Video; ವ್ಯಕ್ತಿಯೊಬ್ಬ ಟ್ರಕ್ ನಲ್ಲಿ ಟೊಮ್ಯಾಟೋಗಳನ್ನು ಒಗೆಯುವ ಟ್ಯಾಲೆಂಟ್ ನೋಡಿ; ಸಾಲಿಡ್ ಐಡಿಯಾ!
ಪ್ರತಿಯೊಂದು ವ್ಯಕ್ತಿಯಲ್ಲಿ ಏನಾದರೂ ಒಂದು ಟ್ಯಾಲೆಂಟ್ ಅಥವಾ ಸೂಪ್ತ ಗುಣ ಅಡಗಿರುತ್ತದೆ. ಪ್ರಸ್ತುತ ವ್ಯಕ್ತಿ ಇದನ್ನು ಸಮಯ ಬಂದಾಗ ಪ್ರೆಸೆಂಟ್ ಮಾಡಿಯೇ ಮಾಡುತ್ತಾನೆ. ಸದ್ಯ ಈ ವಿಡಿಯೋದಲ್ಲಿ ರೈತನೊಬ್ಬ ತನ್ನ ತೋಟದಲ್ಲಿ ಬೆಳೆದ ಟೊಮೆಟೊಗಳನ್ನು ಟ್ರಕ್ ನಲ್ಲಿ ಹೇರುತ್ತಿದ್ದಾನೆ ಅದು ವಿಶೇಷ ಐಡಿಯಾದಿಂದ.
ಈ ವಿಡಿಯೋ ವೈರಲ್ ಆಗುವ ಮುಖ್ಯ ಕಾರಣ, ರೈತನು ಟ್ರಕ್ ನಲ್ಲಿ ವಿಶೇಷ ಟೆಕ್ನಿಕ್ ಯೂಸ್ ಮಾಡಿ ಟೊಮೆಟೊಗಳನ್ನು ತುಂಬುತ್ತಿದ್ದಾನೆ. ವಿಡಿಯೋದ ದೃಶ್ಯದಲ್ಲಿ ಕಂಡು ಬರುವ ಪ್ರಕಾರ ವ್ಯಕ್ತಿಯು ಟೊಮೆಟೊಗಳಿಂದ ತುಂಬಿದ ಬಾಸ್ಕೆಟ್ ಗಳನ್ನು ಎತ್ತುತ್ತಿದ್ದಾನೆ ಮತ್ತು ಸಹಜವಾಗಿ ಟ್ರಕ್ಕಿನ ಕಡೆಗೆ ಒಗೆಯುತ್ತಿದ್ದಾನೆ. ಇಲ್ಲಿ ಆಶ್ಚರ್ಯದ ಸಂಗತಿ ಏನೆಂದರೆ ಬಾಸ್ಕೆಟ್ ಟ್ರಕ್ಕಿನ ಹತ್ತಿರ ಹೋಗುತ್ತಲೇ ಟೊಮೆಟೊಗಳಿಂದ ಬೇರೆಯಾಗಿ ಕೆಳಗೆ ಬೀಳುತ್ತಿದೆ. ಮತ್ತು ಅದರಲ್ಲಿರುವ ಟೊಮ್ಯಾಟೋಗಳು ಟ್ರಕ್ ನಲ್ಲಿ ಹೋಗಿ ಜಾಗ ಕಾಯ್ದುಕೊಳ್ಳುತ್ತಿವೆ. ನೆಟ್ಟಿಗರಿಗೆ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮಾತ್ರ ಕಾಡುತ್ತಿದೆ. ಈ ಪ್ರಶ್ನೆಯಿಂದಾಗಿಯೇ ಅನೇಕ ಯೂಸರ್ಗಳು ಪ್ರಸ್ತುತ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ನೀವು ಮೊದಲು ಈ ವಿಡಿಯೋ ನೋಡಿ.
Centripetal force with a twist pic.twitter.com/8LBTfswIwC
— Science girl (@gunsnrosesgirl3) October 18, 2022
ವಿಡಿಯೋ ನೋಡಿದ ನಂತರ ಯೂಸರ್ಸ್ ಗಳು ತಮ್ಮ ಬೇರೆ ಬೇರೆ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡುತ್ತಿದ್ದಾರೆ. ಕೆಲವರು ಇದಕ್ಕೆ ರೈತನ ಟ್ಯಾಲೆಂಟ್ ಎಂದು ಹೇಳಿದರೆ, ಇನ್ನೂ ಕೆಲವರು ಕೇಂದ್ರಾಭಿಮುಖ ಶಕ್ತಿ ಎಂದು ವರ್ಣಿಸುತ್ತಿದ್ದಾರೆ. ಒಬ್ಬ ಯೂಸರ್ ನಂತೂ ಇನ್ನಷ್ಟು ಮುಂದೆ ಹೋಗಿ ಈ ರೈತನ ಹತ್ತಿರ ಐನ್ಸ್ಟೈನ್ ನಂತಹ ಮೆದುಳು ಇದೆ ಮತ್ತು ಅರ್ನಾಲ್ಡ್ ನಂತಹ ಅದ್ಭುತ ಶಕ್ತಿ ಇದೆ ಎಂದಿದ್ದಾನೆ. ಬೇರೊಬ್ಬ ಯೂಸರ್ ಈತನ ಹತ್ತಿರ ಅದ್ಭುತ ಇಂಜಿನಿಯರಿಂಗ್ ಶಕ್ತಿ ಇದೆ ಎಂದು ವರ್ಣಿಸಿದ್ದಾನೆ. ಒಟ್ಟಿನಲ್ಲಿ ಈ ವಿಡಿಯೋ ಮಾತ್ರ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋ ಯಾವ ದೇಶದ್ದು ಮತ್ತು ಎಲ್ಲಿಯದು ಎಂಬುದರ ಬಗ್ಗೆ ತಿಳಿದುಬಂದಿಲ್ಲ.