ಭಾರತದಲ್ಲಿ ಟ್ಯಾಲೆಂಟ್ ಗೇನೂ ಇಲ್ಲ ಕಮ್ಮಿ! ಸೈಕಲ್ ನ್ನೇ ಬೈಕ್ ನಲ್ಲಿ ಪರಿವರ್ತನೆ ಮಾಡಿದ್ದು ನೋಡಿ….
ಸೋಶಿಯಲ್ ಮೀಡಿಯಾದ ಈ ಜಗತ್ತಿನಲ್ಲಿ ಯಾವುದೇ ಒಬ್ಬ ವ್ಯಕ್ತಿಯು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಮಾಡಿದ ಒಂದು ಐಡಿಯಾ ಅಥವಾ ಆವಿಷ್ಕಾರ ಕ್ಷಣದಲ್ಲಿ ಜಗತ್ತಿನ ತುಂಬ ಪಸರಿಸಲು ಸಮಯ ಬೇಕಾಗುವುದಿಲ್ಲ. ಸದ್ಯ ಇಲ್ಲಿ ನೋಡಲಿರುವ ವೈವಿಧ್ಯಮಯ ಸಾಧನೆಯೊಂದು ನೋಡಿದಾಗ ತಯಾರು ಮಾಡಿದ ವ್ಯಕ್ತಿಯ ಬಗ್ಗೆ ಹೆಮ್ಮೆ ಹುಟ್ಟುತ್ತದೆ.
ಪ್ರಸ್ತುತ ವಿಡಿಯೋದಲ್ಲಿ ಒಂದು ಸೈಕಲ್ ರೂಪದಲ್ಲಿ ಬೈಕ್ ಕಂಡುಬರುತ್ತಿದೆ. ಈ ದೃಶ್ಯ ನ್ಯಾಷನಲ್ ಹೈವೇ 4 (ಪುಣೆ-ಬೆಂಗಳೂರು) ಮೇಲಿನದ್ದಾಗಿದೆ. ಪುಣೆ ಮತ್ತು ಸಾತಾರ ಮಧ್ಯದಲ್ಲಿ ನಿಂತಾಗ ವ್ಯಕ್ತಿಯೊಬ್ಬನಿಗೆ ಸೈಕಲ್ ಗೆ ಅಳವಡಿಸಿದ ಬೈಕ್ ಎಂಜಿನ್ ನೋಡಿ ವಿಶೇಷವೆನಿಸಿ ವಿಡಿಯೋ ಮಾಡಿದ್ದಾನೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋದಲ್ಲಿ ಕಂಡು ಬರುವ ಹಾಗೆ ಸೈಕಲ್ ಗೆ ಹೀರೋ ಹೋಂಡಾ ಬೈಕಿನ 100cc ಎಂಜಿನ್ ನ್ನು ಸೈಕಲ್ಲಿಗೆ ಅಳವಡಿಸಿ ಪೆಟ್ರೋಲ್ ಟ್ಯಾಂಕ್ ಮೇಲಿನ ಬಾರ್ ಗೆ ಅಟ್ಯಾಚ್ ಮಾಡಿದ್ದಾನೆ ಅದು ವಿತ್ ಗೇರ್. ಜೊತೆಗೆ ಬ್ರೇಕ್ ಗಳನ್ನು ಸಹ ಸೆಟ್ ಮಾಡಿದ್ದಾನೆ. ಹೇಗಿದೆ ಸಾರ್ ಮೈಂಡ್? ನಿಜಕ್ಕೂ ಭಾರತದಲ್ಲಿ ಟ್ಯಾಲೆಂಟ್ ಗೆ ಏನೂ ಕಮ್ಮಿ ಇಲ್ಲ ಅಲ್ವಾ?
ವೀಡಿಯೋ ನೋಡಿ
View this post on Instagram
ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಲ್ಲದೆ ಸುಮಾರು 6 ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ.