ಸಖತ್ ಕಾಮಿಡಿ ಜೋಕ್ಸ್; ಸಂತು ಹಾಸ್ಪಿಟಲ್ ನರ್ಸ್ ಗೆ, ‘ಐ ಲವ್ ಯು ನೀನು ನನ್ನ ಹೃದಯವನ್ನು ಕದ್ದಿರುವೆಯಾ’

ಮಿತ್ರರೇ ಇವತ್ತಿನ ಲೇಖನದಲ್ಲಿ ನಿಮಗಾಗಿ ಸೂಪರ್ ಪಂಚ್ ಗಳಿರುವ ತಮಾಷೆಯ ಜೋಕ್ ಗಳನ್ನು ತಂದಿದ್ದೇವೆ. ಪ್ರಸ್ತುತ ಈ ಜೋಕ್ಸ್ ಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿವೆ. ನಮಗೆ ತುಂಬಾ ವಿಶ್ವಾಸವಿದೆ ಈ ಜೋಕ್ಸ್ ಗಳು ನಿಮಗೆ ಇಷ್ಟವಾಗುತ್ತವೆ ಎಂದು. ಹಾಗಾದರೆ ಟೈಮ್ ವೇಸ್ಟ್ ಮಾಡದೆ ಶುರು ಮಾಡಿ ಓದಲು.

* 60 ವರ್ಷದ ಮುದುಕನೊಬ್ಬ ಇತ್ತೀಚೆಗೆ ಪ್ರತಿವರ್ಷ ತನ್ನ ಹೆಂಡತಿಯ ಜೊತೆಗೆ ಮದುವೆಯಾಗುತ್ತಿದ್ದದ್ದನ್ನು ನೋಡಿ, ಪುರೋಹಿತರು: ನೀವು ಯಾಕೆ ಹೀಗೆ ಪ್ರತಿವರ್ಷ ಮದುವೆಯಾಗುತ್ತೀರಿ?
ಮುದುಕ: ನೀವು ಹೇಳುವ ಒಂದೇ ಒಂದು ಶಬ್ದವನ್ನು ಕೇಳಲು
ಪುರೋಹಿತರು: ಅದು ಯಾವುದು?
ಮುದುಕ: “ಹುಡುಗನಿಗೆ ಕರೆಯಿರಿ” ಅನ್ನೋ ಶಬ್ದ.

* ಘೋರ ಜಗಳದ ನಂತರ ಪತ್ನಿ ಪತಿಗೆ, ನೀವು ಇಡೀ ಜಗತ್ತನ್ನೇ ಸುತ್ತಾಡಿದರು ನನ್ನಂತ ಹೆಂಡತಿ ನಿಮಗೆ ಎಲ್ಲಿಯೂ ಸಿಗಲ್ಲ ಎನ್ನುತ್ತಾಳೆ…
ಪತಿ: ನಿನಗೇನನಿಸುತ್ತೆ? ಎರಡನೇಯವಳನ್ನೂ ನಿನ್ನಂತವಳನ್ನೇ ಹುಡುಕ್ತಿನಾ ನಾನು?

* ಪತಿ-ಪತ್ನಿಯ ಜಗಳ ನಂತರ…
ಪತಿ: ಓ ದೇವರೇ, ಈ ಜೀವನದಲ್ಲಿ ನಾನು ಬೇಸತ್ತಿದ್ದೇನೆ ಮೊದಲು ನನ್ನನ್ನು ಮೇಲೆ ಕರೆದುಕೋ…
ಪತ್ನಿ: ಬೇಡ ದೇವರೇ ನನ್ನ ಗಂಡನಿಗಿಂತಲೂ ಮೊದಲು ನನ್ನನ್ನು ಕರೆದುಕೋ, ನಿಜಕ್ಕೂ ನನಗೆ ಸಾಕಾಗಿ ಹೋಗಿದೆ.
ಪತಿ: ಸಾರಿ ದೇವರೇ, ನನ್ನ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ, ನನಗೆ ಬಿಟ್ಟು ಅವಳ ಮಾತನ್ನೇ ಮೊದ್ಲು ಕೇಳು.

