Video; ಕಾಡಿನ ರಾಜನನ್ನು ವಾಲಿಬಾಲ್ ರೀತಿಯಲ್ಲಿ ಆಟವಾಡಿದ ಎಮ್ಮೆಗಳು! ಒಗ್ಗಟ್ಟಿನಲ್ಲಿಯ ಬಲ ನೋಡಿ ಹೇಗಿರುತ್ತೆ?
ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಮಣ್ಣುಮುಕ್ಕಿಸುತ್ತದೆ. ಇದರ ತಾಜಾ ಉದಾಹರಣೆ ಈಗ ಇಲ್ಲಿ ನೋಡಲಿರುವ ವೈಲ್ಡ್ ಲೈಫ್ ವಿಡಿಯೋದಲ್ಲಿ ನೋಡಿದಾಗ ಗೊತ್ತಾಗುತ್ತದೆ.
ಸಿಂಹಕ್ಕೆ ಸುಮ್ಮನೆ ಕಾಡಿನ ರಾಜನೆಂದು ಕರೆಯುವುದಿಲ್ಲ. ಆ ಒಂದು ಎಬಿಲಿಟಿ ಪ್ರಸ್ತುತ ಪ್ರಾಣಿಯಲ್ಲಿರುವ ಅದ್ಭುತ ಶಕ್ತಿಯಿಂದ ತಿಳಿದು ಬರುತ್ತದೆ. ತಲೆ ಗಟ್ಟಿ ಇದೆ ಅಂತ ಗೋಡೆಗೆ ಹೋಗಿ ಹಾಯುವದಲ್ಲ. ಇದೇ ರೀತಿಯ ಒಂದು ಅನುಭವ ಪಾಠ ಸಿಂಹದ ಜೊತೆಗೆ ನಡೆದದ್ದು ಇಲ್ಲಿ ನೋಡಬಹುದು.
ಪ್ರಸ್ತುತ ವಿಡಿಯೋದಲ್ಲಿಯ ದೃಶ್ಯ ನೋಡಿದಾಗ ತುಂಬಾ ವಿಚಿತ್ರವೆನಿಸುತ್ತದೆ. ಕಾರಣ ಇಲ್ಲಿಯ ದೃಶ್ಯ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ನೋಡುವವರಿಗೆ ಮನದಲ್ಲಿ ಮೂಡಿಸುತ್ತದೆ. ಎಮ್ಮೆಗಳ ಗುಂಪಿನಲ್ಲಿ ಕಾಡಿನ ರಾಜ ಸಿಕ್ಕಿಬಿದ್ದಿದ್ದಾನೆ. ಬಹುಶಃ ಅದು ಎಮ್ಮೆಯ ಬೇಟೆಯಾಡಲೆಂದೇ ಅಲ್ಲಿ ವಕ್ಕರಿಸಿದೆ. ಆದರೆ ಇಲ್ಲಿ ಗೇಮ್ ಪಲ್ಟಿಯಾಗಿದೆ.
ಅದ್ಹೇಗೆ ನೋಡಿ…
ವಿಡಿಯೋದ ಈ ದೃಶ್ಯದಲ್ಲಿ ಅಸಂಖ್ಯ ಎಮ್ಮೆಗಳು ಕಂಡುಬರುತ್ತವೆ. ಇದೇ ಸಮಯ ಸಿಂಹ ಒಂದು ತಾನೇ ಬಲಶಾಲಿ ಎಂದು ತಿಳಿದು ಅವುಗಳ ಮೇಲೆ ಅಟ್ಯಾಕ್ ಮಾಡಿದೆ. ಇದೇ ತಪ್ಪು ಸಿಂಹಕ್ಕೆ ತಿರುಗಬಾಣವಾಗಿ ಪರಿಣಮಿಸಿದೆ. ಎಮ್ಮೆಗಳೆಲ್ಲ ಕೂಡಿಕೊಂಡು ಒಗ್ಗೂಡಿ ಸಿಂಹವನ್ನು ವಾಲಿಬಾಲ್ ತರ ಆಟ ಆಡಿವೆ. ಒಮ್ಮೆ ಇತ್ತ ಕಡೆಯಿಂದ ಆಕಾಶದಲ್ಲಿ ಹಾರಿಸಿದರೆ ಮತ್ತೊಮ್ಮೆ ಅತ್ತ ಕಡೆಯಿಂದ ಸಿಂಹವನ್ನು ಆಕಾಶದ ಎತ್ತರ ಹಾರಿಸಿವೆ.
ನೋಡಿ ಈ ವೈರಲ್ ವಿಡಿಯೋ.
View this post on Instagram
ಎಮ್ಮೆಗಳ ಒಗ್ಗಟ್ಟಿನ ಶಕ್ತಿಯನ್ನು ತೋರಿಸುವ ಹಾಗೂ ಏಕಾಂಗಿಯಾದ ಸಿಂಹಕ್ಕೆ ಒಗ್ಗಟ್ಟಿನಿಂದ ನೀರುಗಾಯಿ ಹಣ್ಣುಗಾಯಿ ಮಾಡಿದ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ earth_reel ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಲಕ್ಷ ಲಕ್ಷ ಜನರ ನೋಡಿದ್ದಲ್ಲದೆ ಸುಮಾರು 25 ಸಾವಿರ ಜನರು ಲೈಕ್ ಮಾಡಿದ್ದಾರೆ.