ಏರೋಪ್ಲೇನ್ ಒಂದು ಬಾಕಿ ಉಳಿದಿತ್ತು; ಅಲ್ಲಿಯೂ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದಾನೆ ಸೆಲ್ಸ್ ಮ್ಯಾನ್!
ಟ್ರೈನ್ ಮತ್ತು ಬಸ್ಸುಗಳಲ್ಲಿ ಮಾರಾಟ ಮಾಡುವವರನ್ನು ಪ್ರವಾಸದ ಮಧ್ಯೆ ಸಾಕಷ್ಟು ಬಾರಿ ನೋಡಿರಬೇಕು. ಪ್ರತಿ ಬಸ್ ಸ್ಟಾಪ್ ಗಳಲ್ಲಿ ಅಥವಾ ಸ್ಟೇಷನ್ಗಳಲ್ಲಿ ವಾಹನಗಳು ನಿಂತಾಗ ಸೇಲ್ಸ್ ಮನ್ ಗಳು ಏರುತ್ತಾರೆ ತಮ್ಮ ವಸ್ತುಗಳ ಬಗ್ಗೆ ಅಡ್ವಟೈಸಿಂಗ್ ಮಾಡಿ ಮಾರಾಟ ಮಾಡುತ್ತಾರೆ ಮತ್ತೆ ನಂತರ ಇಳಿದು ಹೋಗುತ್ತಾರೆ. ಇವರು ಮಾರಾಟ ಮಾಡುವ ಸ್ಟೈಲೇ ಬೇರೆಯಾಗಿರುತ್ತದೆ. ಎಷ್ಟೋ ಸಲ ಇವರ ಸ್ಟೈಲ್ ನೋಡಿ ಸಾಕಷ್ಟು ನಗುವುದುಂಟು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ನಗು ಬರುವುದು ಖಂಡಿತ.
ಈ ವಿಡಿಯೋದಲ್ಲಿ ಕಂಡು ಬರುವ ಸೆಲ್ಸ್ ಮ್ಯಾನ್ ಸ್ವಲ್ಪ ಹೈ ಫೈ ಇದ್ದಾನೆ. ಕಾರಣ ಈತ ಬಸ್ಸು ಅಥವಾ ಟ್ರೈನ್ ನಲ್ಲಿ ಸೇಲ್ ಮಾಡುತ್ತಿಲ್ಲ. ಈತ ಸೆಲ್ ಮಾಡುತ್ತಿರುವ ಸ್ಥಳ ಏರೋಪ್ಲೇನ್. ಹೌದು ನೀವು ಓದುತ್ತಿರುವುದು ನಿಜ. ಪ್ರಸ್ತುತ ವ್ಯಕ್ತಿ ಏರೋಪ್ಲೇನ್ ನಲ್ಲಿಯೇ ಈ ಕೆಲಸ ಮಾಡುತ್ತಿದ್ದಾನೆ. ಒಂದು ವೇಳೆ ನಿಮಗೆ ನಂಬಿಕೆ ಇಲ್ಲದಿದ್ದರೆ ಮೊದಲು ಈ ಕೆಳಗಿನ ವಿಡಿಯೋ ನೋಡಿ…
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿ ಏರೋಪ್ಲೇನ್ ನಲ್ಲಿ ತನ್ನ ಸಾಮಾನುಗಳನ್ನು ಮಾರಾಟ ಮಾರುತ್ತಿರುವ ಸ್ಟೈಲ್ ಮಾಡುತ್ತಿದ್ದಾನೆ. ಈ ದೃಶ್ಯ ನೋಡಿದಾಗ ನಗು ತಡೆದುಕೊಳ್ಳುವುದು ಅಸಾಧ್ಯ. ಪ್ರಸ್ತುತ ವ್ಯಕ್ತಿ ತಮಾಷೆಗಾಗಿ ಎಲ್ಲರ ಮುಂದೆಯೇ ಏರೋಪ್ಲೇನ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಮಿಮಿಕ್ರಿ ಮಾಡುತ್ತಿದ್ದಾನೆ. ಆತನ ಸ್ಟೈಲ್ ನೋಡಿ ಸುತ್ತಲಿದ್ದವರು ಒಂದೇ ಸಮನೆ ನಗುತ್ತಿದ್ದಾರೆ. ನಿಜವಾಗಿ ಹೇಳಬೇಕಾದರೆ ಆತ ಸೆಲ್ಸ್ ಮೆನ್ ಅಲ್ಲ ಆದರೆ ಆ ರೀತಿಯ ಆಕ್ಟಿಂಗ್ ಏರೋಪ್ಲೇನ್ ನಲ್ಲಿ ಮಾಡುತ್ತಿದ್ದಾನೆ. ಹೀಗಾಗಿ ಈ ವಿಡಿಯೋ ತುಂಬಾ ವೈರಲ್ ಆಗಿದೆ.
ವಿಡಿಯೋ ನೋಡಿ
View this post on Instagram
ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಅದ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ನೋಡಿದ ನಂತರ ನೆಟ್ಟಿಗರು ನಕ್ಕು ನಕ್ಕು ತುಂಬಾ ತಮಾಷೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ತಮಾಷೆಯ ಈ ವಿಡಿಯೋ ಇಲ್ಲಿಯವರೆಗೆ 3.5 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 4 ಲಕ್ಷಕ್ಕೂ ಮೀರಿ ಲೈಕ್ಸ್ ಗಳನ್ನು ಪಡೆದಿದೆ.