ಎಕ್ಸಪ್ರೆಸ್ ವೇ ಪ್ಲಾನ್ ನಲ್ಲಿ ಅಡ್ಡಿಯಾಗುತ್ತಿತ್ತು 1.5 ಕೋಟಿ ರೂಪಾಯಿಗಳ “ರೈತನ ಕನಸಿನ ಮನೆ”; ಆ ಮನೆಯನ್ನೇ ಲಿಫ್ಟ್ ಮಾಡಿದ ರೈತ!

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ರೈತನ ಮನೆಯೊಂದು ಭಾರಿ ಸುದ್ದಿಗೆ ಕಾರಣವಾಗಿದೆ. ರೈತ ತಾನು ಕಟ್ಟಿದ ಸುಮಾರು 1.5 ಕೋಟಿ ರೂಪಾಯಿಗಳ ಕನಸಿನ ಮನೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಲು ಮಾಡಿದ ಪ್ಲಾನ್ ತುಂಬಾ ಸಕ್ಕತ್ತಾಗಿದೆ. ಏನದು ನೋಡೋಣ ಬನ್ನಿ.

ಪ್ರಸ್ತುತ ವಿಷಯ ಪಂಜಾಬ್ ನ ಸಂಗರೂರ್ ಜಿಲ್ಲೆಯಿಂದ ವರದಿಯಾಗಿದೆ. ಇಲ್ಲಿರುವ ಸುಖವಿಂದರ್ ಸಿಂಹ ಸುಖಿ ಹೆಸರಿನ ರೈತನ ಮನೆ ದೆಹಲಿ – ಜಮ್ಮು- ಕಟರಾ ಎಕ್ಸಪ್ರೆಸ್ ವೇ ಮಧ್ಯದಲ್ಲಿ ತೊಡಕಾಗುತ್ತಿತ್ತು. ಸುಮಾರು ಒಂದುವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಕಟ್ಟಿಸಿದ ಐಷಾರಾಮಿ ಮನೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ರೈತ ಒಂದು ಜುಗಾಡು ಪ್ಲಾನ್ ಗೆ ಇಳಿದಿದ್ದಾನೆ. ಈ ಪ್ಲಾನ್ ಮುಖಾಂತರ ರೈತನು ತಾನು ಕಟ್ಟಿದ ಸುಂದರವಾದ ಕನಸಿನ ಮನೆಯನ್ನು 500 ಅಡಿಗಳವರೆಗೆ ಬೇರೆ ಸ್ಥಳಕ್ಕೆ ಶಿಫ್ಟ್ ಮಾಡುತ್ತಿದ್ದಾನೆ. ಈ ಜುಗಾಡು ಟೆಕ್ನಿಕ್ ನಿಂದಾಗಿ ರೈತ ತನ್ನ ಮನೆಯ ಜೊತೆಗೆ ಸರಕಾರದ ಪ್ಲಾನ್ ಗೂ ಯಾವುದೇ ರೀತಿಯ ಅಡ್ಡಿಯಾಗದಂತೆ ವರ್ತಿಸಿದ್ದಾನೆ.

ಸಂಗರೂರ್ ಜಿಲ್ಲೆಯ ರೋಷನ್ ವಾಲಾ ಹೆಸರಿನ ಊರೊಂದಿದೆ. ಪ್ರಸ್ತುತ ದೆಹಲಿ – ಕಟ್ರಾ – ಜಮ್ಮು ಎಕ್ಸಪ್ರೆಸ್ ಹೈವೇ ಇಲ್ಲಿಂದಲೇ ಹೋಗಲಿದೆ. ಇದಕ್ಕಾಗಿ ಅನೇಕ ರೈತರ ಭೂಮಿಯನ್ನು ಯೆಕ್ವಾಯರ್ ಮಾಡಿಕೊಳ್ಳಲಾಗಿದೆ. ಸುಖವಿಂದರ್ ಹೆಸರಿನ ಈ ರೈತನ ಎರಡೂವರೆ ಎಕರೆ ತೋಟ ಎಕ್ಸಪ್ರೆಸ್ ವೇಯ ಮಧ್ಯದಲ್ಲಿ ಬರುತ್ತಿತ್ತು. ಹೀಗಿರುವಾಗ ಸರ್ಕಾರ ಭೂ ಸ್ವಾಧೀನ ಮಾಡಿಕೊಳ್ಳುವಾಗ ಈ ರೈತನ ಒಂದು ಚಿಕ್ಕ ಫ್ಯಾಕ್ಟರಿ ಹಾಗೂ ಮನೆ ಮದ್ಯದಲ್ಲಿ ಬಂದವು. ರೈತ ಮೊದಲು ಫ್ಯಾಕ್ಟರಿಯನ್ನು ತೆಗೆದು ಹಾಕಿದ. ಆದರೆ ಮನೆಯನ್ನು ಮಾತ್ರ ತೆಗೆಯಲು ಆತನಿಗೆ ಇಷ್ಟವಿರಲಿಲ್ಲ.

