ಈ ಅಣ್ಣನ ಇಂಗ್ಲಿಷ್ ಮಾತಿನ ಸ್ಟೈಲ್ ನೋಡಿ ನೇಟಿಜನ್ಸ್ ಗಳು ಫುಲ್ ಫಿದಾ! ಆತನ ತಮಾಷೆಯ ನುಡಿಗಳು ಗೆಲ್ಲುತ್ತಿವೆ ಮನಸ್ಸು…
ಇಂಟರ್ನೆಟ್ ನಲ್ಲಿ ದಿನಬೆಳಗಾದರೆ ಅನೇಕ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ವೈರಲ್ ಆಗುವ ಈ ವಿಡಿಯೋಗಳು ಒಮ್ಮೊಮ್ಮೆ ಹೊಟ್ಟೆ ಹುಣ್ಣಾಗುವಂತೆ ನಗಿಸಿ ಬಿಡುತ್ತವೆ. ಸದ್ಯ ಇದೇ ರೀತಿಯ ತಮಾಷೆಯ ಜೊತೆಗೆ ಕಾನ್ಫಿಡೆನ್ಸ್ ಎದ್ದು ಕಾಣುತ್ತಿರುವ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ, ನೀವೂ ನೋಡಿ ಮತ್ತು ಮಜಾ ತೆಗೆದುಕೊಳ್ಳಿ.
ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನ್ಯೂಸ್ ಚಾನೆಲ್ ತರ ರಿಪೋರ್ಟಿಂಗ್ ಮಾಡುತ್ತಿದ್ದಾನೆ. ಪ್ರತಿಯೊಬ್ಬ ರಿಪೋರ್ಟರ್ ತನ್ನದೇಯಾದ ಶೈಲಿಯನ್ನು ಹೊಂದಿರುತ್ತಾನೆ. ಆದರೆ ನಿಮ್ಮ ಜೀವನದಲ್ಲಿ ಇಂಥ ಒಬ್ಬ ರಿಪೋರ್ಟರ್ ನನ್ನು ಇಲ್ಲಿಯವರೆಗೆ ನೀವು ನೊಡಲಿಕ್ಕಿಲ್ಲ. ಮೊದಲು ಈ ವ್ಯಕ್ತಿಯ ರಿಪೋರ್ಟಿಂಗ್ ಒಮ್ಮೆ ಚೆನ್ನಾಗಿ ನೋಡಿ…
ವಿಡಿಯೋದಲ್ಲಿ ವ್ಯಕ್ತಿ ತನ್ನ ರಿಪೋರ್ಟಿಂಗ್ ನಲ್ಲಿ ತುಂಬಾ ಕ್ಷೀಣವಾದ ಸೇತುವೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾನೆ. ಪ್ರಾರಂಭ ಹರಕು ಮುರುಕು ಇಗ್ಲಿಷ್ ನಿಂದ ಶುರು ಮಾಡುತ್ತಾನೆ. ಜನರಿಗೆ ಈತನ ರಿಪೋರ್ಟಿಂಗ್ ನ ಯೂನಿಕ್ ಸ್ಟೈಲ್ ತುಂಬಾ ಇಷ್ಟವಾಗುತ್ತಿದೆ. ಬಹುಶಃ ಹೀಗಾಗಿಯೇ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.
ವ್ಯಕ್ತಿಯ ಕಾನ್ಫಿಡೆನ್ಸ್ ನ್ನು ಹೊಗಳುತ್ತಿದ್ದಾರೆ ನೆಟ್ಟಿಗರು...
ವ್ಯಕ್ತಿಯ ಸೆನ್ಸ್ ಆಫ್ ಹ್ಯೂಮರ್ ನಿಜಕ್ಕೂ ಸೂಪರ್ ಆಗಿದೆ. ಅನೇಕ ಜನರು ಈ ಹೊಸ ರಿಪೋರ್ಟರ್ ನನ್ನು ಹೊಗಳುತ್ತಿದ್ದಾರೆ. ವ್ಯಕ್ತಿ ಇಂಗ್ಲಿಷ್ ನಲ್ಲಿ ಒಂದು ಶಾಯರಿ ಸಹ ಹೇಳುತ್ತಾನೆ. ತನ್ನ ರಿಪೋರ್ಟಿಂಗ್ ನಲ್ಲಿ ಈ ಬಡಕಲ ಸೇತುವೆಯಿಂದಾಗಿ ಬಡಜನರಿಗೆ ಹೇಗೆ ತಾಪತ್ರಯ ಉಂಟಾಗುತ್ತಿದೆ ಎಂಬುದನ್ನು ತನ್ನ ಮಾಹಿತಿಯಲ್ಲಿ ಹೇಳುತ್ತಿದ್ದಾನೆ. ಇದನ್ನೆಲ್ಲ ಹೇಳುವಾಗ ವ್ಯಕ್ತಿ, ಮೊದಲು ನನಗೆ ಗೊತ್ತಿಲ್ಲ ಈ ಸೇತುವೆ ನನ್ನ ಮೇಲೆಯೇ ಯಾವಾಗ ಬೀಳುತ್ತೆ? ಎಂದು ಹೇಳಲೂ ಮರೆತಿಲ್ಲ.
ವಿಡಿಯೋ ನೋಡಿ
Budding TV correspondent with a great future …..😀@umashankarsingh pic.twitter.com/cPqXCIDVST
— Harsh Goenka (@hvgoenka) August 2, 2022
ವಿಡಿಯೋ ನೀಡುತ್ತಿದೆ ಮನರಂಜನೆ…
ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ವೀಕ್ಷಿಸಿದ್ದಾರೆ. ಇದೇ ವಿಡಿಯೋವನ್ನು ಹರ್ಷ ಗೋಯೆಂಕಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ.