Video: ನ್ಯೂಜಿಲ್ಯಾಂಡ್ ವಿರುದ್ಧ ಪಾಕಿಸ್ತಾನದ ಗೆಲುವಿನ ಖುಷಿಯಲ್ಲಿ ಪಟಪಟನೆ ಫ್ಲಾಯಿಂಗ್ ಕಿಸ್ ಹಂಚಿದಳು ಮಿಸ್ಟ್ರಿ ಗರ್ಲ್!

T -20 ವಿಶ್ವಕಪ್ ನ ನಿನ್ನೆ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ನ್ನು ಸೋಲಿಸಿ ಫೈನಲ್ ಹಣಾಹಣಿಗೆ ಸೆಡ್ಡು ಹೊಡೆದು ನಿಂತಿದೆ. ಒಂದು ಸಮಯ ವರ್ಲ್ಡ್ ಕಪ್ ನಿಂದಲೇ ನಿರ್ಗಮನವಾಗುವ ಹಂತದಲ್ಲಿದ್ದ ಪಾಕಿಸ್ತಾನ ಫೈನಲ್ ಹಂತಕ್ಕೆ ಎಂಟ್ರಿ ಮಾಡುತ್ತದೆ ಎಂದು ಯಾರೂ ಆಶಿಸಿರಲಿಲ್ಲ. ನ್ಯೂಜಿಲ್ಯಾಂಡ್ ತಂಡದ ವರ್ಲ್ಡ್ ಕಪ್ ಗೆಲ್ಲುವ ಕನಸು ಮತ್ತೊಮ್ಮೆ ನುಚ್ಚುನೂರಾಯಿತು. ಇಂದು ನಡೆಯಲಿರುವ ಎರಡನೆಯ ಸೆಮಿಫೈನಲ್ ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಗೆಲವು ದಾಖಲಿಸಿದ ತಂಡ ರವಿವಾರದಂದು ಪಾಕಿಸ್ತಾನದ ಜೊತೆಗೆ ಸೆಣಸಲಿದೆ.

ಸದ್ಯ ಮೊದಲ ಸೆಮಿಯಲ್ಲಿ ಮ್ಯಾಚ್ ನೋಡಲು ಬಂದ ಮಿಸ್ಟ್ರಿ ಗರ್ಲ್ ಎಂದೇ ಖ್ಯಾತಿ ಪಡೆದ ಪಾಕಿಸ್ತಾನ ಅಭಿಮಾನಿಯ ಫೋಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ ಪಾಕಿಸ್ತಾನದ ಈ ಮಿಸ್ಟ್ರಿ ಗರ್ಲ್ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾಳೆ. ಇದೇ ಸಂದರ್ಭದಲ್ಲಿಯ ವಿಡಿಯೋ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ಮಿಸ್ಟ್ರಿ ಗರ್ಲ್ ಳು ಒಂದರ ನಂತರ ಒಂದು ಫ್ಲಾಯಿಂಗ್ ಕಿಸ್ ನೀಡುತ್ತಿದ್ದಾಳೆ. ಆಕೆಯ ಈ ಬಿಂದಾಸ್ ಸ್ಟೈಲ್ ನೆಟ್ಟಿಗರಿಗೆ ಸಖತ್ ಇಷ್ಟವಾಗಿದೆ.

ನೋಡಿ ಈ ವಿಡಿಯೋ…

ಬರೀ ಅದೃಷ್ಟದ ಮುಖಾಂತರವೇ ಸೆಮಿ ಫೈನಲ್ ಪ್ರವೇಶ ಮಾಡಿದ ಪಾಕಿಸ್ತಾನ ತಂಡ ಸೆಮಿ ಫೈನಲ್ ನಲ್ಲಿ ಮಾತ್ರ ನ್ಯೂಜಿಲ್ಯಾಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿತು. ತಂಡದ ಓಪನರ್ ಗಳಿಬ್ಬರು ಫಾರ್ಮ್ ನಲ್ಲಿ ಮರಳಿದ್ದಾರೆ. ಬಾಬರ್ ಮತ್ತು ರಿಜ್ವಾನ್ 76 ಎಸೆತಗಳಲ್ಲಿ 105 ರನ್ ಗಳ ಜೋಡಣೆಯನ್ನು ಮಾಡಿ ಫೈನಲ್ ಬರುವ ಬೇರೆ ತಂಡಕ್ಕೆ ಸಖತ್ ಅಲರ್ಟ್ ಮಾಡಿದ್ದಾರೆ ಎನ್ನಬಹುದು.