ಚಲಿಸುತ್ತಿದ್ದ ಸ್ಕೂಟಿಗೆ ಇದ್ದಕ್ಕಿದ್ದಂತೆ ಹೊತ್ತಿಕೊಂಡ ಬೆಂಕಿ; ರೋಮಾಂಚನ ಘಟನೆ ಸಿಸಿಟಿವಿಯಲ್ಲಿ ಸೆರೆ!! ವೀಡಿಯೋ ನೋಡಿ….
ಭಾನುವಾರ ಸಂಜೆ ಅಲಿಬಾಗ್ ನಗರದ ಪಿಎನ್ಪಿನಗರ ಮುಂಭಾಗದ ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟರ್ನ ಕೆಳಭಾಗದಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಇದನ್ನು ಗಮನಿಸಿದ ಪಾದಚಾರಿ ತಕ್ಷಣ ಬೈಕ್ ಚಲಾಯಿಸುತ್ತಿದ್ದವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಬೈಕ್ ಮೇಲಿದ್ದ ಇಬ್ಬರೂ ಕೆಳಗಿಳಿದಿದ್ದಾರೆ. ಮೊದಲು ನೀರಿನಿಂದ ಬೆಂಕಿ ನಂದಿಸಿ ನಂತರ ಫಾಯರ್ ಫೈಟರ್ ಸಹಾಯದಿಂದ ಬೆಂಕಿ ನಂದಿಸಲಾಯಿತು. ಹಾಗಾಗಿ ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಎಲ್ಲಾ ಥ್ರಿಲ್ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದೇ ವೇಳೆ ದ್ವಿಚಕ್ರ ವಾಹನಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ವೀಕ್ಷಕರು ಆ ಘಟನೆಯ ಸ್ಥಳದಲ್ಲಿ ಜಮಾಯಿಸಿದ್ದರು. ಹೀಗಾಗಿ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಇದೇ ಮೊದಲಲ್ಲ. ಇದಕ್ಕಿಂತ ಮೊದಲು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಈ ರೀತಿಯಾಗಿ ಬೆಂಕಿ ಹೊತ್ತಿಕೊಳ್ಳುವ ಮೊದಲನೆಯ ಕಾರಣವೆಂದರೆ ದ್ವಿಚಕ್ರ ವಾಹನವನ್ನು ಮೋಡಿಫಾಯಿಡ್ ಮಾಡುವದು ಅಲ್ಲದೆ ಲೈಟಿಂಗ್ ಅಥವಾ ಮೊಬೈಲ್ ಚಾರ್ಜಿಂಗ್ ಸೌಲಭ್ಯಗಳನ್ನು ದ್ವಿಚಕ್ರ ವಾಹನಗಳಲ್ಲಿ ಸೇರಿಸುವುದರಿಂದ ಆಗಾಗ್ಗೆ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಬಹುದು ಮತ್ತು ಬೆಂಕಿಗೆ ಕಾರಣವಾಗಬಹುದು. ಮತ್ತೊಂದು ಕಾರಣ ವೆಂದರೆ ಇಂಧನ(ಪೆಟ್ರೋಲ್) ಸೋರಿಕೆಯೂ ಸಹ ವಾಹನಕ್ಕೆ ಬೆಂಕಿ ಬೀಳಲು ಕಾರಣವಾಗಬಹುದು. ಹಾಗಾಗಿ ಬೈಕ್ ನ್ನು ಕಂಪನಿ ಕೊಟ್ಟಿರುವಂತೆಯೇ ಬಳಸಿ ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬೇಡಿ. ಇದರೊಂದಿಗೆ ಕಾಲಕಾಲಕ್ಕೆ ಅಧಿಕೃತ ಸರ್ವಿಸ್ ಸೆಂಟರ್ ಗಳಲ್ಲಿ ಆಗಾಗ್ಗೆ ಬೈಕ್ ನ ಸರ್ವಿಸಿಂಗ ಮಾಡಿಸುವದು ತುಂಬಾ ಮುಖ್ಯವಾಗಿದೆ.
ವಿಡಿಯೋ ನೋಡಿ…
Alibaug: धावत्या दुचाकीला अचानक लागली आग; प्रकार सीसीटीव्हीत कैद#Alibaug #Fire #Scooter #AlibaugNews #ScooterFire #ViralVideo
Video Credit: Sachin Kadam pic.twitter.com/fu4gXI2gei
— Akshay Baisane | अक्षय बैसाणे (@Baisaneakshay) September 5, 2022