ಹೆಲ್ಮೆಟ್ ಹಾಕಿಕೊಂಡು ಸ್ಕೂಟಿ ಮೇಲೆ ಮುಂಬೈ ಸುತ್ತಿದ ಈ ಫೇಮಸ್ ಕಪಲ್ಸ್ ಯಾರು ಗೊತ್ತಾ? ಲೀಕ್ ಆದವು ಫೋಟೋಗಳು..!

ಸೆಲೆಬ್ರಿಟಿಗಳಿಗೆ ಜನಸಾಮಾನ್ಯರ ಹಾಗೆ ಜೀವನ ಜೀವಿಸುವುದು ತುಂಬಾ ಕಷ್ಟವಾಗುತ್ತದೆ. ಸಾಮಾನ್ಯ ಮನುಷ್ಯರಂತೆ ಎಲ್ಲಿ ಬೇಕಾದಲ್ಲಿ ತಿರುಗಾಡುವ ಸುತ್ತಾಡುವ ಆಸೆ ಪಾಪ ಆಸೆಯಾಗಿಯೇ ಉಳಿಯುತ್ತದೆ. ಅವರು ಶ್ರೀಮಂತರೇನೋ ಆಗಿರುತ್ತಾರೆ ಆದರೆ ಮುಕ್ತ ಜೀವನದಿಂದ ತುಂಬಾನೇ ವಂಚಿತರಾಗಿರುತ್ತಾರೆ.

ಭಾರತ ಕ್ರಿಕೆಟ್ ತಂಡದ ಫೇಮಸ್ ಕ್ರಿಕೆಟರ್ ಆದ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮ ಅವರ ತಾಜಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿವೆ. ಇವರಿಬ್ಬರ ಈ ಜೋಡಿ ತಮ್ಮ ಫ್ಯಾನ್ಸ್ ಗಳಿಗೆ ಗೊತ್ತಾಗದಂತೆ ಮುಂಬೈ ಎಲ್ಲ ಸುತ್ತಾಡಿಕೊಂಡು ಬಂದಿದ್ದಾರೆ. ಆದರೂ ಸಹ ಕೆಲವರು ಅವರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮಳೆಗಾಲದ ಈ ಸಮಯದಲ್ಲಿ ಮುಂಬೈ ಮಳೆ ತುಂಬಾ ವಿಶೇಷವಾಗಿರುತ್ತದೆ. ಇದೇ ಮಳೆಯ ಮಜಾ ತೆಗೆದುಕೊಳ್ಳಲು ಸದ್ಯ ಈ ಫೇಮಸ್ ಜೋಡಿ ಮನೆಯಿಂದ ಹೊರಗೆ ಬಿದ್ದಿದೆ.

ವಿರಾಟ್ ಮತ್ತು ಅನುಷ್ಕಾ ಇಬ್ಬರು ಕೂಡಿ ಒಂದು ಆಡ್ ಶೂಟ್ ಸಲುವಾಗಿ ಮುಂಬೈ ಹತ್ತಿರದ ಮಡ್ ಐಲ್ಯಾಂಡ್ ಗೆ ಹೋಗಿದ್ದರು. ಶೂಟಿಂಗ್ ಮುಗಿಸಿ ಅಲ್ಲಿಂದ ಮರಳಿ ಬರುತ್ತಿರುವಾಗ ಇಬ್ಬರೂ ಕೂಡಿ ಕಪ್ಪು ಬಣ್ಣದ ಸ್ಕೂಟಿ ಮೇಲೆ ಸವಾರಿ ಮಾಡಿದ್ದಾರೆ. ಇಬ್ಬರು ಕಪ್ಪು ಬಣ್ಣದ ಹೆಲ್ಮೆಟ್ ತೊಟ್ಟು ಪ್ರವಾಸ ಶುರುಮಾಡಿದ್ದಾರೆ.

ಇಷ್ಟಾದರೂ ಸಹ ಈ ಸ್ಟಾರ್ ಕಪಲ್ಗಳಿಗೆ ಕ್ಯಾಮೆರಾಮೆನ್ ಒಬ್ಬನು ಸರಿಯಾಗಿ ಗುರುತಿಸಿದ್ದಾನೆ. ಜೊತೆಗೆ ಫ್ಯಾನ್ಸಗಳು ಸಹ ಅವರ ಫಾಲೋ ಮಾಡಿದ್ದಾರೆ. ನಂತರ ಇಬ್ಬರೂ ಕೂಡಿ ಕ್ಯಾಮೆರಾ ಮುಂದೆ ಕೆಲವೊಂದು ಫೋಟೋಗಳನ್ನು ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ವಿರಾಟ್ ಅವರು ಸ್ಕೂಟಿ ನಡೆಸುತ್ತಿದ್ದರೆ ಅನುಷ್ಕಾ ಅವರ ಹಿಂದೆ ಕುಳಿತಿದ್ದರು. ಇವರಿಬ್ಬರ ಈ ಸ್ಕೂಟಿ ಪ್ರವಾಸ ನೋಡಿ ಅಭಿಮಾನಿಗಳು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಇಬ್ಬರು ಬಹಳ ದಿನಗಳ ನಂತರ ಮೀಡಿಯಾದ ಮುಂದೆ ಹಾಜರಾಗಿದ್ದಾರೆ. ಇವರಿಬ್ಬರೂ ಸಧ್ಯ ಪೇರೆಂಟ್ಸ್ ಆಗಿದ್ದಾರೆ. ಆವಾಗಿನಿಂದ ಮೀಡಿಯಾದ ಮುಂದೆ ತುಂಬಾ ಕಡಿಮೆಯೇ ಬರುತ್ತಿದ್ದಾರೆ.

ಮುಖ ಕಾಣದ ಹಾಗೆ ಕಪ್ಪು ಬಣ್ಣದ ಹೆಲ್ಮೆಟ್ ತೂಟ್ಟುಕೊಂಡರೂ ಅಭಿಮಾನಿಗಳು ಇವರಿಬ್ಬರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಂಬಾ ಸಮಯದವರೆಗೆ ಈ ಇಬ್ಬರಿಗೂ ಅಭಿಮಾನಿಗಳು ಫಾಲೋ ಮಾಡುತ್ತಿದ್ದರು. ಈ ಕಪಲ್ಸ್ ಯಾವತ್ತೂ ಹೀಗೆ ಟು ವೀಲರ್ ಮೇಲೆ ಕಾಣಿಸಿಕೊಂಡಿಲ್ಲ.

ಸದ್ಯಕ್ಕೆ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ನಿಂದ ದೂರವಿದ್ದು ತಮ್ಮ ಫ್ಯಾಮಿಲಿ ಜೊತೆಗೆ ಸಮಯವನ್ನು ಕಳೆಯುತ್ತಿದ್ದಾರೆ. ಅನುಷ್ಕಾ ಅವರೂ ಸಹ ತಮ್ಮ ಚಿತ್ರೀಕರಣದಿಂದ ರಜೆ ತೆಗೆದುಕೊಂಡಿದ್ದಾರೆ.