ಅಕ್ಕಳ ಬೈಕ್ ಧಮಾಕಾ; ಕಕ್ಕಾಬಿಕ್ಕಿ ಆನೆ! ಲೇಡಿ ಸಹವಾಸವೇ ಬೇಡೆಂದು ತಾನೇ ಮ್ಯಾನೇಜ್ ಮಾಡಿ ಢಿಕ್ಕಿಯಿಂದ ಬಚಾವ್ ಆದ ಜಾಣ ಆನೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವೀಡಿಯೊಗಳನ್ನು ನೋಡುತ್ತಾ ನೋಡುತ್ತಾ ಹೋದಂತೆ ಕೆಲವು ಸಲ ಬೆರಳುಗಳು ಒಮ್ಮೆಲೆ ಒಂದು ಕಂಟೆಂಟ್ ಮೇಲೆ ನಿಂತು ಬಿಡುತ್ತವೆ. ಆ ವಿಡಿಯೋ ಮನಸೊರೆಗೊಂಡ ನಂತರ ಶುರುವಾಗುತ್ತದೆ ಲೈಕ್ಸ್ ಮತ್ತು ಕಾಮೆಂಟ್ ಗಳ ಮಳೆ. ಸದ್ಯ ಒಂದು ಇದೇ ರೀತಿಯ ವಿಡಿಯೋ ಇಲ್ಲಿ ನೋಡಲು ಸಿಗುತ್ತಿದೆ.

ಪ್ರಸ್ತುತ ವಿಡಿಯೋವನ್ನು IFS ಆಫೀಸರ್ ಆದ ಸುಶಾಂತ್ ನಂದಾ ಅವರು ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ನೆಟ್ಟಿಗರಿಗೆ ಈ ವಿಡಿಯೋ ತುಂಬಾನೇ ಇಷ್ಟವಾಗಿದೆ. ಇಲ್ಲಿಯೂ ಅಕ್ಕ ತನ್ನ ಧಮಾಕಾ ತೋರಿಸಿದ್ದಾಳೆ ಎನ್ನಬಹುದು. ಬಹುಶಃ ಇದೇ ಕಾರಣಕ್ಕೆ ಏನೋ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ಕಾಡಿನ ಮಧ್ಯದ ರಸ್ತೆಯಲ್ಲಿ ಲೇಡಿ ಬೈಕ್ ಸವಾರಳು ಎದುರಿನಲ್ಲೇ ಕಂಡ ದೊಡ್ಡ ಆನೆಯನ್ನು ನಿರೀಕ್ಷಿಸಿದರೂ ತನ್ನ ಬೈಕ್ ನ ವೇಗದಲ್ಲಿ ಸ್ವಲ್ಪವೂ ಕಡಿಮೆ ಮಾಡದೆ ಹಾಗೆಯೇ ಅನೆಗಿಂತ ಮೊದಲೇ ರೋಡ್ ಕ್ರಾಸ್ ಮಾಡುವ ಹುನ್ನಾರ ಮಾಡಿದ್ದಾಳೆ. ಇಲ್ಲಿ ಆನೆಯು ಲೇಡಿಯ ಸ್ಪೀಡ್ ರೇಂಜ್ ಯಾವ ಮಟ್ಟಿಗೆ ಇದೇ ಎಂಬುದನ್ನು ತಕ್ಷಣ ತಿಳಿದುಕೊಂಡು ಕ್ಷಣದಲ್ಲಿ ತಾನೇ ಮ್ಯಾನೆಜ್ ಮಾಡಿದೆ. ಆನೆಯ ಈ ಐಡಿಯಾದ ದೃಶ್ಯ ನೆಟ್ಟಿಗರಿಗೆ ತುಂಬಾ ಹಿಡಿಸಿದೆ. ಇಲ್ಲಿ ಮಹಿಳೆ ತನ್ನ ಬ್ಯಾಲೆನ್ಸ್ ಕಳೆದುಕೊಂಡಿದ್ದಳು. ಮುಂದೆ ಕಾಣುತ್ತಿದ್ದ ವಿಶಾಲವಾದ ಆನೆಯನ್ನು ನೋಡಿದರೂ ಮಹಿಳೆ ಯಾವುದೇ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳದೆ ಹಾಗೆಯೇ ಅದರ ಮೇಲೆ ಅಟ್ಟಿಕೊಂಡು ಹೋದಂತೆ ಹೋಗಿದ್ದಾಳೆ ಎಂಬುದು ವಿಡಿಯೋ ದೃಶ್ಯದಲ್ಲಿ ಕಂಡು ಬರುತ್ತದೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ತಮಾಷೆಯ ವಿಡಿಯೋ ಇಲ್ಲಿಯವರೆಗೆ 80 ಸಾವಿರಕ್ಕೂ ಹೆಚ್ಚು ಜನರು ನೋಡಿ ಆನಂದಿಸಿದ್ದಾರೆ ಮತ್ತು ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಎಲ್ಲೇ ಇರಲಿ ಬೈಕ್ ಸಮಾಧಾನದಿಂದ ನಡೆಸಿ ಅಂತ ಹಿರಿಯರು ಹೇಳಿಯೇ ಹೇಳುತ್ತಾರೆ. ಇನ್ನು ಕಣ್ಣು ಮುಂದೆ ದೊಡ್ಡ ಪ್ರಾಣಿ ಕಂಡು ಬಂದರೂ ವೇಗವನ್ನು ಕಡಿಮೆ ಮಾಡುವ ಗೋಜಿಗೆ ಹೋಗದೆ ಹಾಗೆಯ ನಡೆಸುವುದು ಎಂಥ ಸಂಕಷ್ಟಕ್ಕೆ ಗುರು ಮಾಡಿ ಕೊಡುತ್ತಿತ್ತು ಎಂಬುದು ತಿಳಿದು ಬರುತ್ತದೆ. ಒಟ್ಟಿನಲ್ಲಿ ಮಹಿಳೆಯ ಅದೃಷ್ಟ ಚೆನ್ನಾಗಿತ್ತು ಯಾವುದೇ ರೀತಿಯ ಅನಾಹುತ ಘಟಿಸಲಿಲ್ಲ