* ಸಂತು, ನಿನ್ನ ಬೆಸ್ಟ್ ಫ್ರೆಂಡ್ ಹಾಗೂ ನಿನ್ನ ಗರ್ಲ್ ಫ್ರೆಂಡ್ ಇಬ್ಬರೂ ಒಟ್ಟಿಗೆ ನೀರಿನಲ್ಲಿ ಮುಳುಗಿ ಸಾಯುತ್ತಿದ್ದರೆ ನೀನು ಯಾರನ್ನು ಉಳಿಸಲು ಯತ್ನಿಸುವೆ.
ಸಂತೂ: ಇಬ್ಬರೂ ಸತ್ತೋಗ್ಲಿ ಬಿಡು ಹಾಳಾದವರು, ಇಬ್ಬರು ಒಟ್ಟಿಗೆ ನೀರಿನಲ್ಲೇನು ಮಾಡುತ್ತಿದ್ದರು?

* ಪತ್ನಿ: ನಿಮಗೆ ಅರೇಂಜ್ ಮ್ಯಾರೇಜ್ ಮತ್ತು ಲವ್ ಮ್ಯಾರೇಜ್ ನಲ್ಲಿಯ ವ್ಯತ್ಯಾಸ ಗೊತ್ತಾ?
ಪತಿ: ಹಾ, ಗೊತ್ತು.
ಪತ್ನಿ: ಹೇಳಿ ಹಾಗಾದ್ರೆ…
ಪತಿ: ವ್ಯಕ್ತಿ ನಡೆಯುವಾಗ ಆಕಸ್ಮಿಕವಾಗಿ ಹಾವು ಕಡಿಯುವುದು ಇದು ಅರೇಂಜ್ ಮ್ಯಾರೇಜ್, ಆದ್ರೆ ಲವ್ ಮ್ಯಾರೇಜ್ ನಲ್ಲಿ ಹಾವನ್ನು ನಾವೇ ಸ್ವತಃ ಶೋಧಿಸಿ ಅದರ ಮುಂದೆ ಹುಚ್ಚನಂತೆ ಕುಣಿ ಕುಣಿದು ನನ್ನನ್ನು ಕಚ್ಚು, ನನ್ನನ್ನು ಕಚ್ಚು ಎನ್ನುವುದೇ ಲವ್ ಮ್ಯಾರೇಜ್!

* ಸಂತು ಹಾಸ್ಪಿಟಲ್ ನರ್ಸ್ ಗೆ, ‘ಐ ಲವ್ ಯು ನೀನು ನನ್ನ ಹೃದಯವನ್ನು ಕದ್ದಿರುವೆಯಾ’ ಎಂದು ಹೇಳುತ್ತಾನೆ.
ನರ್ಸ್: (ನಾಚುತ್ತ) ಛೀ ಕಳ್ಳ, ಹೃದಯಕ್ಕೆ ಮುಟ್ಟಿಯೇ ಇಲ್ಲ, ನಾವು ಬರೀ ಕಿಡ್ನಿಯನ್ನಷ್ಟೇ ತೆಗೆದುಕೊಂಡಿದ್ದೇವೆ.
ಸದ್ಯ ಸಂತು ಕೋಮದಲ್ಲಿದ್ದಾನೆ…

* ಮಗಳು ತನ್ನ ತಾಯಿಯ ಜೊತೆಗೆ ಫೋನ್ನಲ್ಲಿ ಮಾತನಾಡುತ್ತಿದ್ದಳು…
ಮಗಳು: (ರೇಗುತ್ತ) ಅಮ್ಮ, ಎಂಥ ಹುಡುಗನ ಜೊತೆಗೆ ನನ್ನ ಮದುವೆ ಮಾಡಿಕೊಟ್ಟಿದ್ದಿಯಾ?
ಅಮ್ಮ: ಯಾಕೆ? ಏನಾಯ್ತು?
ಮಗಳು: ಆತ ದಿನಾಲು ಎಣ್ಣೆ ಹೊಡೆದು ನಶೆಯಲ್ಲಿಯೇ ಬರ್ತ್ತಾನೆ.
ಅಮ್ಮ: (ಆಶ್ಚರ್ಯದಿಂದ) ಈ ಮಾತನ್ನು ನೀನು ಈಗ ಹೇಳ್ತಾ ಇದ್ದೀಯಾ! ಅದು ಎರಡು ವರ್ಷಗಳ ನಂತರ.
ಮಗಳು: ನನಗಾದರೂ ಎಲ್ಲಿ ಗೊತ್ತಿತ್ತು ಅಮ್ಮ? ಅವರು ನಿನ್ನೆ ರಾತ್ರಿ ಫಸ್ಟ್ ಟೈಮ್ ಎಣ್ಣೆ ಹೊಡಿದೇನೆ ಹಾಗೆಯೇ ಬಂದಿದ್ದರು, ಆಗ ಗೊತ್ತಾಯ್ತು.