Video; ನೀವು ಈ ಮಗುವಿನ ಸ್ಥಾನದಲ್ಲಿದ್ದರೆ ನಿಮ್ಮ ಮೈಂಡ್ ಈ ರೀತಿ ವರ್ಕೌಟ್ ಮಾಡುತ್ತಿತ್ತೆ?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಮಕ್ಕಳ ವಿಡಿಯೋಗಳು ಕೆಲವೊಮ್ಮೆ ನೆಟ್ಟಿಗರಿಗೆ ಆಶ್ಚರ್ಯವನ್ನು ಉಂಟುಮಾಡುತ್ತವೆ. ಮಕ್ಕಳ ಮೈಂಡ್ ಈ ರೀತಿ ಓಡುತ್ತದೆಯೇ ಎಂಬ ಪ್ರಶ್ನೆ ಈ ವಿಡಿಯೋ ನೋಡಿದ ನಂತರ ಹುಟ್ಟುತ್ತದೆ. ಸದ್ಯ ಇಲ್ಲಿ ನೋಡುವ ಇದೇ ರೀತಿಯ ಒಂದು ವಿಡಿಯೋ ನಮ್ಮ ಮನದಲ್ಲಿ ಯೋಚಿಸುವಂತೆ ಮಾಡುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ ಒಂದು ದೊಡ್ಡದಾದ ಬಾಸ್ಕೆಟ್ನಲ್ಲಿ ವಿವಿಧ ರೀತಿಯ ಮಕ್ಕಳ ಆಟಿಕೆ ಸಾಮಾನುಗಳನ್ನು ಮತ್ತು ತಿಂಡಿ ತಿನಿಸುಗಳನ್ನು ಪ್ಯಾಕ್ ಮಾಡಿ ಬಾಕ್ಸ್ ನಲ್ಲಿ ಸಂಗ್ರಹಿಸಲಾಗಿದೆ. ಅಲ್ಲಿ ಮಕ್ಕಳನ್ನು ರೋಪ್ ಮೂಲಕ ಕೆಳಗೆ ಇಳಿಸಲಾಗುತ್ತಿದೆ. ಮಕ್ಕಳು ತಮ್ಮ ಕೈಯಿಂದ ಸಾಧ್ಯವಾದಷ್ಟು ಅಲ್ಲಿಯ ಗಿಫ್ಟ್ ಪೆಟ್ಟಿಗೆಗಳನ್ನು ಸಂಗ್ರಹಿಸಿ ತಮಗೆ ತೆಗೆದುಕೊಳ್ಳಬಹುದಾಗಿದೆ. ಈ ಆಟದಲ್ಲಿ ಭಾಗಿಯಾದ ಹುಡುಗಿಯೊಬ್ಬಳು ಸೂಪರ್ ಮೈಂಡ್ ಓಡಿಸಿದ್ದಾಳೆ. ಆಕೆ ಅಲ್ಲಿಂದ ಸಾಧ್ಯವಾದಷ್ಟು ಬಾಕ್ಸ್ ಗಳನ್ನು ಕೊಳ್ಳೆ ಹೊಡೆಯಲು ತನ್ನದೇ ಆದ ಐಡಿಯಾ ಕಾರ್ಯರೂಪಕ್ಕೆ ತಂದಿದ್ದಾಳೆ. ಈ ಐಡಿಯಾ ಚೆನ್ನಾಗಿಯೇ ವರ್ಕ್ ಔಟ್ ಆಗಿದ್ದನ್ನು ನಾವಿಲ್ಲಿ ನೋಡಬಹುದು. ಹುಡುಗಿಯು ಬಾಸ್ಕೆಟ್ ನಲ್ಲಿ ರೋಪ್ ಮುಖಾಂತರ ಕೆಳಗೆ ಇಳಿಯುತ್ತಲೇ ಮೊದಲು ಒಂದು ವಸ್ತುವನ್ನು ತನ್ನ ಬಾಯಿಯಲ್ಲಿ ಕಚ್ಚಿ ಹಿಡಿಯುತ್ತಾಳೆ. ನಂತರ ಇನ್ನೂ ಕೆಲವು ಬಾಕ್ಸ್ ಗಳನ್ನು ಎರಡೂ ಕೈಗಳನ್ನು ಅಗಲಿಸಿ, ಸಾಧ್ಯವಾದಷ್ಟು ಬಾಚಿಕೊಳ್ಳಲು ಪ್ರಯತ್ನಿಸುತ್ತಾಳೆ. ಯಾವಾಗ ಅಲ್ಲಿಯ ರೋಪ್ ಆಕೆಯನ್ನು ಮೇಲೆತ್ತುತ್ತದೆ ಆಗ ಗೊತ್ತಾಗುತ್ತದೆ ಆಕೆ ಇನ್ನೊಂದು ಸೂಪರ್ ಐಡಿಯಾ ಯೂಸ್ ಮಾಡಿದ್ದು ನಮ್ಮ ಗಮನಕ್ಕೆ ಬರುತ್ತದೆ. ತನ್ನ ಎರಡು ಕಾಲುಗಳಿಂದಲೂ ಈ ಮುದ್ದು ಹುಡುಗಿ ಕೆಲವು ಗಿಫ್ಟ್ ನ ಬಾಕ್ಸ್ ಗಳನ್ನು ತನ್ನ ಜೊತೆಗೆ ತೆಗೆದುಕೊಂಡು ಬಂದದ್ದನ್ನು ಗಮನಿಸಬಹುದಾಗಿದೆ. ಈ ಜಾಣ ಹುಡುಗಿ ಅತೀ ಹೆಚ್ಚು ಗಿಫ್ಟ್ ಬಾಕ್ಸಗಳನ್ನು ಕೊಳ್ಳೆಹೊಡೆಯಲು ಉಪಯೋಗಿಸಿದ ಈ ಐಡಿಯಾ ಹೇಗಿದೆ ಹೇಳಿ, ಸೂಪರ್ ಅಲ್ವಾ? ಒಂದು ವೇಳೆ ನೀವು ಈ ಆಟದಲ್ಲಿ ಭಾಗವಹಿಸಿದ್ದರೆ ಈ ರೀತಿಯ ಐಡಿಯಾ ನಿಮ್ಮ ತಲೆಯಲ್ಲಿ ಹೊಳೆಯುತ್ತಿತ್ತೆ?

ವೀಡಿಯೋ ನೋಡಿ

 

View this post on Instagram

 

A post shared by Tiktok Trendys (@tiktok.trendys)

ಪ್ರಸ್ತುತ ಮಗುವಿನ ಜಾಣ್ಮೆ ತೋರಿಸುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಟಿಕ್ ಟಾಕ್ ಟ್ರೆಂಡಿಸ್ ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 1.3 ಮಿಲಿಯನ್ ಲೈಕ್ಸ್ ಗಳನ್ನು ಪಡೆದಿದೆ.