Articles

ಹಳ್ಳದಲ್ಲಿ ಬಿದ್ದ ಟ್ರಕ್ ಲಿಫ್ಟ್ ಮಾಡಲು ಹೋಗಿ ತಾನೇ ಹಳ್ಳಕ್ಕೆ ಬಿದ್ದ ಅಜಾನುಬಾಹು ಕ್ರೇನ್! ವೈರಲ್ ಆಯಿತು ವಿಡಿಯೋ…

ಕಸದ ತೊಟ್ಟಿಯಲ್ಲಿ ಬಿದ್ದ ವ್ಯಕ್ತಿಯನ್ನು ಸಹಾಯ ಮಾಡಲು ಹೋಗಿ ತಾನೇ ಕಸದ ತೊಟ್ಟಿಯಲ್ಲಿ ಬೀಳುವಂತಹ ಪರಿಸ್ಥಿತಿಗೆ ಹೋಲುವಂಥ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಕಾಣಸಿಗುತ್ತಿದೆ. ಈ ವಿಡಿಯೋದಲ್ಲಿ ಅದ್ಯಾವ ಘಟನೆ ನಡೆದಿದೆ ಎಂಬುದನ್ನು ಬನ್ನಿ ನೋಡೋಣ.

ವಿಡಿಯೋದ ಈ ದೃಶ್ಯದಲ್ಲಿ ಒಂದು ಸೇತುವೆ ಕಂಡು ಬರುತ್ತಿದೆ. ಸೇತುವೆಯ ಮಗ್ಗುಲಲ್ಲಿ ಹಳ್ಳ ಒಂದು ಹರಿದು ಹೋಗಿದೆ. ಪ್ರಸ್ತುತ ಹಳ್ಳದಲ್ಲಿ ಆಯತಪ್ಪಿ ದೊಡ್ಡದಾದ ಟ್ರಕ್ ಒಂದು ಬಿದ್ದಿದೆ. ಬಿದ್ದ ಟ್ರಕ್ಕನ್ನು ಲಿಫ್ಟ್ ಮಾಡಲು ದೊಡ್ಡದಾದ ಕ್ರೇನ್ ಸಹಾಯಕ್ಕೆ ಬಂದಿದೆ. ಲಿಫ್ಟ್ ಮಾಡುವ ಕೆಲಸ ಎಲ್ಲವೂ ಚೆನ್ನಾಗಿ ನಡೆದಿದೆ. ಮಧ್ಯದಲ್ಲಿ ಒಂದು ದುರಂತ ಕ್ಷಣದಲ್ಲಿ ನಡೆದು ಹೋಗುತ್ತದೆ. ಅದೇನೆಂದರೆ, ಕ್ರೇನ್ ಮುಖಾಂತರ ಟ್ರಕ್ ಲಿಫ್ಟ್ ಮಾಡುವಾಗ ಒಮ್ಮೆಲೇ ಟ್ರಕ್ ನ ಭಾರವಾದ ತೂಕಕ್ಕೆ ರೋಪ್ ಕಟ್ ಆಗಿ ಬಿಡುತ್ತದೆ. ಆಗ ಟ್ರಕ್ ಮತ್ತೆ ಹಳ್ಳದಲ್ಲಿ ಜೋರಾಗಿ ಬಿದ್ದುಬಿಡುತ್ತದೆ. ರೋಪ್ ಕಟ್ ಆದ ನಂತರ ಕ್ರೇನ್ ನ ಬ್ಯಾಲೆನ್ಸ್ ಸಹ ತಪ್ಪಿಬಿಡುತ್ತದೆ. ಹೀಗಾಗಿ ಕ್ರೇನ್ ಯರ್ರಾಬಿರ್ರೀಯಾಗಿ ಓಲಾಡುತ್ತಾ ಹವೆಯಲ್ಲಿ ಎತ್ತರವಾಗಿ ಪುಟಿದು ದೊಡ್ಡದಾದ ಶಬ್ದದೊಂದಿಗೆ ಅದೇ ಹಳ್ಳದ ನೀರಿನಲ್ಲಿ ಟ್ರಕ್ಕಿನ ಜೊತೆಗೆ ಬಿದ್ದುಬಿಡುತ್ತದೆ. ಈ ಸಂದರ್ಭದಲ್ಲಿ ಕ್ರೇನ್ ಆಪರೇಟ್ ಮಾಡುವ ಡ್ರೈವರ್ ಸಹ ಅದರ ಜೊತೆಗೆ ನೀರಿನಲ್ಲಿ ಬೀಳುತ್ತಾನೆ. ಆತನ ಅದೃಷ್ಟ ಚೆನ್ನಾಗಿರುವುದರ ಕಾರಣ ನೀರಿನಲ್ಲಿ ಈಜಾಡುತ್ತಾ ಹೊರಗೆ ಬರುವುದು ಕಂಡುಬರುತ್ತದೆ. ಪ್ರಸ್ತುತ ದೃಶ್ಯ ನೋಡಲು ತುಂಬಾ ಭಯ ಹುಟ್ಟಿಸುವಂತಿದೆ.

ವಿಡಿಯೋ ನೋಡಿ

 

View this post on Instagram

 

A post shared by @riya_baby___3

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ riya_baby_3 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಮತ್ತು ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

Leave a Comment

Your email address will not be published. Required fields are marked *