Video; ವಧು ಶೋಧಿಸಲು ವರನಿಗೆ ನೀಡಬೇಕಾಯಿತು ಪರೀಕ್ಷೆ; ಯಶಸ್ವಿಯಾದರೂ ಸಂಬಂಧಿಕರೂ ಮಾಡಿದರು ಗೇಮ್..!
ಇತ್ತೀಚೆಗೆ ಮದುವೆಯಲ್ಲಿ ಘಟಿಸಿದ ವಿವಿಧ ಹಾಗೂ ಅಷ್ಟೇ ವಿಚಿತ್ರ ಪ್ರಸಂಗಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಬಲು ಜೋರಾಗಿ ನೋಡಲು ಸಿಗುತ್ತಿವೆ. ಅವುಗಳಲ್ಲಿ ಕೆಲವು ವಿಡಿಯೋಗಳಂತೂ ತುಂಬಾ ತಮಾಷೆಯಿಂದ ಕೂಡಿರುತ್ತವೆ, ಹೀಗಾಗಿ ಅಂಥ ವೀಡಿಯೊಗಳನ್ನು ಮೇಲಿಂದ ಮೇಲೆ ನೋಡಬೇಕೆನಿಸುತ್ತದೆ. ಸದ್ಯ ಇದೇ ರೀತಿಯ ಮದುವೆಯಲ್ಲಿ ನಡೆದ ತಮಾಷೆಯ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಕಾಣಸಿಗುತ್ತದೆ. ಇದು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ.
ವರನಿಗೆ ಕಾದಿತ್ತು ಚಾಲೆಂಜ್…
ಇಲ್ಲಿ ವಧುವಿಗೆ ಅನೇಕ ಹುಡುಗಿಯರ ಮಧ್ಯೆ ಎಲ್ಲರಿಗೂ ತಲೆಯ ಮೇಲೆ ಘೂಂಗಟ್ ( ಮದುವೆಯಲ್ಲಿ ವಧುವಿನ ತಲೆಯ ಮತ್ತು ಮುಖದ ಮೇಲೆ ಹಾಕುವ ಕೆಂಪು ಬಣ್ಣದ ವಸ್ತ್ರ) ಹಾಕಿ ನಿಲ್ಲಿಸಲಾಗಿತ್ತು. ವರನಿಗೆ ಕಣ್ಣಿಗೆ ಕಪ್ಪು ಬಣ್ಣದ ಬಟ್ಟೆಯನ್ನು ಕಟ್ಟಿ ತನ್ನ ವಧುವಿಗೆ ಶೋಧಿಸುವ ಟಾಸ್ಕ್ ನೀಡಿದ್ದರು.
ಈ ಟಾಸ್ಕ್ ಗೆಲ್ಲುವ ಸಲುವಾಗಿ ವರ ಸರದಿಯ ಪ್ರಕಾರ ಅನೇಕರ ಹುಡುಗಿಯರ ಹತ್ತಿರ ಹೋಗುತ್ತಾನೆ. ಕೊನೆಗೂ ಆತ ತನ್ನ ವಧುವಿಗೆ ಶೋಧಿಸುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಆತ ತನ್ನ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚುತ್ತಿರುವಾಗ ಮಾತ್ರ ಮನೆಯವರು ಆತನ ಜೊತೆಗೆ ಗೇಮ್ ಮಾಡುತ್ತಾರೆ. ಪಾಪ, ವಧುವಿನ ಬದಲಾಗಿ ಬೇರೆಯವರನ್ನು ನಿಲ್ಲಿಸಿ ಬಿಟ್ಟು ವರನ ಜೊತೆಗೆ ತಮಾಷೆ ಮಾಡುತ್ತಾರೆ.
ನೋಡಿ ಈ ವಿಡಿಯೋ...
View this post on Instagram
ಈ ಟಾಸ್ಕ್ ನಲ್ಲಿ ವರ ಯಶಸ್ವಿಯಾದರೂ ಪಾಪ ಸಂಬಂಧಿಕರೇ ವರನ ಜೊತೆಗೆ ಮೋಜಿಗಾಗಿ ಮೋಸ ಮಾಡಿ ಬಿಡುತ್ತಾರೆ. ಆತ ತನ್ನ ಭಾವಿ ಪತ್ನಿಗೆ ಸರಿಯಾಗಿ ಹುಡುಕಿದರೂ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆಗೆಯುವಷ್ಟರಲ್ಲಿ ಆತನ ಜೊತೆಗೆ ಮೋಸವಾಗಿಬಿಟ್ಟಿರುತ್ತದೆ. ಪ್ರಸ್ತುತ ವಿಡಿಯೋ ಇನ್ಸ್ಟಾ ಗ್ರಾಮ್ ನಲ್ಲಿ dulhaniyaa ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ.