Articles

VIDEO: ವಿದೇಶಿ ಮಹಿಳೆ ಪಕ್ಕಾ ಹಳ್ಳಿ ಹೆಣ್ಣಿನ ಹಾಗೆ ತಲೆಯ ಮೇಲಿಟ್ಟುಕೊಂಡು ನಡೆದಳು ಮೇವಿನ ಗಂಟು..!

ಇಂಟರ್ನೆಟ್ ನಲ್ಲಿ ದಿನನಿತ್ಯ ಅನೇಕ ರೋಚಕ ಮತ್ತು ರಂಜಕವಾದ ವಿಡಿಯೋ ಕಂಟೆಂಟ್ ಗಳು ನೋಡಲು ಸಿಗುತ್ತವೆ. ಈ ರೀತಿಯ ಕಂಟೆಂಟ್ ಗಳು ನೆಟ್ಟಿಗರಿಗೆ ಅನೇಕ ರೀತಿಯ ಮಧುರ ಕ್ಷಣಗಳನ್ನು ನೀಡಿ ಹೋಗುತ್ತವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬ ವ್ಯಕ್ತಿ ಮನಮೆಚ್ಚುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದಾಗ ಹಳ್ಳಿಯನ್ನು ಹಾಗೂ ಹಳ್ಳಿಯ ಜೀವನವನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಗೆ ವಿಶೇಷ ಗೌರವ ಮೂಡುತ್ತದೆ.

ಪ್ರೀತಿ ಎಂದಿಗೂ ಯಾವ ಸೀಮೆ, ಭಾಷೆ, ಜಾತಿ,ಮತ್ತು ಧರ್ಮ ನೋಡುವುದಿಲ್ಲ. ಈ ಪ್ರವಾಹದಲ್ಲಿ ಬೀಳುವ ಜೀವಿಗಳ ಮನಸ್ಸು ಮುಂಜಾನೆಯ ಸೂರ್ಯೋದಯದ ಹಾಗೆ ತಿಳಿ ಮತ್ತು ಶುಭ್ರ ಅಷ್ಟೇ ಪವಿತ್ರವಾಗಿರುತ್ತದೆ. ಇಲ್ಲಿ ಒಬ್ಬರಿಗೊಬ್ಬರು ತಮ್ಮನ್ನೇ ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಸದ್ಯ ಇಂಟರ್ನೆಟ್ ನಲ್ಲಿ ವಿದೇಶಿ ಸೊಸೆ ಮತ್ತು ದೇಶಿ ಮಗನ ಜೊತೆಗಿನ ತುಂಬಾ ಒಳ್ಳೆಯ ಕೆಮಿಸ್ಟ್ರಿಯಿಂದ ಕೂಡಿದ ಕ್ಯೂಟ್ ವಿಡಿಯೋ ಒಂದು ನೋಡಲು ಸಿಗುತ್ತಿದೆ. ಈ ವಿಡಿಯೋ ನೋಡಿದ ನಂತರ ಹಳ್ಳಿಯನ್ನು ಹಾಗೂ ಹಳ್ಳಿಯ ಜೀವನವನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಗೆ ವಿಶೇಷ ಗೌರವ ಮೂಡುತ್ತದೆ. ವಿದೇಶಿ ಮಹಿಳೆ ಪಕ್ಕಾ ದೇಶಿ ಸ್ಟೈಲ್ ನಲ್ಲಿ ಮಾಡಿದ ಒಂದು ಕೆಲಸ ಹಳ್ಳಿಯ ಜವಾರಿ ಜನರಿಗೆ ತುಂಬಾ ಇಷ್ಟವಾಗುತ್ತಿದೆ.

ಅದೇನು ಮಾಡಿದ್ದಾಳೆ ನೋಡಿ ಈ ವಿಡಿಯೋದಲ್ಲಿ…

ವಿದೇಶಿಗರಿಗೆ ಇತ್ತೀಚೆಗೆ ಭಾರತೀಯ ಸಂಸ್ಕೃತಿಯ ಬಗ್ಗೆ ತುಂಬಾ ಆಕರ್ಷಣೆ ಮೂಡುತ್ತಿದೆ. ಮೊದಮೊದಲು ಅವರಿಗೆ ಭಾರತೀಯ ರೀತಿ ನೀತಿ ನೋಡಿದಾಗ ಆಶ್ಚರ್ಯ ನಿರ್ಮಾಣವಾದರೂ ನಂತರ ಮಾತ್ರ ಇದರಲ್ಲಿ ಆಸಕ್ತಿ ಉಂಟಾಗುತ್ತದೆ. ಪ್ರಸ್ತುತ ವಿಡಿಯೋವನ್ನು ನೋಡಿ, ಈ ವಿಡಿಯೋದಲ್ಲಿ ಆಸ್ಟ್ರೇಲಿಯಾದ ಹೆಣ್ಣುಮಗಳು ತೋಟದಲ್ಲಿ ಸುತ್ತಾಡುತ್ತಾ ಜಾನುವಾರುಗಳಿಗಾಗಿ ಮನೆಗೆ ತೆಗೆದುಕೊಂಡು ಹೋಗಲು ಕಟ್ಟಿಟ್ಟ ಮೇವಿನ ಗಂಟನ್ನು ಹಳ್ಳಿ ಹೆಣ್ಣಿನ ಹಾಗೆ ತುಂಬಾ ಸುಂದರವಾಗಿ ತನ್ನ ತಲೆಯ ಮೇಲಿಟ್ಟು ನಡೆಯಬೇಕೆನ್ನುತ್ತಾಳೆ. ತನ್ನ ಪತಿಯ ಸಹಾಯದಿಂದ ಅದನ್ನು ತಲೆಯ ಮೇಲಿಟ್ಟುಕೊಂಡು ನಡೆಯಲು ಶುರು ಮಾಡುತ್ತಾಳೆ. ಪ್ರಸ್ತುತ ವಿಡಿಯೋ ಭಾರತೀಯರ ಮನವನ್ನೇ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ವಿಡಿಯೋ ನೋಡಿ

 

View this post on Instagram

 

A post shared by Loveleen Vats (@loveleenvats)

ನಿಮ್ಮ ಮಾಹಿತಿಗಾಗಿ ಹೇಳುವದಾದರೆ ಈ ವಿಡಿಯೋದಲ್ಲಿ ಕಂಡು ಬರುವ ದಂಪತಿಗಳು ಆಸ್ಟ್ರೇಲಿಯಾದ ಮೆಲಬರ್ನ್ ನಲ್ಲಿ ತಮ್ಮ ಮೂವರು ಮಕ್ಕಳ ಜೊತೆಗೆ ವಾಸಿಸುತ್ತಾರೆ. ಪತಿಯ ಹೆಸರು ಲವ್ಲೀನ್ ಮತ್ತು ಪತ್ನಿಯ ಹೆಸರು ಕರ್ಟ್ನಿ ಇದೆ. ಸದ್ಯಕ್ಕೆ ದುರ್ಗಾ ಪೂಜೆಗೆಂದು ತಮ್ಮ ನೇಟಿವ್ ಪ್ಲೇಸ್ ಭಾರತಕ್ಕೆ ಬಂದಿದ್ದಾರೆ.

Leave a Comment

Your email address will not be published. Required fields are marked *