Video; ಬೈಕ್ ಚೋರಿ ಮಾಡಿಕೊಂಡು ಓಡಿ ಹೋಗುವಾಗಲೇ ವಾಚ್ ಮ್ಯಾನ್ ಹಠಾತ್ ಬಂದ್ ಮಾಡಿದ ಗೇಟ್; ನಂತರದ ದೃಶ್ಯ..!😳

ಈಗಿನ ಕಳ್ಳರು ಮೊದಲಿಗಿಂತ ತುಂಬಾ ಆಕ್ಟಿವ್ ಆಗಿದ್ದಾರೆ. ಪೊಲೀಸರ ಅಂಜಿಕೆ ಸ್ವಲ್ಪವೂ ಉಳಿದಿಲ್ಲ. ಅವಕಾಶ ಸಿಗುವುದೇ ತಡ ವಸ್ತುಗಳಿರಲಿ, ಬೈಕುಗಳಿರಲಿ ಅಥವಾ ಫೋರ್ ವೀಲರ್ ಗಳಿರಲಿ ನೋಡು ನೋಡುವಷ್ಟರಲ್ಲಿ ಕೈಚಳಕ ತೋರಿಸಿ ಬಿಡುತ್ತಾರೆ. ಕೆಲವು ಸಲ ಈ ಕಳ್ಳರು ಅಂಥ ಪರಿಸ್ಥಿತಿಯಲ್ಲಿ ಒಮ್ಮೆಲೇ ಜನರ ಕೈಗೆ ಸಿಕ್ಕಿ ಹಾಕಿಕೊಳ್ಳುವುದೂ ಉಂಟು. ಕೆಲವೊಮ್ಮೆ ಈ ಕಳ್ಳರು ಜನರ ಕೈಯಲ್ಲಿ ಸಿಗದೇ ಚಾಲಾಕಿಯಿಂದ ಜಾರಿ ಹೋಗುತ್ತಾರೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.

ಈ ವಿಡಿಯೋದಲ್ಲಿ ಇಬ್ಬರು ಕಳ್ಳರು ಚಾಲಾಕಿಯಿಂದ ಬೈಕ್ ಕದ್ದುಕೊಂಡು ಓಡಿ ಹೋಗಬೇಕು ಎನ್ನುವಷ್ಟರಲ್ಲಿ ವಾಚ್ ಮ್ಯಾನ್ ತೋರಿದ ದಕ್ಷತೆಯಿಂದಾಗಿ ಕಳ್ಳರು ಸಿಕ್ಕಿ ಹಾಕಿಕೊಂಡಿದ್ದಾರೆ. ವಿಡಿಯೋದಲ್ಲಿ ಕಂಡು ಬರುವ ಪ್ರಕಾರ ಇಬ್ಬರು ಕಳ್ಳರು ಬೈಕ್ ಕಳ್ಳತನ ಮಾಡಿ ಓಡಿಸಿಕೊಂಡು ಹೋಗುವಷ್ಟರಲ್ಲಿ ಡ್ಯೂಟಿ ಮೇಲಿದ್ದ ವಾಚ್ ಮ್ಯಾನ್ ನೋಡಿದ್ದಾನೆ. ಇವರಿಬ್ಬರೂ ಓಡಿ ಹೋಗುವುದನ್ನು ಕಂಡ ವಾಚ್ ಮ್ಯಾನ್ ತಕ್ಷಣ ಆಕ್ಟಿವ್ ಮೋಡ್ನಲ್ಲಿ ಬಂದು ಸೊಸೈಟಿಯ ಮೇನ್ ಗೇಟ್ ಕ್ಷಣದಲ್ಲಿ ಬಂದ್ ಮಾಡಿದ್ದಾನೆ. ಇಬ್ಬರು ಕಳ್ಳರು ಗೇಟ್ ಬಂದ್ ಆಗುವ ಮುನ್ನವೇ ತಾವು ಬೈಕ್ ತೆಗೆದುಕೊಂಡು ಪಾಸ್ ಆಗಬೇಕೆಂದು ಬೈಕ್ ಮತ್ತಷ್ಟು ವೇಗದಲ್ಲಿ ಓಡಿಸಿದ್ದಾರೆ. ವಾಚ್ ಮ್ಯಾನ್ ತೋರಿದ ದಕ್ಷತೆಯಿಂದಾಗಿ ಕಳ್ಳರಿಬ್ಬರು ಗೇಟಿಗೆ ಜೋರಾಗಿ ಡಿಕ್ಕಿ ಹೊಡೆದು ಅಲ್ಲಿಯೇ ಬಿದ್ದಿದ್ದಾರೆ. ಈ ದೃಶ್ಯ ನೋಡಲು ತುಂಬಾ ಭಯಾನಕವಾಗಿದೆ. ಈ ಘಟನೆಯ ನಂತರ ತಕ್ಷಣ ಸೊಸೈಟಿಯ ನಿವಾಸಿಗಳು ಒಂದಾಗಿದ್ದಾರೆ. ಮತ್ತು ಕಳ್ಳರಿಗೆ ಹಿಡಿದಿದ್ದಾರೆ. ಇಷ್ಟಾದರೂ ಒಬ್ಬ ಕಳ್ಳ ಓಡಿ ಹೋಗುವುದರಲ್ಲಿ ಯಶಸ್ವಿಯಾಗಿದ್ದಾನೆ.

ವಿಡಿಯೋ ನೋಡಿ

ಪ್ರಸ್ತುತ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ ಸೋನು ಶರ್ಮ ಹೆಸರಿನ ಐಡಿ ಇಂದ ಶೇರ್ ಮಾಡಲಾಗಿದ್ದು ಸಾಕಷ್ಟು ಜನರು ಈ ವಿಡಿಯೋವನ್ನು ನೋಡಿದ್ದಾರೆ.