Video; ಒಂದು ಕಾಲೇ ಇಲ್ಲದ ವಿಕಲಚೇತನ ವ್ಯಕ್ತಿ ಹೊಟ್ಟೆಗಾಗಿ ಸೈಕಲ್ ನಡೆಸುವ ರೀತಿ ನೋಡಿ, ಅಮೋಘ, ಅದ್ಭುತವೇ ಸರಿ…
ಜಗತ್ತಿನಲ್ಲಿ ಅನೇಕ ರೀತಿಯ ಜನರೂ ಹೀಗೂ ಇದ್ದಾರೆ. ಅವರು ಎಂದಿಗೂ ಯಾವುದರ ಜೊತೆಗೂ ಸೋಲಪ್ಪಿಕೊಳ್ಳುವುದಿಲ್ಲ. ಈ ವ್ಯಕ್ತಿಗಳು ತಮ್ಮ ದೇಹದಲ್ಲಿಯ ಯಾವುದೇ ಅಂಗಾಂಗ ಕಡಿಮೆ ಇದ್ದರೂ ಜೀವಿಸುವ ಛಲದಲ್ಲಿ ಮಾತ್ರ ಸ್ವಲ್ಪವೂ ಕಡಿಮೆತನ ಕಾಣುವದಿಲ್ಲ. ಹಾಗೂ ಇವರು ಯಾರಿಂದಲೂ ಅನುಕಂಪದ ಜೀವನ ಪಡೆಯಲು ಆಶಿಸುವುದಿಲ್ಲ. ತಮ್ಮ ಜೀವನಕ್ಕೆ ತಮ್ಮದೇ ಪ್ರಯತ್ನದಿಂದ ಸರಿಯಾದ ಆಕಾರವನ್ನು ನೀಡಲು ಪ್ರಯತ್ನಿಸುತ್ತಿರುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಕಲಚೇತನ ವ್ಯಕ್ತಿಯ ವಿಡಿಯೋ ಒಂದು ಕಂಡುಬರುತ್ತಿದೆ. ನೋಡಿ ಈ ವಿಡಿಯೋ ಎಂತದು ಅಂತ.
ಪ್ರಸ್ತುತ ವಿಡಿಯೋದಲ್ಲಿ ಕಾಲಿಲ್ಲದ ಒಬ್ಬ ವ್ಯಕ್ತಿಯು ಬರಿ ಒಂದೇ ಕಾಲಿನಿಂದ ಸೈಕಲ್ ತುಳಿಯುತ್ತಾ ತುಂಬಾ ಸಹಜವಾಗಿ ಅಷ್ಟೇ ವೇಗದಲ್ಲಿ ಹೋಗುತ್ತಿದ್ದಾನೆ. ಸೈಕಲ್ ತುಳಿಯಲು ಇನ್ನೊಂದು ಪ್ಯಾಡೆಲ್ ಮೇಲೆ ಒಂದು ಬೆತ್ತವನ್ನು ಉಪಯೋಗಿಸಿಕೊಂಡಿದ್ದಾನೆ. ಆತನ ಈ ಛಲವನ್ನು ನೋಡಿ ಬೈಕ್ ಸವಾರರು ದಾರಿಯಲ್ಲಿ ನಡೆಯುತ್ತಲೇ ಪುಟ್ಟ ಸಂದರ್ಶನವನ್ನು ತೆಗೆದುಕೊಂಡಿದ್ದಾರೆ. ಈ ಬೈಕ್ ಸವಾರರು ಆತನಿಗೆ ಹೆಸರು ಕೇಳಲು ವ್ಯಕ್ತಿಯು ತನ್ನ ಹೆಸರು ಅನಿಲ್ ಅಂತ ಹೇಳಿದ್ದಾನೆ. ಮತ್ತೆ ಅವರು ನೀನು ಎಲ್ಲಿಗೆ ಹೊರಟಿರುವೆ? ಎಂದು ಕೇಳಿದಾಗ, ಪ್ರಸ್ತುತ ವಿಕಲಚೇತನ ವ್ಯಕ್ತಿಯು ಕೆಲಸ ಮಾಡುವ ಸಲುವಾಗಿ ಕಂಪನಿಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಾನೆ. ಆತ ಸೈಕಲ್ ನಡೆಸುವ ಛಲ ಮತ್ತು ಕಂಪನಿಗೆ ಹೋಗಿ ಕೆಲಸ ಮಾಡುವ ಜಿದ್ದು ನೋಡಿದರೆ ವ್ಯಕ್ತಿಗೆ ಯಾರ ಅನುಕಂಪದ ಅವಶ್ಯಕತೆ ಇಲ್ಲ ಎಂದು ತಿಳಿದು ಬರುತ್ತದೆ. ಹಾಗೂ ನಾನು ನನ್ನ ಜವಾಬ್ದಾರಿಯನ್ನು ಸ್ವಂತವೇ ಹೊತ್ತುಕೊಳ್ಳುತ್ತೇನೆಂದು ಹೇಳುವಂತಿದೆ ಆತನ ಆತ್ಮವಿಶ್ವಾಸದ ಮಾತುಗಳು, ಅಲ್ವಾ?
ವಿಡಿಯೋ ನೋಡಿ
कोई दुःख
मनुष्य के साहस से बड़ा नहीं
हारा वही
जो लड़ा नहीं~ कुँवर नारायण pic.twitter.com/C6VMBALoFZ
— उम्दा_पंक्तियां (@umda_panktiyan) July 5, 2022
ಈ ವಿಡಿಯೋವನ್ನು ಟ್ವಿಟರ್ ನಲ್ಲಿ umda panktiya ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಲಕ್ಷಾವಧಿ ಜನರು ನೋಡಿದ್ದು ಸಾವಿರಾರು ಜನರು ಲೈಕ್ ಮಾಡಿದ್ದಾರೆ. ವಿಡಿಯೋದ ಕ್ಯಾಪ್ಷನ್ ನಲ್ಲಿ ಮನುಷ್ಯನ ಯಾವುದೇ ದುಃಖ ಆತನ ಸಾಹಸಕ್ಕಿಂತ ಮೇಲ್ಪಟ್ಟಿಲ್ಲ! ಎನ್ನಲಾಗಿದೆ.