ವರನಿಗೆ ಸಿಹಿ ತಿನ್ನಿಸಲು ಹೋಗಿ ಅಕ್ಕನ ಮುಂದೆಯೇ ಸಿಹಿಮುತ್ತನ್ನು ಕೊಟ್ಟು ಬಿಟ್ಟಳು ನಾದಿನಿ! ವೈರಲ್ ಆಯ್ತು ವಿಡಿಯೋ.

ಮದುವೆಯಲ್ಲಿಯ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಕಾರಣ ಈ ವಿಡಿಯೋ ಕ್ಲಿಪ್ ಗಳಲ್ಲಿ ಏನಾದರೂ ವಿಶೇಷತೆ ಅಡಗಿರುತ್ತವೆ. ಹೀಗಾಗಿ ಪ್ರಸ್ತುತ ವಿಡಿಯೋಗಳು ಕ್ಷಣದಲ್ಲಿ ವೈರಲ್ ಆಗುತ್ತವೆ. ಮದುವೆಯ ವಿಡಿಯೋಗಳಲ್ಲಿ ಕೆಲವೊಮ್ಮೆ ವಧು ವರನಿಗೆ ಸತಾಯಿಸಲು ಹೋಗಿ ಅನೇಕ ರೀತಿಯ ತಮಾಷೆಯ ಘಟನೆಗಳು ಘಟಿಸುತ್ತವೆ. ಅಂಥ ವಿಡಿಯೋಗಳು ನೋಡಲು ಜನರಿಗೆ ತುಂಬಾ ಇಷ್ಟವಾಗುತ್ತವೆ. ಪ್ರಸ್ತುತ ವಿಡಿಯೋದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಇಲ್ಲಿ ನಾದಿನಿ ತನ್ನ ಮಾವನಿಗೆ ಸಿಹಿ ತಿನ್ನಿಸಲು ಹೋಗಿ ಅಕ್ಕನ ಮುಂದೆ ಸಿಹಿ ಮುತ್ತನ್ನೇ ಕೊಟ್ಟು ಬಿಟ್ಟಿದ್ದಾಳೆ.

ಮದುವೆಯ ಮಂಟಪದಲ್ಲಿ ಗಮನ ಸೆಳೆಯುವ ಜೋಡಿ ಎಂದರೆ ವಧು-ವರ. ಇವರ ನಂತರ ಎಲ್ಲರ ಸಂಪೂರ್ಣ ಗಮನ ಸೆಳೆಯುವ ವ್ಯಕ್ತಿ ಎಂದರೆ ನಾದಿನಿ. ಮದುವೆಯೊಂದರಲ್ಲಿ ನಾದಿನಿ ಅಕ್ಕನ ಗಂಡನಿಗೆ ಸಿಹಿ ತಿನಿಸಲು ಹೋಗಿ ಬೇರೆಯೇ ತಮಾಷೆ ನಡೆದು ಹೋಗಿದೆ. ಅದೇನೆಂದರೆ, ವರನಿಗೆ ನಾದಿನಿ ರಸಗುಲ್ಲಾ ತಿನಿಸಲು ಮುಂದಾಗುತ್ತಾಳೆ. ಆಗ ವರನ ಮುಂದೆ ನಾದಿನಿ ಕೈಯಲ್ಲಿ ಸಿಹಿ ಹಿಡಿದು ನಿಂತಿರುತ್ತಾಳೆ. ವರ ಮಾತ್ರ ಅದನ್ನು ತಿನ್ನಲು ಯೋಗ್ಯ ಸಮಯದ ಪ್ರತೀಕ್ಷೆಯಲ್ಲಿರುತ್ತಾನೆ. ಕಾರಣ ಆತ ತಿನ್ನಲು ಮುಂದಾದಾಗ ನಾದಿನಿ ತನಗೆ ಅವಮಾನ ಮಾಡುವ ತಯಾರಿಯಲ್ಲಿ ಇದ್ದಳು ಎಂಬುದು ವರ ಅರಿತಿದ್ದನು. ಹೀಗಾಗಿ ವರ ಜಾಣತನದಿಂದ ಒಮ್ಮೆಲೆ ನಾದಿನಿಯ ಕೈ ಹಿಡಿದು ತನ್ನೆಡೆಗೆ ಸೆಳೆದುಕೊಂಡು ಸಿಹಿ ತಿನ್ನಬೇಕೆನ್ನುವಷ್ಟರಲ್ಲಿ ನಾದಿನಿ ಆ ಸಿಹಿಯನ್ನು ತಾನೇ ಬಾಯಿಗೆ ಹಾಕಿಕೊಳ್ಳಲು ಮುಂದಾಗುತ್ತಾಳೆ. ಈ ಸಂದರ್ಭದಲ್ಲಿ ಇಬ್ಬರ ಬಾಯಿಯೂ ಏಕಕಾಲಕ್ಕೆ ಒಂದೆಡೆ ಸೇರಿಕೊಳ್ಳುತ್ತವೆ ಹಾಗೂ ಮಧ್ಯದಲ್ಲಿಯ ರಸಗುಲ್ಲಾ ಮಾತ್ರ ಅಲ್ಲಿಂದ ಗುಲ್ ಆಗಿ ಕೆಳಗೆ ಓಡಿ ಹೋಗುತ್ತದೆ. ಈ ಎಲ್ಲ ದೃಶ್ಯವೂ ವಧುವಿನ ಮುಂದೆ ನಡೆದು ಹೋಗುತ್ತದೆ. ಹಾಗೂ ಅಲ್ಲಿದವರೆಲ್ಲರೂ ಒಂದೇ ಸವನೆ ನಕ್ಕು ಮಜಾ ಅನುಭವಿಸುತ್ತಾರೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Bhutni_ke (@bhutni_ke_memes)

ತಮಾಷೆಯ ಈ ಸುಂದರ ವಿಡಿಯೋ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದಿದ್ದು ಸಾವಿರಾರು ಸಂಖ್ಯೆಯಲ್ಲಿ ಲೈಕ್ಸ್ ಗಳನ್ನು ಸಹ ಪಡೆದಿದೆ. ಕಾಮೆಂಟ್ ಸೆಕ್ಷನ್ ನಲ್ಲಿ ಯೂಸರ್ ಒಬ್ಬ ಈ ನಾದಿನಿ ಭಾರೀ ಕಿಲಾಡಿಯಾಗಿದ್ದಾಳೆ ಎಂದರೆ, ಇನ್ನೊಬ್ಬ ನಾದಿನಿಯವರೇ ಮಾವನಿಂದ ಸ್ವಲ್ಪ ದೂರವೇ ಇರಿ ಎಂದಿದ್ದಾನೆ.