Video; ಈಜಾಡುವಲ್ಲಿ ಹಗ್ಗದ ಮೇಲಿಂದ ಸ್ಟಂಟ್ ಮಾಡುವಾಗ ಹಠಾತ್ ಸರಿಯಿತು ಕಾಲ್ ಕೆಳಗಿನ ದೊಡ್ಡ ಬಂಡೆಗಲ್ಲು! 😳
ನೀರು ಎಂದಾಗ ಮಸ್ತಿ, ಮಜಾ ಇಲ್ಲದೆ ಹೇಗೆ? ಆದರೆ ಈ ಹುಡುಗಾಟ ಕೆಲವು ಬಾರಿ ಕೆಲವರಿಗೆ ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ. ಇಂಥ ಸಂದರ್ಭದಲ್ಲಿ ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಎಲ್ಲವೂ ok. ಇಲ್ಲವಾದರೆ ಕಥೆ ಮುಗಿದು ಬಿಡುತ್ತದೆ. ಬಾವಿಯಲ್ಲಿ ಹುಡುಗರು ಹುಡುಗರು ಕೂಡಿ ಆಟ ಆಡುವಾಗ ನಡೆದ ಪ್ರಸಂಗದ ವೈರಲ್ ವಿಡಿಯೋ ಒಂದನ್ನು ಇಲ್ಲಿಯ ವಿಡಿಯೋದಲ್ಲಿ ನೋಡಲಿದ್ದೀರಿ.
ಈ ವಿಡಿಯೋದಲ್ಲಿ ಹುಡುಗರು ಕೂಡಿ ಬಾವಿಯಲ್ಲಿ ಮಜಾ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾವಿಯೊಳಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಹಗ್ಗವನ್ನು ಕಟ್ಟಿದ್ದಾರೆ. ನೀರಿನಲ್ಲಿ ಆಟ ಆಡುವಾಗ ಹಾಗೂ ಸಮವಯಸ್ಸಿನ ಹುಡುಗರೆಲ್ಲ ಕೂಡಿದಾಗ ಸುಮ್ಮನೆ ಆಡುವುದು ಹೇಗೆ ಸಾಧ್ಯ? ಹೀಗಾಗಿ ಅಲ್ಲಿ ಅವರದೇ ಚೆಲ್ಲಾಟ ಜೋರಾಗಿ ನಡೆದಿದೆ. ಆ ಸಂದರ್ಭದಲ್ಲಿ ಒಂದು ಘಟನೆ ಅಲ್ಲಿ ನಡೆಯುತ್ತದೆ. ಅದೇ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಒಂದು ಬದಿಯಲ್ಲಿ ನಿಂತ ಇಬ್ಬರು ಹುಡುಗರು ಹಗ್ಗಿನ ಮೇಲಿಂದ ನಡೆದುಕೊಂಡು ಬರಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಮೊದಲು ಒಬ್ಬ ಹುಡುಗನು ಹಗ್ಗಿನ ಮೇಲಿನಿಂದ ನಡೆದು ಮುಂದೆ ಬರಲು ಯತ್ನ ಮಾಡುತ್ತಿದ್ದಾನೆ. ಇನ್ನೊಬ್ಬ ಆತನ ಹಿಂದೆ ಒಂದು ದೊಡ್ಡ ಬಂಡೆಯ ಮೇಲೆ ನಿಂತಿದ್ದಾನೆ. ಆಗ ನಿಂತ ಹುಡುಗನಿಗೆ ತನ್ನ ಕಾಲ್ ಕೆಳಗಿನ ಬಂಡೆ ನಿಧಾನವಾಗಿ ಸರಿಯುತ್ತಿರುವ ಅನುಭವ ಆಗಿದೆ. ಆ ಅನುಭವ ಆಗುತ್ತಲೇ ಹುಡುಗನು ತಕ್ಷಣ ಅಲ್ಲಿಂದ ಬಾವಿಯ ಗೋಡೆಯ ಮೇಲೆ ಏರಿದ್ದಾನೆ ಇತ್ತ ಹಗ್ಗದ ಮೇಲೆ ನಡೆಯಲು ಯತ್ನಿಸುತ್ತಿರುವ ಹುಡುಗ ಬ್ಯಾಲೆನ್ಸ್ ತಪ್ಪಿ ನೀರಿನಲ್ಲಿ ಸಮಾರ್ ಎಂದು ಬಿದ್ದಿದ್ದಾನೆ. ಇಲ್ಲಿ ಇಬ್ಬರೂ ಹುಡುಗರ ಅದೃಷ್ಟ ತುಂಬಾ ಚೆನ್ನಾಗಿತ್ತು ಎಂದೇ ಹೇಳಬಹುದು. ಇಬ್ಬರು ಕ್ಷಣದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಯಾವುದೇ ರೀತಿಯ ಗಂಡಾಂತರದಲ್ಲಿ ಸಿಕ್ಕರೂ ಪ್ರಾಣ ಕಳೆದುಕೊಳ್ಳುವುದರಲ್ಲಿ ಸಂಶಯವಿರಲಿಲ್ಲ. ವಿಡಿಯೋ ನೋಡಿದಾಗ ಬಾಯಿಯಿಂದ ಒಮ್ಮೆಲೇ ಮಾತುಗಳೇ ಹೊರಡುವುದಿಲ್ಲ.
ವಿಡಿಯೋ ನೋಡಿ
View this post on Instagram
ಈ ವಿಡಿಯೋ vijayarasu._a ಹೆಸರಿನ ಪೇಜ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 3.6 ಮಿಲಿಯನ್ ಜನರು ನೋಡಿದ್ದಾರೆ. ಹಾಗೂ ಸುಮಾರು 1.6 ಲಕ್ಷ ಜನರು ಲೈಕ್ ಮಾಡಿದ್ದಾರೆ.