Video; ಚಹಲ್ ಪತ್ನಿ ಧನಶ್ರೀ ವರ್ಮಾ ಸ್ವೀಕರಿಸಿದರು ಪಂಜಾಬನ್ ಸಾಂಗ್ ಚಾಲೆಂಜ್! ಚಿಕ್ಕ ಡಾನ್ಸೇ ಆದರೂ ಸಖತ್ತಾಗಿದೆ.

ಭಾರತದ ಕ್ರಿಕೆಟ್ ತಂಡದ ಸದ್ಯದ ಸೂಪರ್ ಸ್ಪಿನ್ನರ್ ಚಹಲ್ ರ ಪತ್ನಿ ಧನಶ್ರೀ ಫೇಮಸ್ ಕೊರಿಯೋಗ್ರಾಫರ್ ಇರುವದು ಎಲ್ಲರಿಗೂ ಗೊತ್ತೇ ಇದೆ. ಇವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾವತ್ತೂ ತಮ್ಮ ಸುಂದರವಾದ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಿರುತ್ತಾರೆ. ಸದ್ಯ ಹಿಂದಿ ಚಲನಚಿತ್ರ ‘ಜುಗ್ ಜುಗ್ ಜಿಯೋ’ ಚಿತ್ರದ ಹಾಡಾದ “ದ ಪಂಜಾಬನ್ ಸಾಂಗ್” ತುಂಬಾ ಟ್ರೆಂಡಿಂಗ್ ನಲ್ಲಿದೆ. ಈ ಹಾಡು ನೋಡಿದ ಫ್ಯಾನ್ಸ್ ಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಧನಶ್ರೀ ವರ್ಮ ಅವರು ಇನ್ಸ್ಟಾಗ್ರಾಮ್ ನ ತಮ್ಮ ಆಫೀಸಿಯಲ್ ಅಕೌಂಟ್ ನಿಂದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ನಲ್ಲಿ ‘ದ ಪಂಜಾಬನ್ ಸಾಂಗ್’ ಹುಕ್ ಸ್ಟೆಪ್ ಫಾಲೋ ಮಾಡಿದ್ದಾರೆ. ಈ ಡಾನ್ಸ್ ನಲ್ಲಿ ಧನಶ್ರೀ ಅವರು ಸಕ್ಕತ್ ಮೂವ್ ಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Dhanashree Verma (@dhanashree9)

ಪ್ರಸ್ತುತ ವಿಡಿಯೋದಲ್ಲಿ ಧನಶ್ರೀಯವರು ಕೆಂಪು ಬಣ್ಣದ ಡ್ರೆಸ್ ತೊಟ್ಟು ತುಂಬಾ ವೇರಿಯೇಶನ್ ನಲ್ಲಿ ಸೊಂಟ ಬಳುಕಿಸಿದ್ದಾರೆ. ಅವರು ಮಾಡುವ ಡಾನ್ಸ್ ನೊಂದಿಗೆ ಸೌಂದರ್ಯ ಸಹ ಎದ್ದು ಬೀಳುತ್ತಿದೆ. ಚಹಲ್ ಪತ್ನಿ ಧನಶ್ರೀ ಅವರು ಈ ವಿಡಿಯೋ ಶೇರ್ ಮಾಡಿದ್ದೇ ತಡ ಇಲ್ಲಿಯವರೆಗೆ 5 ಲಕ್ಷಕ್ಕಿಂತ ಹೆಚ್ಚು ಜನರು ನೋಡಿದ್ದಾರೆ. ಹಾಗೂ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.