ಬಸ್ಸಿನಲ್ಲಿ ಸೀಟಿಗಾಗಿ ಇಬ್ಬರು ವೃದ್ಧರ ಮಧ್ಯೆ ನಡೆದ ಸುಂದರ ಜಗಳದ ಅಪರೂಪದ ವಿಡಿಯೋ ವೈರಲ್!

ಜಗಳಾಡುವದು ಕೆಲವರ ಅಚ್ಚುಮೆಚ್ಚಿನ ವಿಷಯವಾದರೆ ಇನ್ನು ಕೆಲವರಿಗೆ ಈ ಜಗಳ ನೋಡುವದೆಂದರೆ ಹವ್ಯಾಸ ಅಥವಾ ಅಚ್ಚು ಮೆಚ್ಚಿನ ವಿಷಯವಾಗಿರುತ್ತದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ಜಗಳದ ಮೋಜಿನ ಪ್ರಸಂಗ ವೈರಲ್ ಆಗುತ್ತಿದೆ. ಈ ಜಗಳ ಇಬ್ಬರೂ ವಯೋವೃದ್ಧರು ಮಾಡುತ್ತಿರಬೇಕಾದರೆ ಸ್ವಲ್ಪ ವಿಶೇಷ ಅಲ್ವಾ ?

ಪ್ರಸ್ತುತ ಜಗಳ ಒಂದು ಪಬ್ಲಿಕ್ ಬಸ್ಸಿನಲ್ಲಿ ಸೀಟಿಗಾಗಿ ನಡೆದಿದೆ. ಈ ಜಗಳದಲ್ಲಿ ಇಬ್ಬರು ಅಜ್ಜರು ತುಂಬಾ ರೋಷದಿಂದ ತಮ್ಮ ಸೀಟಿನ ಅಸ್ತಿತ್ವಕ್ಕೆ ಹೋರಾಟ ಮಾಡುವಂತೆ ಕಾಣುತ್ತಿದೆ. ಇಬ್ಬರಲ್ಲಿ ಇಳಿವಯಸ್ಸಿನಲ್ಲಿಯೂ ಜೋಶ್ ಹಾಗೆಯೇ ಇರುವದು ಕಂಡು ಬರುತ್ತಿದೆ. ಜೊತೆಗೆ ತಾನೇಕೆ ಹಿಂದೆ ಸರಿಯಬೇಕು, ಸೋಲಬೇಕು ಅಹಂ ಅಲ್ಲಿ ಮಾತುಮಾತಿಗೂ ಕಂಡು ಬರುತ್ತಿದೆ. ಒಟ್ಟಿನಲ್ಲಿ ಇಬ್ಬರ ಈ ಸುಂದರವಾದ ಜಗಳ ನೋಡಲು ರೋಮಾಂಚನದಿಂದ ಕೂಡಿದೆ.

ಈ ವಿಡಿಯೋವನ್ನು @sagarcasm ಹೆಸರಿನಿಂದ ಟ್ವಿಟರ್ ಹ್ಯಾಂಡಲ್ ನಲ್ಲಿ ಶೇರ್ ಮಾಡಲಾಗಿದೆ. ಪಬ್ಲಿಕ್ ಟ್ರಾನ್ಸ್ಪೋರ್ಟ್ ನಲ್ಲಿ ನಡೆದ ಈ ಜಗಳ ಹೇಗೆ ಶುರುವಾಯಿತು ಎಂಬುದು ಗೊತ್ತಿಲ್ಲ. ಈ ಜಗಳಕ್ಕೆ ಕ್ಯಾಪ್ಶನ್ ಮಾತ್ರ ತುಂಬಾ ಭರ್ಜರಿಯಾಗಿ ನೀಡಲಾಗಿದೆ. ಅದೇನೆಂದರೆ, ” 9ನೇ ಗುಲಾಬ್ ಜಾಮೂನ್ ತಿಂದ ನಂತರ ನಾನು ನನ್ನ ಹೊಟ್ಟೆಯೊಂದಿಗೆ…”.

ಈ ವಿಡಿಯೋ ಕ್ಲಿಪ್ ಇಲ್ಲಿಯವರೆಗೆ ಏಳು ಲಕ್ಷಕ್ಕೂ ಮೀರಿ ವೀಕ್ಷಣೆ ಪಡೆದಿದೆ. ಹಾಗೂ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ. ನೆಟ್ಟಿಗರು ಮಾತ್ರ ಹಿರಿಯರ ಈ ಜಗಳವನ್ನು ತುಂಬಾ ಆಸ್ವಾದಿಸುತ್ತಿದ್ದಾರೆ, ಜೊತೆಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಒಬ್ಬರು ಸ್ಥಳವಿದೆ ಎಂದರೆ ಇನ್ನೊಬ್ಬರು ಇಲ್ಲಿ ಸ್ಥಳವಿಲ್ಲ ಎಂಬ ಮಹತ್ವದ ವಿಷಯ ಜಗಳಕ್ಕೆ ಮೂಲ ಕಾರಣವಾಗಿದೆ. ಇಬ್ಬರು ಕೂಡಿ ಈ ಒಂದೇ ವಿಷಯವನ್ನು ಮೇಲಿಂದ ಮೇಲೆ ಒಬ್ಬರಿಗೊಬ್ಬರು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಅವರ ಈ ಗಂಭೀರವಾದ ವಿಷಯವನ್ನು ಹಿಂದೆ ಕುಳಿತ ಯಾತ್ರಿಕನೊಬ್ಬ ಚೆನ್ನಾಗಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.

ವಿಡಿಯೋ ನೋಡಿ