ಸೋಶಿಯಲ್ ಮೀಡಿಯಾ ಎಂದರೆ ಆಯ್ತು ಇಲ್ಲಿ ಎಲ್ಲ ಒಂಭತ್ತು ರಸಗಳು ಸಿಗುತ್ತವೆ. ನವರಸಗಳ ಹೊಳೆಯೇ ಇಲ್ಲಿ ಹರಿಯುತ್ತದೆ. ಅದರಲ್ಲೂ ತಮಾಷೆಯ ವಿಡಿಯೋಗಳು ನೋಡಿ ನೋಡಿ ಸಾಕಾಗುತ್ತದೆ. ಇಂಥ ವಿಡಿಯೋಗಳು ಎಷ್ಟೇ ನೋಡಿದರೂ ನೆಟ್ಟಿಗನಿಗೆ ಸ್ವಲ್ಪವೂ ಬೇಸರವಿಲ್ಲ. ಸದ್ಯ ಇದೇ ರೀತಿಯ ಒಂದು ವಿಡಿಯೋ ನಿಮ್ಮ ಮುಂದೆ ತಂದಿದ್ದೇವೆ. ಏನದು ನೋಡಿ…
ಪ್ರಸ್ತುತ ವಿಡಿಯೋ ದಯವಿಟ್ಟು ಸೀರಿಯಸ್ ತೆಗೆದುಕೊಳ್ಳಬೇಡಿ. ಇಲ್ಲಿ ತಾಯಿಯು ತನ್ನ ಮಗಳಿಗೆ ಮಹತ್ವದ ಕಿವಿ ಮಾತೊಂದನ್ನು ಹೇಳುತ್ತಿದ್ದಾಳೆ. ಭವಿಷ್ಯಕ್ಕಾಗಿ ತನ್ನ ಮಗಳಿಗೆ ಸರಿಯಾಗಿ ತಯಾರು ಮಾಡುತ್ತಿದ್ದಾಳೆ. ಈ ವಿಡಿಯೋ ನೋಡಿದ ನಂತರ ಪುರುಷವರ್ಗ ಸಾಕಷ್ಟು ಎಚ್ಚೆತ್ತುಕೊಳ್ಳಬೇಕಾಗಿದೆ.
ಕಾರಣ ತಾಯಿಯು ತನ್ನ ಮಗಳಿಗೆ ಭವಿಷ್ಯಕ್ಕಾಗಿ ಚೆನ್ನಾಗಿ ತಯಾರು ಮಾಡುತ್ತಿದ್ದಾಳೆ. ಪ್ರಸ್ತುತ ವಿಡಿಯೋದಲ್ಲಿ ತಾಯಿಯು ಮಗಳಿಗೆ ಹೀಗೆ ಹೇಳುತ್ತಿದ್ದಾಳೆ, ಎಂದಿಗೂ ಯಾವತ್ತೂ ಸುಂದರವಾಗಿ ಅಥವಾ ವರ್ತುಲಾಕಾರವಾಗಿ ರೊಟ್ಟಿ (ಚಪಾತಿ) ಮತ್ತು ಚಹಾ ಚೆನ್ನಾಗಿ ಮಾಡಲು ಹೋಗಬೇಡ, ಯಾಕೆಂದರೆ ಇವುಗಳನ್ನು ದಿನಾಲು ನೀನೇ ಮಾಡಬೇಕಾಗುತ್ತದೆ ಎಂಬ ಪಾಠವನ್ನು ಹೇಳಿಕೊಡುತ್ತಿದ್ದಾಳೆ.
ವೀಡಿಯೋ ನೋಡಿ
View this post on Instagram
ಸಖತ್ ತಮಾಷೆಯ ತಾಯಿ ತನ್ನ ಮಗಳಿಗೆ ಹೇಳುವ ಕಿವಿ ಮಾತಿನ ಈ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಇಲ್ಲಿಯವರೆಗೆ 5.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಸುಮಾರು 1 ಲಕ್ಷ 35 ಸಾವಿರ ಜನರು ಲೈಕ್ ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ nupur_raj_1406 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ.