ಸುಖವಿಂದರ ಹೇಳುವ ಹಾಗೆ ಒಂದೂವರೆ ಕೋಟಿ ರೂಪಾಯಿಗಳ ಈ ಮನೆಯನ್ನು ಕಟ್ಟಲು ಸಂಪೂರ್ಣವಾಗಿ ಎರಡು ವರ್ಷ ತಗಲಿತು. 2019 ರಲ್ಲಿ ಮನೆ ಸಂಪೂರ್ಣವಾಗಿ ತಯಾರಾಗಿತ್ತು. ತನ್ನ ಸಹೋದರನ ಜೊತೆಗೆ ಸುಖವಿಂದರ್ ಇದೇ ಮನೆಯಲ್ಲಿ ಇರುತ್ತಾರೆ. ಇಂಥದ್ದರಲ್ಲಿ ಮತ್ತೊಮ್ಮೆ ಮನೆ ಕಟ್ಟುವುದೆಂದರೆ ತುಂಬಾ ಕಷ್ಟದ ಕೆಲಸ ಹಾಗೂ ಹಣದ ಅಪವ್ಯಯ ಎಂದು ತಿಳಿದು ಸಂಪೂರ್ಣ ಮನೆಗೆ ಮನೆಯಲ್ಲೇ ಬೇರೆಡೆಗೆ ಲಿಫ್ಟ್ ಮಾಡುವುದಾಗಿ ವಿಚಾರ ಮಾಡಿದರು. ಹಾಗೂ ಕೆಲಸಕ್ಕೆ ಶುರು ಹಚ್ಚಿಕೊಂಡರು.

ಸದ್ಯ ಈ ಮನೆಯನ್ನು ಎರಡು ತಿಂಗಳ ಅವಧಿಯಲ್ಲಿ ವಿಶೇಷ ಟೆಕ್ನಿಕ್ ಜೊತೆಗೆ ಹಾಗೂ ದೇಸಿ ಜುಗಾಡ್ ಹೀಗೆ ಎಲ್ಲವನ್ನು ಮಿಕ್ಸ್ ಮಾಡಿ ಸುಮಾರು 500 ಅಡಿ ದೂರ ಸಂಪೂರ್ಣ ಮನೆಯನ್ನೇ ಶಿಫ್ಟ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ 250 ಅಡಿ ಶಿಫ್ಟ್ ಮಾಡುವ ಕೆಲಸ ಪೂರ್ಣವಾಗಿದೆ. ಇನ್ನು 250 ಅಡಿಗಳವರೆಗೆ ಶಿಫ್ಟ್ ಮಾಡುವ ಕೆಲಸ ಬಾಕಿ ಇದೆ. ಈ ಕೆಲಸಕ್ಕಾಗಿ ಸುಮಾರು 40 ಲಕ್ಷ ರೂಪಾಯಿಗಳವರೆಗೆ ಈ ರೈತ ಖರ್ಚು ಮಾಡಲಿದ್ದಾರೆ.

ಈ ಕೆಲಸವನ್ನು ಮಾಡುತ್ತಿರುವ ಇಂಜಿನಿಯರ್ ಹೇಳುವ ಪ್ರಕಾರ ಪಂಜಾಬ್ನಲ್ಲಿ ಈ ರೀತಿಯ ಪ್ರಾಜೆಕ್ಟ್ ಮೊಟ್ಟ ಮೊದಲ ಬಾರಿ ನಡೆಯುತ್ತಿದೆ. ಈ ಕೆಲಸ ನಮಗೆ ನಿಜಕ್ಕೂ ಚಾಲೆಂಜ್ ಆಗಿದೆ ಅಂತ ಹೇಳುತ್ತಾರೆ ಎಂಜಿನಿಯರ್. ಈ ದೊಡ್ಡದಾದ ಮನೆಯನ್ನು ಒಂದು ಎರಡು ಅಡಿಗಳಷ್ಟಲ್ಲ ಸುಮಾರು 500 ಅಡಿಗಳವರೆಗೆ ಶಿಫ್ಟ್ ಮಾಡಬೇಕಾಗಿದೆ. ಹೀಗಾಗಿ ಪ್ರತಿಯೊಂದು ಕೆಲಸ ನಾವು ತುಂಬಾ ಸೂಕ್ಷ್ಮತೆಯಿಂದ ಮಾಡುತ್ತಿದ್ದೇವೆ. ಈ ಕೆಲಸ ಮಾಡುವಾಗ ದಿನಕ್ಕೆ 10 ಅಡಿಗಳಷ್ಟು ಮನೆಯನ್ನು ಬೇರೆ ಸ್ಥಳಕ್ಕೆ ಸರಿಸುತ್ತಿದ್ದೇವೆ. ಈ ಎಲ್ಲ ಕೆಲಸ ವಾಹನಗಳನ್ನು ಎತ್ತುವ ಜಾಕ್ ನಿಂದ ಮಾಡುತ್ತಿದ್ದೇವೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಾವು ಒಂದು ಕೋಡ್ ನೀಡುತ್ತೇವೆ. ಅದರ ಪ್ರಕಾರವೇ ಎಲ್ಲರೂ ಏಕಕಾಲಕ್ಕೆ ಈ ಕೆಲಸದಲ್ಲಿ ಶಾಮೀಲಾಗುತ್ತಾರೆ ಎಂದು ಪ್ರಸ್ತುತ ಮನೆಯನ್ನು ಶಿಫ್ಟ್ ಮಾಡುತ್ತಿರುವ ಕೆಲಸ ನೋಡಿಕೊಳ್ಳುವ ಇಂಜಿನಿಯರ್ ಹೇಳುತ್ತಾರೆ.

ವಿಡಿಯೋ ನೋಡಿ