ಗೊರಟೆಯೇ ಇಲ್ಲದ ರಸಭರಿತ ಮಾವು ನೋಡಿದ್ದೀರಾ? ಇಲ್ಲವಾದರೆ ಒಮ್ಮೆ ನೋಡಿ ಈ ಜ್ಯೂಸಿ mango.

ಮಾವು ಹಣ್ಣುಗಳ ರಾಜ ಸುಮ್ಮನೆ ಎನ್ನುವುದಿಲ್ಲ. ಬಲ್ಲವರೇ ಬಲ್ಲರು ಬೆಲ್ಲದ ರುಚಿ ಎನ್ನುವ ಹಾಗೆ ಮಾವಿನ ಸವಿಯೂ ಸಹ ಬಲ್ಲವರೇ ಬಲ್ಲರು. ಮಾವು ಯಾರಿಗಿಷ್ಟವಿಲ್ಲ ಹೇಳಿ? ಒಬ್ಬರಾದರೂ ಸಿಗುತ್ತಾರಾ? ಎಂದೆಂದಿಗೂ ಇಲ್ಲ. ಹಾಗೆ ನೋಡಲಾಗಿ ಸಾಕಷ್ಟು ಜನರಿಗೆ ಮಾವಿನ ಹಣ್ಣಿನ ಬಗ್ಗೆ ಒಂದು ಬೇಜಾರು ಕಾಡುತ್ತದೆ. ಅದೇನೆಂದರೆ ಈ ಮಾವಿನಲ್ಲಿ ಗೊರಟೆ ಯಾಕೆ ಅಂತ? ಅದಷ್ಟು ಸಹ ಇಲ್ಲದೆ ಬರೀ ರಸಭರಿತವಾದ ತಿರುಳೆ ತುಂಬಿರಬೇಕಾಗಿತ್ತು ಎನ್ನುವದು ಮಾವು ಪ್ರಿಯರ ಅನಿಸಿಕೆ, ಅಲ್ವಾ? ಸದ್ಯ ಈ ಹಣ್ಣಿನೊಳಗೆ ಗೊರಟೆಯೇ ಇಲ್ಲದ ಮಾವನ್ನು ನಿಮಗಾಗಿ ಇಲ್ಲಿ ತಂದಿದ್ದೇವೆ, ನೋಡಿ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋದಲ್ಲಿ ಮಾವಿನ ಆಕಾರ ಸಾಕಷ್ಟು ದೊಡ್ಡದಾಗಿದೆ. ಎಲ್ಲಕ್ಕೂ ಮಹತ್ವದ ವಿಷಯ ಏನೆಂದರೆ ಈ ಮಾವಿನ ಹಣ್ಣಿನಲ್ಲಿ ಚಿಕ್ಕದಾದ ಗೊರಟೆ ಸಹ ಕಂಡು ಬರುವದಿಲ್ಲ. ಈ ಯುವತಿ ಮಾವನ್ನು ಕೊಯ್ದು ತೋರಿಸುತ್ತಾಳೆ. ನಂತರ ಚಮಚೆಯಿಂದ ಒಳಗಿನ ತಿರುಳನ್ನು ತಿರುವಿ ತೋರಿಸುತ್ತಾಳೆ ಆಗ ಈ ಮಾವಿನ ಹಣ್ಣಿನಲ್ಲಿ ಬರೀ ಜ್ಯೂಸಿಯಾದ ತಿರುಳೆ ತುಂಬಿದೆ. ಹೆಸರಿಗೂ ಸಹ ಚಿಕ್ಕ ಗೊರಟೆ ಎಲ್ಲಿಯೂ ಕಾಣುತ್ತಿಲ್ಲ. ಹೇಗಿದೆ ಫ್ರೆಂಡ್ಸ್ ಈ ಮಾವು? ನೀವೇ ಹೇಳಿ.

ವಿಡಿಯೋ ನೋಡಿ

https://twitter.com/psxphoto/status/1560004982229073920?t=QeSoo7OoK7SsNSvY7GBTsA&s=19

ಪ್ರಸ್ತುತ ವಿಡಿಯೋ ಇನ್ಸ್ಟಾ ಗ್ರಾಂ ನಲ್ಲಿ H0W_THlNGS_W0RK ಹೆಸರಿನ ಐಡಿ ಯಿಂದ ಶೇರ್ ಮಾಡಲಾಗಿದ್ದು ಈಗಾಗಲೇ ಈ ವಿಡಿಯೋ ಲಕ್ಷಾವಧಿ ಜನರಿಗೆ ಬಾಯಿಯಲ್ಲಿ ನೀರು ತರಿಸಿದೆ. ಹಾಗೆ ನೋಡಲಾಗಿ ನಿಮ್ಮ ಬಾಯಿಯಲ್ಲಿಯೂ ನೀರು ಬಂದಿದೆ ಆ ಮಾತು ಬೇರೆ, ಅಲ್ವೇ?