Video; ಮಾಹಿಯನ್ನು ಮಹಾನ್ ಆಟಗಾರನೆನ್ನಲು ಕಾರಣ ಸಾಕಷ್ಟಿವೆ? ಅದರಲ್ಲಿಯ ಒಂದು ವಿಶೇಷ ಗುಣ ನೋಡಿ…
ಮಾಹಿ ಕ್ರಿಕೆಟ್ ರಸಿಕರ ಮನದಲ್ಲಿ ಅಚ್ಚಳಿಯದಂತೆ ಮನೆ ಮಾಡಿದ್ದಾರೆ. ಇದಕ್ಕೆ ಕಾರಣ ಅವರಲ್ಲಿರುವ ಕ್ರಿಕೆಟ್ ಕೌಶಲ್ಯವಷ್ಟೇ ಅಲ್ಲ, ಅದಕ್ಕೆ ಸಾವಿರಾರು ಕಾರಣಗಳಿವೆ. ಸದ್ಯ ಅವರು ದೇಶದ ಪ್ರತಿ ಎಂಥ ಮನಸ್ಸುಳ್ಳವರು ಹಾಗೂ ಗೌರವವುಳ್ಳವರೂ ಎಂದು ತೋರಿಸುವ ವಿಡಿಯೋ ಒಂದು ನೋಡಲು ಸಿಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಮಾಹಿ ಆಟದಲ್ಲಿ ತೊಡಗಿರುವಾಗ ಅವರ ಫ್ಯಾನ್ ಒಬ್ಬನು ಸ್ಟೇಡಿಯಂ ನಲ್ಲಿಂದ ಓಡೋಡಿ ಕೈಯಲ್ಲಿ ನಮ್ಮ ದೇಶದ ಬಾವುಟ ಹಿಡಿದು ಬಂದು ಕಾಲಿಗೆ ಬೀಳುತ್ತಾನೆ. ಈ ಸಂದರ್ಭದಲ್ಲಿ ಇದನ್ನರಿತ ಮಾಹಿ ತಕ್ಷಣ ಆತನ ಕೈಯಲ್ಲಿಯ ಬಾವುಟ ಕೆಳಗೆ ತಾಗದಂತೆ ಮತ್ತು ಬೀಳದಂತೆ ಎಚ್ಚರವಹಿಸಿ ಆತನಿಂದ ತೆಗೆದುಕೊಳ್ಳುತ್ತಾರೆ. ಭಾರತಾಂಬೆ ಮತ್ತು ನಮ್ಮ ಬಾವುಟದ ಗೌರವಕ್ಕೆ ಸ್ವಲ್ಪವೂ ಧಕ್ಕೆಯಾಗದಂತೆ ಸದಾ ಅವರ ನಡೆಯಾಗಿರುತ್ತದೆ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ಮಾಹಿಯ ಸೂಪರ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ boby_m23 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಸಾವಿರಾರು ಜನರು ಧೋನಿಯವರ ಬಗ್ಗೆ ಗೌರವದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.