ಈತ ಇಸ್ಪೀಟು ಎಲೆಗಳನ್ನು ಕಲೆಸುವ ಕಲೆ ನೋಡಿದರೆ ಅಕ್ಷರಶಃ ದಂಗಾಗುವಿರಿ; ನೋಡಿ ಈ ವಿಡಿಯೋ…
ಈಗಿನ ಸಮಯದಲ್ಲಿ ಯಾರ್ಯಾರು ಯಾವ ಯಾವ ಕಲೆಗಳಲ್ಲಿ ತಮ್ಮ ಪ್ರಾಬಲ್ಯವನ್ನು ಮೆರೆದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ಇಲ್ಲಿ ನೋಡುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಇಸ್ಪೀಟು ಆಡುವುದರಲ್ಲಿ ಅಲ್ಲ ಈ ಇಸ್ಪೀಟಿನ ಎಲೆಗಳನ್ನು ಕಲಸಿ ಹಾಕುವ ಕಲೆಯನ್ನು ಅದ್ಹೇಗೆ ಕರಗತ ಮಾಡಿಕೊಂಡಿದ್ದಾನೆ ನೋಡೋಣ ಬನ್ನಿ.
ಇಸ್ಪೀಟು ಆಟ ಆಡುವಾಗ ಆಟಗಾರರು ಒಂದು ಆಟ ಆಡಿದ ನಂತರ ಸರದಿಯಂತೆ ಒಬ್ಬೊಬ್ಬರು ಎಲ್ಲ ಎಲೆಗಳನ್ನು ಕಲಸಿ ಅಥವಾ ಬೆರೆಸಿ ಮೇಲೆ ಕೆಳಗೆ ಮಾಡಿ ಪ್ರತಿಯೊಬ್ಬರಿಗೂ ಒಂದೊಂದಾಗಿ ಹಂಚುವುದು ವಾಡಿಕೆ. ಈ ಪದ್ಧತಿಯಲ್ಲಿ ವ್ಯಕ್ತಿಯೊಬ್ಬ ಇಸ್ಪೀಟಿನ ಎಲೆಗಳ ಮೇಲೆ ಯಾವ ರೀತಿ ಹಿಡಿತವನ್ನು ಸಾಧಿಸಿದ್ದಾನೆ ಎಂಬುದು ನೋಡಲು ತುಂಬಾ ಆಶ್ಚರ್ಯವೆನಿಸುತ್ತದೆ. ಇಸ್ಪೀಟಿನ ಎಲೆಗಳನ್ನು ಕಲಸುವ ಆತನ ಈ ಕಲೆ ನೋಡಿದಾಗ ನೋಡುಗರಿಗೆ ನಿಜಕ್ಕೂ ಅದ್ಭುತ ಎನಿಸುತ್ತದೆ. ಈತನ ಕೈಯಲ್ಲಿರುವ ಇಸ್ಪೀಟಿನ ಎಲೆಗಳು ಆತ ಹೇಳಿದಂತೆ ಮಾತು ಕೇಳುತ್ತಿವೆ ಎಂಬಂತೆ ಭಾಸವಾಗುತ್ತದೆ. ಆತನ ಈ ಕೈಚಳಕವನ್ನು ವರ್ಣಿಸುವುದಕ್ಕಿಂತ ಸ್ವಂತ ಕಣ್ಣುಗಳಿಂದಲೇ ಅನುಭವಿಸುವುದು, ಯೋಗ್ಯ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಈ ವಿಡಿಯೋವನ್ನು giannipalumbo1 ಹೆಸರಿನ ಐಡಿಯಿಂದ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 1.5 ಮಿಲಿಯನ್ ವೀಕ್ಷಣೆ ಪಡೆದಿದೆ.