಲ. ಯಾವಾಗ ಸ್ಲೋ ಮೋಷನ್ ನಲ್ಲಿ ವಿಡಿಯೋ ನೋಡುತ್ತೇವೆಯೋ ಆಗ ಮಾತ್ರ ಗೊತ್ತಾಗುತ್ತದೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಇಬ್ಬರು ಪ್ರವಾಸಿಗರು ಟ್ರೈನಿನ ಬಾಗಿಲಲ್ಲಿ ಕುಳಿತಿದ್ದಾರೆ. ಟ್ರೈನ್ ತನ್ನ ವೇಗದಲ್ಲಿ ಚಲಿಸುತ್ತಿದೆ. ಸರಿಯಾಗಿ ಅದೇ ಸಮಯದಲ್ಲಿ ಬ್ರಿಜ್ಜಿನ ರೋಲಿಂಗ್ ಗೆ ನೇತಾಡುತ್ತಿದ್ದ ವ್ಯಕ್ತಿಯೊಬ್ಬ ಪ್ರವಾಸಿಗನ ಮೊಬೈಲ್ ಕ್ಷಣದಲ್ಲಿ ಸೆಳೆದುಕೊಳ್ಳುತ್ತಾನೆ. ಮೊಬೈಲ್ ಕಳೆದುಕೊಂಡ ವ್ಯಕ್ತಿಗೆ ಏನಾಯಿತೆಂಬುದು ತಿಳಿಯಲು ನಾಲ್ಕೈದು ಕ್ಷಣಗಳೇ ಬೇಕಾದವು.
ಸ್ಲೋಮೋಷನ್ ವಿಡಿಯೋದಲ್ಲಿ ಕಂಡುಬರುವ ಹಾಗೆ ವ್ಯಕ್ತಿಯೊಬ್ಬ ಬ್ರಿಡ್ಜ್ ನ ಬದಿಯಲ್ಲಿರುವ ರೋಲಿಂಗ್ ಗೆ ನೇತಾಡುತ್ತ ಈ ಕೆಲಸವನ್ನು ಮಾಡಿದ್ದಾನೆ. ಆತನ ಮುಖ ಬಟ್ಟೆಯಿಂದ ಮುಚ್ಚಿ ಕೊಂಡಿದ್ದಾನೆ. ಹೀಗಾಗಿ ಆತ ಯಾರು ಎಂಬುದೇ ತಿಳಿಯುವುದಿಲ್ಲ.
ವಿಡಿಯೋ ನೋಡಿ
You won’t comprehend what happened if you see this video for the first time, therefore it’s been done in slow motion so you can notice the regular occurrences on the moving train and be aware. #Begusarai incident in #Bihar.#India #ThursdayThoughts pic.twitter.com/fbO6txQadd
— Backchod Indian (@IndianBackchod) June 9, 2022
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೇಗದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ಕೆಲವರಿಗೆ ಸ್ಪೈಡರ್ಮ್ಯಾನ್ ನೆನಪಿಗೆ ಬಂದದ್ದೂ ಉಂಟು. ಪ್ರಸ್ತುತ ವಿಡಿಯೋ ಶೂಟ್ ಸಹಜವಾಗಿಯೇ ಟ್ರೈನಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಮಾಡಿಕೊಂಡಿದ್ದಾನೆ.