Articles

Vairal Video; ಮಹಿಳೆ ಮೇಜನ್ನು ಕಾಲುಗಳ ಮೇಲೆ ಆಡಿಸುತ್ತಿದ್ದಾಳೆ ಫುಟ್ ಬಾಲ್ ತರ..!ಹೀಗೂ ಉಂಟಾ.

ಪ್ರತಿಯೊಂದು ವ್ಯಕ್ತಿಯ ಹತ್ತಿರ ಒಂದೊಂದು ರೀತಿಯ ಕಲೆ ಇದ್ದೇ ಇರುತ್ತದೆ. ಸದ್ಯಕ್ಕೆ ಈ ಕಲೆಗಳು ಸೋಶಿಯಲ್ ಮೀಡಿಯಾದ ಜಗತ್ತಿನಿಂದಾಗಿ ಎಲ್ಲರೆದುರು ಬರುತ್ತಿವೆ. ಇಂಥ ಕಲೆಗಳನ್ನು ನೋಡಿದಾಗ ಸಹಜವಾಗಿ ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ.

ಈಗ ಇಲ್ಲಿ ನೋಡಲಿರುವ ವಿಡಿಯೋದಲ್ಲಿ ಸಹ ಆಶ್ಚರ್ಯ ಉಂಟು ಮಾಡುವ ದೃಶ್ಯ ನಿಮ್ಮ ಕಣ್ಣ ಮುಂದೆ ಕಾಣಲಿದೆ. ವಿಡಿಯೋದಲ್ಲಿ ಕಂಡು ಬರುವ ಹಾಗೆ ಮನೆಯಲ್ಲಿ ಮಹಿಳೆಯೊಬ್ಬಳು ತನ್ನ ಎರಡು ಕಾಲುಗಳನ್ನು ಮೇಲೆ ಮಾಡಿ ಮಲಗುತ್ತಾಳೆ. ನಂತರ ಬೇರೆ ಮಹಿಳೆಯೊಬ್ಬಳು ಟೇಬಲ್ ಒಂದನ್ನು ಎತ್ತಿ ಆಕೆಯ ಕಾಲುಗಳ ಮೇಲೆ ಇಡುತ್ತಾಳೆ. ಆಯ್ತು ಶುರುವಾಗುತ್ತದೆ ಟೇಬಲ್ ಆಟ. ಒಂದು ಚಿಕ್ಕ ಟೇಬಲ್ ಮೇಲೆ ಮಲಗಿದ ಮಹಿಳೆ ತನ್ನ ಕಾಲುಗಳ ಮೇಲೆ ಹಿಡಿದ ಟೇಬಲ್ ನ್ನು ಯಾವ ರೀತಿ ಆಡಿಸುತ್ತಾಳೆ ಎಂಬುದನ್ನು ಹೇಳುವುದು ಅಸಾಧ್ಯ. ಆ ಟೇಬಲ್ ನ್ನು ಫುಟ್ಬಾಲ್ ತರ ಟ್ರೀಟ್ ಮಾಡುತ್ತಾಳೆ. ಅದಕ್ಕೆ ತನ್ನ ಎರಡು ಕಾಲಗಳ ಮೇಲೆ ಹೇಗೆ ಬೇಕೋ ಹಾಗೆ ಗಣಿಮಿಣಿ ಗಣಿಮಿಣಿಯಾಗಿ ಆಡಿಸುತ್ತಾಳೆ. ಇದನ್ನು ನೋಡುವುದೇ ಒಂದು ಅದ್ಭುತವಾಗಿ ಬಿಡುತ್ತದೆ. ಜನ ಯಾವ ಯಾವ ರೀತಿಯ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ ಮತ್ತು ಇನ್ನೂ ಏನೇನು ನೋಡುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ.

ನೋಡಿ ಈ ವಿಡಿಯೋ…

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ leialy_baghdad ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಗಟ್ಟಲೆ ಜನರು ನೋಡಿದ್ದಲ್ಲದೆ ಲಕ್ಷಾವಧಿ ಜನರು ಲೈಕ್ ಮಾಡಿದ್ದಾರೆ.

Leave a Comment

Your email address will not be published. Required fields are marked *