Viral Video: ವರ್ಕ್ ಫ್ರಮ್ ಹೋಮ್ ಸೈಡ್ ಎಫೆಕ್ಟ್! ವ್ಯಕ್ತಿ ಆಫೀಸಿನಲ್ಲಿ ಮಾಡಿದ ಈ ಕೆಲಸ! ಸಹಪಾಠಿಗಳ ಮುಂದೆ ಆಯಿತು ಮುಜುಗರ…
ಸೋಶಿಯಲ್ ಮೀಡಿಯಾದಲ್ಲಿ ಮನರಂಜನೆಯ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಿಗೆ ಲೆಕ್ಕವೇ ಇಲ್ಲ. ದಿನಂಪ್ರತಿ ಅನೇಕ ವಿಡಿಯೋಗಳು ನೇಟಿಜನ್ಸ್ ಗಳಿಗೆ ಸಖತ್ತಾಗಿ ಮನರಂಜನೆಯನ್ನು ನೀಡುತ್ತವೆ. ಈಗ ತುಂಬಾ ಹೊಚ್ಚ ಹೊಸದಾದ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ. ನೋಡಿ ಇಲ್ಲಿ….
ಪ್ರಸ್ತುತ ವಿಡಿಯೋ ನೋಡಿದ ನಂತರ ನಗುವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದ ಜನರು ಈ ವಿಡಿಯೋವನ್ನು ಮೇಲಿಂದ ಮೇಲೆ ನೋಡುತ್ತಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ತನ್ನ ಸಹಪಾಠಿಗಳ ಮಧ್ಯದಲ್ಲಿ ಇತನೊಬ್ಬನೇ ಆಫೀಸಿನಲ್ಲಿ ಚೇರ್ ಮೇಲೆ ತುಂಬಾ ಆರಾಮಾಗಿ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಆತ ತನ್ನ ಜೊತೆಗಾರರೊಂದಿಗೆ ಆಫೀಸಿನಲ್ಲಿ ಕುಳಿತಿದ್ದೇನೆ ಎಂಬುದನ್ನೇ ಮರೆತು ಬಿಟ್ಟಿದ್ದಾನೆ. ಹೀಗಾಗಿ ಕುಳಿತಲ್ಲಿ ಆತ ಮಾಡಿದ ಕೃತಿಯನ್ನು ಮೊದಲು ಈ ವೈರಲ್ ವಿಡಿಯೋದಲ್ಲಿ ನೋಡಿ.
ವಿಡಿಯೋ…
View this post on Instagram
ವ್ಯಕ್ತಿ ಆಫೀಸಿನ ಚೇರ್ ಮೇಲೆ ಕುಳಿತು ಒಮ್ಮೆಲೆ “ಮಮ್ಮಿ ಚಹಾ” ಅಂತ ಜೋರಾಗಿ ತಾಯಿಗೆ ಆರ್ಡರ್ ನೀಡುತ್ತಾನೆ. ಆಗ ಆತನ ಸಹಪಾಠಿಗಳೆಲ್ಲರೂ ಆತನೆಡೆಗೆ ಒಮ್ಮೆಲೆ ನೋಡಲು ವ್ಯಕ್ತಿ ಮುಜುಗರಕ್ಕೆ ಒಳಗಾಗುತ್ತಾನೆ. ಮತ್ತು ಸುಮ್ಮನೆ ತಲೆ ಕೆಳಗೆ ಮಾಡಿ ಕುಳಿತುಕೊಳ್ಳುತ್ತಾನೆ. ಈ ರೀತಿ ನೀವೂ ಆಫೀಸಿನಲ್ಲಿ ಮಾಡಿದರೆ? ಎರಡೆರಡು ವರ್ಷಗಳು ಮನೆಯಲ್ಲಿಯೇ ಕುಳಿತು ವರ್ಕ್ ಫ್ರಾಮ್ ಹೊಮ್ ಮಾಡಿದ್ದಕ್ಕಾಗಿ ವ್ಯಕ್ತಿ ಈ ರೀತಿ ಆವಾಂತರ ಸೃಷ್ಟಿಸಿದ್ದಾನೆ ಎನ್ನಬಹುದು.
ಈ ವಿಡಿಯೋ ಸೋಶಿಯಲ್ ಮೀಡಿಯಾ ಯೂಜರ್ಸ್ ಗಳಿಗೆ ತುಂಬಾ ಮನರಂಜನೆಯನ್ನು ನೀಡುತ್ತಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 30 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ. ಮತ್ತು 3 ಮಿಲಿಯನ್ ಗಿಂತಲೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ಕಾಮೆಂಟ್ ಸೆಕ್ಷನ್ ನಲ್ಲಿ ನೆಟ್ಟಿಗರು ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.