ಕಿಂಗ್ ಕೋಬ್ರಾಗೆ ಕಿರುಕುಳ ನೀಡಿದ್ದು ಯುವಕನಿಗೆ ಬಿತ್ತು ದುಬಾರಿ! ವಿಡಿಯೋ ಆಯ್ತು ವೈರಲ್.
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಹಾವುಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳು ಅಪ್ಲೋಡ್ ಮಾಡಲಾಗುತ್ತದೆ. ನೇಟಿಜನ್ಸ್ ಗಳಿಗೂ ಹಾವಿನ ಈ ವೀಡಿಯೋಗಳು ತುಂಬಾ ಇಷ್ಟವಾಗುತ್ತದೆ. ಇಲ್ಲಿ ಅನೇಕ ರೀತಿಯ ಖತರ್ನಾಕ್ ಹಾವುಗಳು ನೋಡಲು ಸಿಗುತ್ತವೆ. ಈ ಹಾವುಗಳನ್ನು ನೋಡಿದಾಗ ಹೆಚ್ಚುವರಿ ಜನರು ಹೆದರುತ್ತಾರೆ. ಆದರೆ ಕೆಲವರು ಮಾತ್ರ ಈ ಹಾವುಗಳು ಸಾಮಾನ್ಯವೆಂಬಂತೆ ಅವುಗಳ ಜೊತೆಗೆ ಆಡುವುದು ಮತ್ತು ಅವುಗಳಿಗೆ ಕಿರುಕುಳ ನೀಡುವುದನ್ನು ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ರೀತಿ ವ್ಯಕ್ತಿಯೊಬ್ಬ ಕಿಂಗ್ ಕೋಬ್ರಾ ಗೆ ಕಿರುಕುಳ ನೀಡುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ.
ಈ ಕಿಂಗ್ ಕೋಬ್ರಾ ಗೆ ಕಿರುಕುಳ ನೀಡಿದ್ದು ವ್ಯಕ್ತಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿ ಪದೇಪದೇ ಹಾವಿಗೆ ನೋವು ನೀಡುತ್ತಿದ್ದಾನೆ. ತನ್ನಷ್ಟಕ್ಕೆ ತಾನು ಹೋಗುತ್ತಿರುವ ಹಾವಿಗೆ ನೀಲಿ ಬಣ್ಣದ ಟಿ-ಶರ್ಟ್ ತೊಟ್ಟುಕೊಂಡ ವ್ಯಕ್ತಿ ಅದರ ಹತ್ತಿರ ಹೋಗಿ ಮೇಲಿಂದ ಮೇಲೆ ಅದರ ಬಾಲವನ್ನು ಹಿಡಿದು ಎಳೆಯುತ್ತಿದ್ದಾನೆ. ಇದರಿಂದಾಗಿ ಹಾವು ತನ್ನ ಮಾನಸಿಕ ಸಮತೋಲನ ಒಮ್ಮೆಲೆ ಕಳೆದುಕೊಂಡು ಶರವೇಗದಲ್ಲಿ ಆತನ ಪ್ರೈವೇಟ್ ಪಾರ್ಟ್ ಮೇಲೆಯೇ ಅಟ್ಯಾಕ್ ಮಾಡಿದೆ. ಈ ದೃಶ್ಯ ನಿಜಕ್ಕೂ ನೋಡುಗರಿಗೆ ತುಂಬಾ ಭಯವನ್ನು ಹುಟ್ಟಿಸುವಂತಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ snake._.world ಹೆಸರಿನಿಂದ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅತೀ ಹೆಚ್ಚಿನ ಸ್ವರೂಪದಲ್ಲಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಸಾವಿರಾರು ಜನರು ಈ ವಿಡಿಯೋ ವೀಕ್ಷಿಸಿದ್ದು ಈ ವಿಡಿಯೋಗೆ ಸುಮಾರು 3 ಸಾವಿರ ಲೈಕುಗಳು ಬಂದಿವೆ.