Viral Dance: ಪುಟ್ಟ ಮಾಡಿದ ಬಿಂದಾಸ್ ಮೂವ್ ಮೆಂಟ್ ನ ಸಖತ್ ಡಾನ್ಸ್ ನೋಡಿದರೆ ಆಗುತ್ತೀರಿ ಆತನ ಫ್ಯಾನ್!
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಡಾನ್ಸ್ ನ ವಿಡಿಯೋಗಳು ಶೇರ್ ಆಗುತ್ತವೆ. ಇಂದು ಈ ಪುಟ್ಟ ಬಾಲಕನ ಬಿಂದಾಸ್ ಮತ್ತು ಅಮೋಘ ಡಾನ್ಸ್ ನೋಡಿದಾಗ ಆ ಎಲ್ಲ ಡ್ಯಾನ್ಸಗಳು ಈ ಡಾನ್ಸಿನ ಮುಂದೆ ಫೇಲಾಗುತ್ತವೆ. ಕಾರಣ ಈ ಹುಡುಗ ನಿಜಕ್ಕೂ ಅದ್ಭುತವಾಗಿ ಡಾನ್ಸ್ ಮಾಡಿದ್ದಾನೆ ಎಂದು ತಿಳಿದು ಬರುತ್ತದೆ.
ವಿಡಿಯೋದಲ್ಲಿ ಹುಡುಗ ಡಾನ್ಸ್ ಮಾಡುವುದನ್ನು ನೋಡಿದರೆ ಆತ ತುಂಬಾ ಕೂಲ್ ಆಗಿದ್ದಾನೆ ಮತ್ತು ತನ್ನ ಡಾನ್ಸ್ ನೋಡಿ ನೋಡುಗರು ಏನನ್ನುತ್ತಾರೆ ಎಂಬುದರ ಬಗ್ಗೆ ಆತ ಸ್ವಲ್ಪವೂ ತಲೆಕೆಡಿಸಿಕೊಳ್ಳುತ್ತಿಲ್ಲ. ಆತ ತನ್ನದೇ ವಿಶ್ವದಲ್ಲಿ ಡಾನ್ಸನ್ನು ಫುಲ್ ಎಂಜಾಯ್ ಮಾಡುತ್ತಿರುವುದು ವಿಡಿಯೋದಲ್ಲಿ ಸಹಜವಾಗಿ ಕಂಡುಬರುತ್ತದೆ.
ಪುಟ್ಟ ಬಾಲಕನ ಡಾನ್ಸ್ ನೋಡಿದಾಗ ನೋಡುಗರಿಗೂ ಸಹ ಡಾನ್ಸ್ ಮಾಡಬೇಕೆಂಬ ಆಸೆ ಮನದಲ್ಲಿ ಹುಟ್ಟುತ್ತದೆ. ಡಾನ್ಸ್ ಮಾಡುವಾಗ ಹುಡುಗನು ಸಹ ತುಂಬಾ ಖುಷಿಯಲ್ಲಿ ಕಾಣುತ್ತಿದ್ದಾನೆ.
ನೋಡಿ ಟ್ರೆಂಡಿಂಗ್ ವಿಡಿಯೋ…
Happiness is homegrown ☺️👍
VC : WA pic.twitter.com/cAjAj64rhF
— KJS DHILLON🇮🇳 (@Tiny_Dhillon) July 8, 2022
ಮುಗ್ಧ ಬಾಲಕನ ಸ್ವಚಂದ ಕುಣಿತವು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಬಾಲಕನ ನೃತ್ಯ ನೇಟಿಚನ್ಸ್ ಗಳಿಗೆ ತುಂಬಾ ಮನರಂಜನೆಯನ್ನು ನೀಡಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಸಾವಿರಾರು ಸಂಖ್ಯೆಯಲ್ಲಿ ಲೈಕ್ ಗಳ ಸುರಿಮಳೆಯಾಗಿದೆ.
ವಿಡಿಯೋ ನೋಡಿದ ನೇಟಿಜನ್ಸ್ ಗಳಿಗೆ ಹುಡುಗನ ಕುಣಿತ ತುಂಬಾ ಮೆಚ್ಚುಗೆಯಾಗಿದೆ. ಹೀಗಾಗಿ ಇಂಟರ್ನೆಟ್ ಯೂಸರ್ ಗಳು ಆತನ ಫ್ಯಾನ್ ಆಗುತ್ತಿದ್ದಾರೆ.
ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ KJS DHILLON ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ.