Super Video; ಈ ಕೆಲಸ ಮಾಹಿ ಹೊರತಾಗಿ ಬೇರೆ ಯಾರೂ ಮಾಡಲು ಸಾಧ್ಯವೇ ಇಲ್ಲ! ಬ್ಯಾಟ್ಸ್ಮನ್ ಪೂರಾ ಪೆದ್ದು ಪೆದ್ದಾಗಿ ಹೋದ.

ಮಾಹಿ ಕ್ರಿಕೆಟ್ ರಸಿಕರ ಮನದಲ್ಲಿ ಅಚ್ಚಳಿಯದಂತೆ ಮನೆ ಮಾಡಿದ್ದಾರೆ. ಇದಕ್ಕೆ ಕಾರಣ ಅವರಲ್ಲಿರುವ ಕ್ರಿಕೆಟ್ ಕೌಶಲ್ಯವಷ್ಟೇ ಅಲ್ಲ, ಅದಕ್ಕೆ ಸಾವಿರಾರು ಕಾರಣಗಳಿವೆ. ಸದ್ಯ ಅವರ ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಗೆ ಚಾಕಚಕ್ಯತೆಯಿಂದ ಔಟ್ ಮಾಡಿದ ವಿಡಿಯೋ ಒಂದು ಇಲ್ಲಿ ನೋಡಬಹುದು.

ಪ್ರಸ್ತುತ ವಿಡಿಯೋದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ನ್ಯೂಜಿಲೆಂಡಿನ ಬ್ಯಾಟ್ಸ್ ಮ್ಯಾನ್ ಜೇಮ್ಸ್ ನಿಶಾಮ್ ಅವರನ್ನು ಸಂಪೂರ್ಣ ಪೆದ್ದನನ್ನಾಗಿಸಿ ಔಟ್ ಮಾಡಿಬಿಟ್ಟಿದ್ದಾರೆ. ಕೇದಾರ್ ಜಾಧವ್ ಬೌಲಿಂಗ್ ನಲ್ಲಿ ಜೇಮ್ಸ್ ನಿಶಾಮ್ ಅವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಬಾಲ್ ಪ್ಯಾಡಿಗೆ ಬಡಿಯುತ್ತದೆ. ಆಗ ಧೋನಿ ಮತ್ತು ಕೇದಾರ್ ಇಬ್ಬರೂ ಎಲ್ ಬಿ ಡಬ್ಲ್ಯೂ ವಿಕೆಟ್ ಗಾಗಿ ಅಂಪೈರ್ ಕಡೆಗೆ ಅಪಿಲ್ ಮಾಡುತ್ತಾರೆ. ಆ ಸಂದರ್ಭದಲ್ಲಿ ಬ್ಯಾಟ್ಸ್ಮನ್ ನಿಶಾಮ್ ಜೇಮ್ಸ್ ಅವರು ಅಂಪೈರ್ ಎಲ್ಲಿ ತನಗೆ ಔಟ್ ನೀಡುತ್ತಾರೋ ಎಂದು ಸ್ವಲ್ಪ ತಬ್ಬಿಬ್ಬಾಗುತ್ತಾರೆ. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಒಂದೇ ಸವನೆ ಅಪಿಲ್ ಮಾಡುತ್ತಲೇ ಬಾಲ್ ಹಿಡಿದು ತಕ್ಷಣ ಸ್ಟಂಪ್ ಗೆ ಎಸೆದು ಬಿಡುತ್ತಾರೆ. ಜೇಮ್ಸ್ ನಿಶಾಮ್ ಆಗ ಇನ್ನು ಲೈನ್ ಬಿಟ್ಟು ಹೊರಗೆಯೇ ಇರುತ್ತಾರೆ. ಇಲ್ಲಿ ಧೋನಿಯವರ ಮೈಂಡ್ ಎಷ್ಟೊಂದು ಸೂಪರ್ ಆಗಿ ಕೆಲಸ ಮಾಡಿತು ಎಂಬುದು ಗಮನಕ್ಕೆ ಬರುತ್ತದೆ.

ವೀಡಿಯೋ ನೋಡಿ.

 

View this post on Instagram

 

A post shared by Akash✨ (@itz_akashh07)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ ಹಾಗೂ 2 ಲಕ್ಷ 55 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದಿದೆ.