ನಿಸರ್ಗದ ಮಡಿಲಲ್ಲಿ ಏಳೆಂಟು ವರ್ಷದ ಬಾಲಕ ಅದ್ಭುತವಾಗಿ ಯೋಗ ಮಾಡಿದ ವಿಡಿಯೋ ವೈರಲ್!
ಯೋಗಕ್ಕೆ ಸುಮಾರು 6 ಸಾವಿರ ವರ್ಷಗಳ ಶ್ರೀಮಂತ ಇತಿಹಾಸವಿದೆ. ಯೋಗವು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಒಂದು ಪ್ರಕ್ರಿಯೆಯಾಗಿದೆ. ಇದು ಮಾನವನ ದೇಹದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ಯೋಗವು ದೇಹ ಮತ್ತು ಮನಸ್ಸಿಗೆ ಪುನರ್ ಯೌವನ ನೀಡುತ್ತದೆ. ಯೋಗದ ಕಲಿಕೆ ವೈಚಾರಿಕತೆ, ಭಾವನಾತ್ಮಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚು ಮಾಡುತ್ತದೆ. ಇಂತಹ ಅಮೂಲ್ಯವಾದ ಯೋಗವನ್ನು ಜಗತ್ತಿಗೆ ಪರಿಚಯಿಸಿದವರು ಪತಂಜಲಿ ಮಹರ್ಷಿ.
ಸದ್ಯ ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವಿಟರ್ ನಲ್ಲಿ ಸುಮಾರು 7-8 ವರ್ಷದ ಹುಡುಗನೊಬ್ಬ ಸುಂದರವಾದ ನಿಸರ್ಗದ ಮಡಿಲಲ್ಲಿ ಯೋಗಭ್ಯಾಸ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಹುಡುಗ ಇಲ್ಲಿ ತುಂಬಾ ಫ್ಲೆಕ್ಸಿಬಲ್ ಆಗಿ ಅಷ್ಟೇ ಸಹಜ ಮತ್ತು ಸರಳವಾಗಿ ಯೋಗದ ಪ್ರಕಾರಗಳನ್ನು ಮಾಡಿ ತೋರಿಸುತ್ತಿದ್ದಾನೆ. ನೆಟ್ಟಿಗರಿಗೆ ಈ ವಿಡಿಯೋ ತುಂಬಾ ಇಷ್ಟವಾಗಿದೆ. ಇಲ್ಲಿ ಹುಡುಗನು ಯೋಗದ ಪ್ರಕಾರಗಳನ್ನು ತುಂಬಾ ಸಲೀಸಾಗಿ ಸೂಪರ್ ಬ್ಯಾಲೆನ್ಸ್ ಕ್ಯಾರಿ ಮಾಡಿಕೊಂಡು ಮಾಡುತ್ತಿರುವುದನ್ನು ನೋಡಿದರೆ ಈತ ಯೋಗದಲ್ಲಿ ತುಂಬಾ ಅಭ್ಯಾಸ ಹೊಂದಿದ್ದಾನೆ ಎನಿಸುತ್ತದೆ.
ನೋಡಿ ಹುಡುಗನ ಯೋಗದ ಅದ್ಭುತ ಈ ವಿಡಿಯೋ…
Power of India
Power of Indian Yoga 🙏 pic.twitter.com/Tdm6vcmKq2— Kuljeet Singh Chahal 🇮🇳 (@kuljeetschahal) October 18, 2022
ಪ್ರಸ್ತುತ ವಿಡಿಯೋವನ್ನು ಕುಲ್ಜೀತ್ ಸಿಂಗ್ ಚಹಲ್ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದು ಈ ವಿಡಿಯೋ ಇಲ್ಲಿಯವರೆಗೆ ಆರೂವರೆ ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸುಮಾರು 33 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.