ಮುಪ್ಪಾದ ವಯಸ್ಸಲ್ಲೂ ಗಂಡ ಹೈಕ್ಳು ನಾಚುವಂತೆ ಈಜಾಡಿದ ಅಜ್ಜಿ! ನೋಡಿ ವಿಡಿಯೋ ವೈರಲ್……
ಮನುಷ್ಯನ ಜೀವನದಲ್ಲಿ ಎಲ್ಲಕ್ಕಿಂತ ಬೆಲೆಬಾಳುವ ವಸ್ತು ಎಂದರೆ ಅದು ವಿದ್ಯೆ. ಹೌದು ನಾವು ಎಲ್ಲದಕ್ಕೂ ಬೆಲೆ ಕಟ್ಟಲು ಬರುತ್ತದೆ. ಆದರೆ ಒಬ್ಬ ವ್ಯಕ್ತಿಯ ವಿದ್ಯೆಗೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ. ಅದಕ್ಕೆ ಅನ್ನೋದಿಲ್ಲವೇ, ‘ ಬೇರೆಯವರು ನಮ್ಮ ಬಳಿಯಲ್ಲಿರುವ ಸಂಪತ್ತು, ಆಸ್ತಿ ಕಸಿದುಕೊಳ್ಳಬಹುದು ಆದರೆ ವಿದ್ಯೆ ಕದಿಯಲು ಸಾಧ್ಯವಾಗುವದಿಲ್ಲ”. ವಿದ್ಯೆ ಒಮ್ಮೆ ಕಲಿತರೆ ನಾವು ಜೀವನಪೂರ್ತಿ ನೆನಪು ಹಾರೋದಿಲ್ಲ.
ನಮ್ಮ ಜೀವನದಲ್ಲಿ ಮತ್ತೊಂದು ಮುಖ್ಯವಾದ ಸಂಗತಿ ಏನೆಂದರೆ ಈಜು. ನಾವು ಚಿಕ್ಕವರಿರುವಾಗ ತಂದೆ ಅಥವಾ ಗೆಳೆಯರೊಂದಿಗೆ ಬಾವಿಗೆ ಅಥವಾ ಕೆರೆಯಲ್ಲಿ ಹೋಗಿ ಈಜು ಕಲಿಯುತ್ತೇವೆ. ಅಂದು ಕಲಿತ ಈಜು ಎಷ್ಟೇ ಮುಪ್ಪಾದರು ಸಹ ಅದು ನೆನಪು ಹಾರಲಾರದು. ನಮಗೆ ಕೆಲವೊಮ್ಮೆ ಅನಿಸುತ್ತೆ ನಾವು ಇಜಾಡುವದನ್ನು ಮರೆತ್ತಿದೆವೇ ಅಂತ ಆದರೆ ನೀರಲ್ಲಿ ಬಿದ್ದರೆ ಸಾಕು ನಮ್ಮ ಕೈ ಕಾಲುಗಳು ನಮಗೆ ಗೊತ್ತಿಲ್ಲದ ಹಾಗೆ ಈಜಾಡಲು ಶುರು ಮಾಡುತ್ತವೆ.
ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ನೋಡಿದಾಗ ನಿಮ್ಮ ಬಾಲ್ಯದ ದಿನಗಳು ನೆನಪಾಗುತ್ತದೆ. ಪ್ರಸ್ತುತ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಕೊಳದಲ್ಲಿ ಹರಿಯುವ ನೀರಿನಲ್ಲಿ ಕೆಲವು ಹೆಣ್ಣು ಮಕ್ಕಳು ಜೊತೆಗೂಡಿ ಈಜಾಡುವದನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಒಬ್ಬ ಮುಪ್ಪಾದ ಅಜ್ಜಿ ಸಹ ಇರುತ್ತಾಳೆ. ಈ ಎಲ್ಲರೂ ಬರೀ ಒಂದೇ ಜಾಗದಲ್ಲಿ ನಿಂತು ನೀರಿನ ಮಜಾ ತಗೆದುಕೊಳ್ಳುತ್ತಿದ್ದರೆ ಆ ಅಜ್ಜಿ ಮಾತ್ರ ಅವರಿಂದ ಸ್ವಲ್ಪ ದೂರ ಹೋಗಿ ಅಲ್ಲಿಂದ ಈಜಾಡುತ್ತ ಇವರ ಬಳಿಗೆ ಬರುತ್ತಾಳೆ. ಅಜ್ಜಿಯ ಈಜಾಡುವ ದೃಶ್ಯ ನೋಡಿ ಅಲ್ಲಿದ್ದ ಮಹಿಳೆಯರು ಕೂಡಾ ಆಶ್ಚರ್ಯ ಪಡುತ್ತಾರೆ. ಈ ಅಜ್ಜಿಯ ಈಜಾಡುವ ಪರಿ ನೋಡಿದ್ದರೆ ಈಗಿನ ಹದಿ ಹರೆಯದ ಗಂಡು ಮಕ್ಕಳು ಸಹ ನಾಚಿಕೆ ಪಡುತ್ತಾರೆ.
ವಿಡಿಯೋ ನೋಡಿ.
View this post on Instagram